ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

80ರ ಸಂಭ್ರಮದಲ್ಲಿ ಬೆಂಗಳೂರಿನ ಟೌನ್‌ಹಾಲ್

|
Google Oneindia Kannada News

ಬೆಂಗಳೂರು, ಸೆ. 11 : ಮಹಾನಗರ ಬೆಂಗಳೂರಿನ ಪ್ರಮುಖ ಪ್ರಾರಂಪರಿಕ ಕಟ್ಟಡ ಟೌನ್‌ಹಾಲ್‌ಗೆ ಗುರುವಾರ 80ರ ಸಂಭ್ರಮ. ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ವೇದಿಕೆ ಹಾಗೂ ಪ್ರತಿಭಟನೆ ನಡೆಸುವವರ ಪ್ರಮುಖ ಸ್ಥಳವಾದ ಟೌನ್‌ಹಾಲ್‌ಅನ್ನು 1935ರ ಸೆ.11ರಂದು ಉದ್ಘಾಟಿಸಲಾಗಿತ್ತು.

ಬೆಂಗಳೂರು ನಗರ ಸಭೆಯ ಮೊದಲ ಅಧ್ಯಕ್ಷರಾಗಿದ್ದ ಸರ್.ಕೆ.ಪಿ.ಪುಟ್ಟಣ್ಣ ಚೆಟ್ಟಿ ಅವರ ಹೆಸರನ್ನು ಇದಕ್ಕೆ ಇಡಲಾಗಿದ್ದು, ಟೌನ್‌ಹಾಲ್‌ ಎಂದು ಪ್ರಸಿದ್ಧಿ ಪಡೆದಿದೆ. 80ರ ಸಂಭ್ರಮದಲ್ಲಿರುವ ಪುರಭವನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, 5 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ.

KP Puttana Chetty

ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಸೆ.11, 1935 ರಂದು ಟೌನ್‌ಹಾಲ್‌ಅನ್ನು ಉದ್ಘಾಟಿಸಿದ್ದರು. ಸುಮಾರು 1.75 ಲಕ್ಷ ವೆಚ್ಚದಲ್ಲಿ ಈ ಕಟ್ಟಡವನ್ನು ಅಂದು ನಿರ್ಮಿಸಲಾಗಿತ್ತು. ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಮಹಮದ್ ಇಸ್ಮಾಯಿಲ್ ನೇತೃತ್ವದಲ್ಲಿ ಕಟ್ಟಡದ ನಿರ್ಮಾಣ ಕಾರ್ಯ ನಡೆದಿತ್ತು.[ಪುರಭವನ ನವೀಕರಣಕ್ಕೆ ಚಾಲನೆ]

ಎರಡು ಮಹಡಿಗಳ ಟೌನ್‌ಹಾಲ್ 1,038 ಆಸನ ವ್ಯವಸ್ಥೆಗಳನ್ನು ಒಳಗೊಂಡಿದೆ. ಟೌನ್‌ಹಾಲ್ ಪಕ್ಕದಲ್ಲಿ ರವೀಂದ್ರ ಕಲಾ ಕ್ಷೇತ್ರ ನಿರ್ಮಾಣಗೊಳ್ಳುವ ತನಕ ಬೆಂಗಳೂರಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಮುಖ್ಯ ವೇದಿಕೆಯಾಗಿತ್ತು. ಈಗಾಗಲೇ ಎರಡು ಬಾರಿ ಟೌನ್‌ಹಾಲ್ ನವೀಕರಣಗೊಂಡಿದ್ದು, ಮೂರನೇ ಬಾರಿ 5 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. [ಪುರಭವನ ಅಡವಿಡಲು ಸಿದ್ಧತೆ]

ಟೌನ್‌ಹಾಲ್ ಒಳಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾದರೆ ಹೊರಭಾಗ ಪ್ರತಿಭಟನೆಗಳಿಗೆ ಧ್ವನಿಯಾಗಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸುವ ಹಲವಾರು ಸಂಘ ಸಂಸ್ಥೆಗಳಿಗೆ ಟೌನ್‌ಹಾಲ್ ಪ್ರಮುಖ ಸ್ಥಳವಾಗಿದೆ. 2014ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಟೌನ್‌ಹಾಲ್‌ ಅನ್ನು ಬ್ಯಾಂಕ್‌ಗೆ ಅಡವಿಡುವ ತೀರ್ಮಾನ ಕೈಗೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. [ಪುರಭವನಕ್ಕೆ ಆಧುನಿಕ ಟಚ್]

ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 5 ಕೋಟಿ ವೆಚ್ಚದಲ್ಲಿ ಟೌನ್‌ಹಾಲ್ ನವೀಕರಣ ಕಾರ್ಯ ಕೈಗೊಂಡಿದೆ. ಎರಡು ತಿಂಗಳಿನಿಂದ ಈ ಕಾರ್ಯ ನಡೆಯುತ್ತಿದ್ದು, ಇನ್ನೊಂದು ತಿಂಗಳಿನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ಆರಂಭವಾಗಲಿವೆ.

English summary
Bangalore city’s imposing architectural structures, the Sir K.P. Puttana Chetty Town Hall, popularly called the Town Hall, will turn 80 on Thursday. Sri Kanteerava Narasimharaja Wadiyar inaugurated it on September 11, 1935.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X