ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೂಲದ ಕವಿಗೆ ಪುಲಿಟ್ಜರ್ ಪ್ರಶಸ್ತಿ

By Mahesh
|
Google Oneindia Kannada News

ನ್ಯೂಯಾರ್ಕ್, ಏ.15: ಭಾರತ ಸಂಜಾತ ವಿಜಯ ಶೇಷಾದ್ರಿ ಅವರಿಗೆ ಕಾವ್ಯ ವಿಭಾಗದಲ್ಲಿ ಪ್ರತಿಷ್ಠಿತ 2014ರ ಪುಲಿಟ್ಜರ್ ಪ್ರಶಸ್ತಿ ದೊರಕಿದೆ. 60 ವರ್ಷದ ವಿಜಯ್ ಶೇಷಾದ್ರಿ ಅವರ '3 ಸೆಕ್ಷನ್ಸ್' ಎಂಬ ಶೀರ್ಷಿಕೆಯ ಕವನ ಸಂಕಲನವು ಈ ಪ್ರಶಸ್ತಿಗೆ ಪಾತ್ರವಾಗಿದೆ.

ಕೊಲಂಬಿಯಾ ವಿಶ್ವವಿದ್ಯಾಲಯವು ಪತ್ರಿಕೋದ್ಯಮ, ಸಾಹಿತ್ಯ, ನಾಟಕ ಮತ್ತು ಸಂಗೀತಕ್ಕಾಗಿರುವ 98ನೇ ವರ್ಷದ ಪುಲಿಟ್ಜರ್ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಿದೆ. ಶೇಷಾದ್ರಿ ಅವರ '3 ಸೆಕ್ಷನ್ಸ್' ಕವನ ಸಂಕಲನವು ಮನುಷ್ಯನ ಹುಟ್ಟಿನಿಂದ ಸಾವಿನ ತನಕದ ಅವಧಿಯಲ್ಲಿ ವ್ಯಕ್ತವಾಗುವ ಭಾವನೆಗಳನ್ನು, ಧ್ವನಿಗಳನ್ನು ಕ್ರಮಪ್ರಕಾರವಾಗಿ ಪರೀಕ್ಷಿಸುವಂತಿದ್ದು ಅದು ಅತ್ಯಂತ ಘನ ಗಂಭೀರವಾಗಿದೆ ಎಂದು ಹೇಳಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯೂ ಆಗಿರುವ ಶೇಷಾದ್ರಿ ಅವರು ತಮಗೆ ಒದಗಿರುವ ಪುಲಿಟ್ಜರ್ ಪ್ರಶಸ್ತಿಗಾಗಿ 10,000 ಡಾಲರ್ ‌ಗಳ ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.

Bangalore-born poet wins 2014 Pulitzer Prize

ಶೇಷಾದ್ರಿ ಅವರಿಗೆ ಈ ಮೊದಲೇ ನ್ಯೂಯಾರ್ಕ್ ಪ್ರತಿಷ್ಠಾನದ ಅನುದಾನ ಲಭಿಸಿದೆಯಲ್ಲದೆ ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೂಡ ದೊರಕಿವೆ. ಇವರು ಪುಲಿಟ್ಜರ್ ಪ್ರಶಸ್ತಿ ಪಡೆದಿರುವ ಐದನೇ ಭಾರತೀಯರಾಗಿದ್ದಾರೆ. 1937ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತರಾಗಿದ್ದ ಗೋವಿಂದ ಬಿಹಾರಿ ಲಾಲ್ ಅವರು ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸಾಹಿತಿ. ನಂತರ ಇಂಡೋ ಅಮೆರಿಕನ್ ಲೇಖಕಿ ಝಂಪಾ ಲಹಿರಿ ಅವರು 2000ರಲ್ಲಿ Interpreters of Maladies ಕೃತಿಗೆ ಪ್ರಶಸ್ತಿ ಗಳಿಸಿದರು. 2003ರಲ್ಲಿ ಗೀತಾ ಆನಂದ್, 2011ರಲ್ಲಿ ಸಿದ್ದಾರ್ಥ್ ಮುಖರ್ಜಿ ಅವರು ಕ್ಯಾನ್ಸರ್ ಬಗ್ಗೆ ಬರೆದ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ಹುಟ್ಟಿದ ವಿಜಯ್ ಶೇಷಾದ್ರಿ ಐದನೇ ವಯಸ್ಸಿಗೆ ಅಮೆರಿಕಕ್ಕೆ ಕಾಲಿಟ್ಟಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂಎಫ್ಎ ಪದವಿ ಪಡೆದಿರುವ ಶೇಷಾದ್ರಿ ಸದ್ಯಕ್ಕೆ ಬ್ರೂಕ್'ಲಿನ್'ನಲ್ಲಿನ ಸಾರಾ ಲಾರೆನ್ಸ್ ಕಾಲೇಜಿನಲ್ಲಿ ಸಾಹಿತ್ಯದ ಬೋಧನೆ ಮಾಡುತ್ತಿದ್ದಾರೆ. 1996ರಲ್ಲಿ ಇವರು ಬರೆದ Long Meadow and Wild Kingdom ಕವನ ಸಂಕಲನಕ್ಕೆ ಜೇಮ್ಸ್ ಲಾಫ್ಲಿನ್ ಪ್ರಶಸ್ತಿ ಬಂದಿದೆ. 1997 ಹಾಗೂ 2003ರಲ್ಲಿ ಇವರ ಕವನಗಳನ್ನು ಅಮೆರಿಕದ ಶ್ರೇಷ್ಠ ಕವನಗಳು ಎಂದು ಘೋಷಿಸಲಾಗಿತ್ತು.

English summary
Bangalore-born poet Vijay Seshadri has won the prestigious 2014 Pulitzer Prize in the poetry category for his collection of poems "3 Sections." The 98th annual Pulitzer Prizes in Journalism, Letters, Drama and Music were announced yesterday by Columbia University
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X