ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಆಘಾತ: ಪ್ರಯಾಣಿಕರಿಗೆ ದರ ಏರಿಕೆ ಶಾಕ್

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಲೋಕಸಭಾ ಚುನಾವಣೆಯ ಕಾವು ಇಳಿಯುತ್ತಿದ್ದಂತೆ ಬಿಎಂಟಿಸಿ ಸಂಸ್ಥೆ ಪ್ರಯಾಣಿಕರು ತಮ್ಮ ಜೇಬುಗಳನ್ನು ಮುಟ್ಟಿನೋಡಿಕೊಳ್ಳುವ ಹಾಗೆ ಪ್ರಯಾಣ ದರ ಏರಿಕೆ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದೆ.

ಇದುವರೆಗೂ ರೂ ಹತ್ತು ಇಪ್ಪತ್ತರ ಪ್ರಮಾಣದಲ್ಲಿ ಪ್ರಯಾಣ ದರ ಏರಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿಢೀರನೇ ಶೇ 15ರಷ್ಟು ಹೆಚ್ಚಿಸಿದೆ. ಹೊಸ ದರ ಹೆಚ್ಚಳದಿಂದ ಸಂಸ್ಥೆಗೆ 240 ಕೋಟಿ ರೂ ಆದಾಯ ಹೆಚ್ಚಲಿದೆ. ಈ ಹೊಸ ದರಗಳು ನಿನ್ನೆ ಗುರುವಾರ ಮಧ್ಯ ರಾತ್ರಿಯಿಂದಲೇ ಚಾಲ್ತಿಗೆ ಬಂದಿದೆ. ಪ್ರಯಾಣಿಕರಿಗೆ ಇಂದು ಬೆಳಗ್ಗೆಯಿಂದ (ಶುಕ್ರವಾರ) ದರ ಏರಿಕೆ ಅನುಭವಕ್ಕೆ ಬರಲಿದೆ.

ಬೆಳ್ಳಂಬೆಳಗ್ಗೆಯೇ ಬಸ್ ಹತ್ತಿದವರು ಹೆಚ್ಚು ಹಣ ಕೇಳಿದ ಕಂಡಕ್ಟರ್ ಮೇಲೆ ಮುಗಿಬಿದ್ದಿದ್ದಾರೆ. ಗೊಣಗುತ್ತಲೇ ಬಸ್ ಇಳಿದು ಹೋಗಿದ್ದಾರೆ. ಒಟ್ಟಾರೆಯಾಗಿ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೋಡಬೇಕು ದಿನವೇರುತ್ತಿದ್ದಂತೆ ಪ್ರಯಾಣಿಕರು ಇದಕ್ಕೆ ಹೇಗೆ ರಿಯಾಕ್ಟ್ ಮಾಡುತ್ತಾರೆಂದು. ( ಪುಷ್ಪಕ್ ಬಸ್: ಕೊನೆಗೂ ಎಚ್ಚೆತ್ತ ಬಿಎಂಟಿಸಿ )

Bangalore BMTC fare hike- Commuters show anger
ಈ ಹಿಂದೆ ಸಾಮಾನ್ಯ ಬಸ್ಸುಗಳಲ್ಲಿ ಕನಿಷ್ಠ ದರ ರೂ 5 ಆಗಿತ್ತು. ಇದು ಒಂದು ರೂ ಹೆಚ್ಚಾಗಿ ನೂತನ ದರ 6 ರೂ ಆಗಿದೆ. ವೋಲ್ವೊ ಸೇರಿದಂತೆ ಹವಾನಿಯಂತ್ರಿತ ಬಸ್ಸುಗಳ ಕನಿಷ್ಠ ದರ ರೂ 10 ಆಗಿತ್ತು. ನೂತನ ದರ 15 ರೂ ಆಗಲಿದೆ.

ಬಸ್‌ ಪಾಸ್ ಪ್ರಯಾಣಿಕರಿಗೆ ಭಾರಿ ಹೊಡೆತ:
ಬಿಎಂಟಿಸಿ ಬಸ್‌ ಪಾಸುಗಳ ದರವನ್ನು ನೂರರ ಲೆಕ್ಕದಲ್ಲಿ ಏರಿಸಿಬಿಟ್ಟಿದೆ. ಸಂಸ್ಥೆಯು ನಷ್ಟದ ಹಾದಿಯಲ್ಲಿ ಅದನ್ನು ಸರಿದೂಗಿಸಲು ಶೇ 17ರಷ್ಟು ದರ ಏರಿಕೆಗೆ ಅನುಮತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ ಸರಕಾರವು ಶೇ 15 ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.

ಸಂಸ್ಥೆಯ ವಾದವೇನು?
ಪ್ರತಿ ತಿಂಗಳೂ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 60 ಪೈಸೆ ಹೆಚ್ಚಾಗ್ತಿದೆ. ಜತೆಗೆ ಸಿಬ್ಬಂದಿ ತುಟ್ಟಿ ಭತ್ಯೆ ಹೆಚ್ಚಳ, ವಾಹನದ ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ದರ ಏರಿಕೆ ಅನಿವಾರ್ಯ ಎಂದು ಬಿಎಂಟಿಸಿ ಸಂಸ್ಥೆ ತಿಳಿಸಿದೆ.

ಡೀಸೆಲ್ ದರ ಏರಿಕೆಯಿಂದ 140 ಕೋಟಿ ರೂ, ಸಿಬ್ಬಂದಿ ವೇತನ ಹೆಚ್ಚಳದಿಂದ 100 ಕೋಟಿ ರೂ, ಸಂಸ್ಥೆಯ ಇತರೆ ವೆಚ್ಚಕ್ಕಾಗಿ 60 ಕೋಟಿ ರೂ ವ್ಯಯವಾಗುತ್ತಿದೆ. ಇದರಿಂದ ಸಂಸ್ಥೆಯ ಮೇಲೆ ವಾರ್ಷಿಕವಾಗಿ ಹೆಚ್ಚುವರಿ 300 ಕೋಟಿ ರೂ ಹೊರೆ ಬೀಳುತ್ತಿದೆ. ಈಗಾಗಲೇ ಸಂಸ್ಥೆ 140 ಕೋಟಿ ರೂ ಸಾಲದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದರ ಹೆಚ್ಚಳದಿಂದ ಸಂಸ್ಥೆಗೆ 240 ಕೋಟಿ ರೂ ಆದಾಯ ಬರಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಕೆಎಸ್‌ಆರ್ ಟಿಸಿ ದರವೂ ಹೆಚ್ಚಳ?:
ಬಿಎಂಟಿಸಿ ದರ ಏರಿಕೆ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ) ಕೂಡ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ. ಗರಿಷ್ಠ ಶೇ. 20ರವರೆಗೆ ಕೆಎಸ್‌ಆರ್ ಟಿಸಿ ಪ್ರಯಾಣ ದರ ಹೆಚ್ಚಳ ಮಾಡುವ ಸಂಬಂಧದ ಪ್ರಸ್ತಾವನೆ ಸಾರಿಗೆ ಇಲಾಖೆ ಮುಂದಿದೆ.

English summary
In view of increasing diesel prices, Bangalore Metropolitan Transport Corporation (BMTC) has increased the fares bus journey. The hike is effective from April 24th mid night says a BMTC release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X