ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಹೊಸ ಪೊಲೀಸ್ ಆಯುಕ್ತರ ಭರವಸೆಗಳು

By Ashwath
|
Google Oneindia Kannada News

ಬೆಂಗಳೂರು, ಜು.22: ನಗರದ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಮೊದಲ ಆದ್ಯತೆ. ಸಾರ್ವ‌ಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ. ಪ್ರತಿ ಶಾಲೆಯಲ್ಲಿ ನೋಡಲ್‌ ಅಧಿಕಾರಿ ನೇಮಕ.

ಇವು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್‌ ಸುಬ್ಬರೆಡ್ಡಿ ಜನರಿಗೆ ನೀಡಿದ ಭರವಸೆಗಳು.

ನಗರ ಪೊಲೀಸ್‌ ಆಯುಕ್ತರ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ ಎಂಎನ್‌ ರೆಡ್ಡಿ, ಕಾನೂನು ಬಾಹಿರವಾಗಿ ಭೂ ಅಕ್ರಮದಲ್ಲಿ ತೊಡಗಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಸಾರ್ವ‌ಜನಿಕರು ಸಲ್ಲಿಸಿದ ದೂರನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸುತ್ತೇನೆ. ಅದರಲ್ಲೂ ಮಹಿಳೆಯರ ವಿಚಾರದಲ್ಲಿ ನಿರ್ಲಕ್ಷ್ಯತನ ತೋರಿದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.[ನಗರ ಪೊಲೀಸ್ ಆಯುಕ್ತ ರಾಘವೇಂದ್ರ ವರ್ಗ]

MN Reddy
ನಗರ ಪೊಲೀಸ್‌ ಆಯುಕ್ತ ಸುಬ್ಬರೆಡ್ಡಿ ಜನರಿಗೆ ನೀಡಿದ ಭರವಸೆಗಳು

ರೌಡಿಗಳನ್ನು ನಿಯಂತ್ರಿಸಲು ಕ್ರಮ:
*ರೌಡಿಗಳು ಹಾಗೂ ಗೂಂಡಾಗಳ ನಿರ್ಮೂಲನೆಗೆ ಕಠಿಣ ಕ್ರಮ
*ರೌಡಿಗಳ ನಿಗ್ರಹದಲ್ಲಿ ಯಾವುದೇ ಒತ್ತಡಕ್ಕೆ ಬಗ್ಗುವುದಿಲ್ಲ.
* ಕಮ್ಯೂನಿಟಿ ಪೊಲೀಸಿಂಗ್‌‌ ವ್ಯವಸ್ಥೆಗೆ ಹೆಚ್ಚಿನ ಒತ್ತು.
*ಕಾನೂನು ಬಾಹಿರವಾಗಿ ಭೂ ಅಕ್ರಮದಲ್ಲಿ ತೊಡಗಿದ ವ್ಯಕ್ತಿಗಳ ವಿರುದ್ಧ ಕ್ರಮ

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮೊದಲ ಆದ್ಯತೆ:
*ಶಾಲಾ ಮಕ್ಕಳ ಸುರಕ್ಷತೆಗಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಜೊತೆ ಸಭೆ ಕರೆದು ಚರ್ಚೆ‌.
*ಪ್ರತಿ ಶಾಲೆಗೆ ನೋಡಲ್‌ ಅಧಿಕಾರಿ ನೇಮಕ. ಈ ಅಧಿಕಾರಿ ಶಾಲೆಯಿಂದ ಆಯ್ಕೆ ಆಗುತ್ತಾರೆ. ತಿಂಗಳಿಗೊಮ್ಮೆ ಆಯುಕ್ತರ ಅಧ್ಯಕ್ಷತೆಯಲ್ಲಿ ನೋಡಲ್‌ ಅಧಿಕಾರಿಗಳ ಸಭೆ ನಡೆಸಿ ಮಕ್ಕಳ ಸುರಕ್ಷತೆ ಬಗ್ಗೆ ಪರಿಶೀಲಿಸಲಾಗುತ್ತದೆ.
*ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಇನ್ಸ್‌ಪೆಕ್ಟರ್‌ ಮತ್ತು ಸಬ್‌ ಇನ್ಸ್‌ಪೆಕ್ಟರ್‌‌ ನಿಯಮಿತವಾಗಿ ಭೇಟಿ ನೀಡಿ ಮಕ್ಕಳ ಸುರಕ್ಷತೆ ಬಗ್ಗೆ ಪರಿಶೀಲಿಸಬೇಕು.
*ಸಾರ್ವ‌ಜನಿಕರು ಸಲ್ಲಿಸಿದ ದೂರನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ.
* ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ.
*ಮಹಿಳೆಯರ ವಿಚಾರದಲ್ಲಿ ನಿರ್ಲಕ್ಷ್ಯತನ ತೋರಿದರೆ ಸಹಿಸಲಾಗುವುದಿಲ್ಲ.

English summary
MN Reddy was on Monday appointed police commissioner of Bangalore in place of Raghavendra Auradkar, who has been made ADGP of the KSRP. The change of guard seems to be prompted by the wave of protests by Bangaloreans against sexual attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X