ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಪಟಾಕಿ ಅಂಗಡಿ ಇಡಬೇಕೆ, ಅರ್ಜಿ ಸಲ್ಲಿಸಿ

|
Google Oneindia Kannada News

ಬೆಂಗಳೂರು, ಸೆ. 30 : ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಬೆಂಗಳೂರು ಪೊಲೀಸರು ಅರ್ಜಿ ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸಲು ಅ.10 ಕೊನೆಯ ದಿನವಾಗಿದೆ.

ನಗರದ ಆಯ್ದ ಆಟದ ಮೈದಾನಗಳಲ್ಲಿ ಮಳಿಗೆಗಳನ್ನು ತೆರಯಲು ಅವಕಾಶ ಕಲ್ಪಿಸಲಾಗುವುದು. ಆಸಕ್ತಿಯುಳ್ಳ ಸಾರ್ವಜನಿಕರು ರೂ.2,000 ಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಡಿ.ಜಿ.ಪಿ ಮತ್ತು ಡೈರೆಕ್ಟರ್, ಕರ್ನಾಟಕ ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸಸ್, ಬೆಂಗಳೂರು ಅವರಿಗೆ ಹಾಗೂ 1,000 ರೂ.ಗಳ ಪ್ರತ್ಯೇಕ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಅವರಿಗೆ ಸಂದಾಯವಾಗುವಂತೆ ರಾಷ್ಟೀಕೃತ ಬ್ಯಾಂಕ್‍ಗಳಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕಾಗಿದೆ.

Firecracker

ಅರ್ಜಿಯೊಂದಿಗೆ ಇತ್ತೀಚಿನ 2 ಭಾವ ಚಿತ್ರಗಳು, ಅರ್ಜಿದಾರರ ವಾಸ ಸ್ಥಳದ ಬಗ್ಗೆ ವಿಳಾಸ ದೃಡೀಕರಿಸುವ ರೇಷನ್ ಕಾರ್ಡ್/ಟೆಲಿಫೋನ್ ಬಿಲ್/ ಮತದಾರರ ಗುರುತಿನ ಚೀಟಿ ಅಥವ ಇತರ ಯಾವುದೇ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಅರ್ಜಿದಾರರು ಖುದ್ದಾಗಿ ಅರ್ಜಿಯನ್ನು ಅ.6ರಿಂದ 10ರೊಳಗೆ ಉಪ ಪೊಲೀಸ್ ಆಯುಕ್ತರ ಕಛೇರಿ, ಸಿ.ಎ.ಆರ್. (ಕೇಂದ್ರ), ಮೈಸೂರು ರಸ್ತೆ, ಬೆಂಗಳೂರು - 560018 ಇಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು.

ಒಂದು ಕುಟುಂಬದಿಂದ ಯಾವುದೇ ಸದಸ್ಯರು ಒಂದು ಮೈದಾನದ ಪರವಾನಿಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಅದೇ ಮೈದಾನಕ್ಕೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅರ್ಜಿದಾರರು ಟ್ಯಾಕ್ಸ್ ಪೇಯರ್ ಐಡೆಂಟಿಫಿಕೇಷನ್ ನಂಬರ್ ಅನ್ನು ವಾಣಿಜ್ಯ ತೆರಿಗೆ ಇಲಾಖೆಯ Karnataka Valued Added Tax Act, 2003 ರೀತಿ ಪಡೆಯಲು ಸೂಚಿಸಿರುವುದರಿಂದ, ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅರ್ಜಿದಾರನು ಕಡ್ಡಾಯವಾಗಿ ಅರ್ಜಿಯ ಜೊತೆ ಟಿನ್ ನಂಬರ್ ಅನ್ನು ಹೊಂದಿರತಕ್ಕದ್ದು.

ಅ.10ರ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪಟಾಕಿಗಳ ಮಾರಾಟ ಸಂಬಂಧದಲ್ಲಿ ತಾತ್ಕಾಲಿಕ ಪರವಾನಗಿಯನ್ನು ಲಾಟರಿಗಳ ಮೂಲಕ ಹಂಚಿಕೆ ಮಾಡಲಾಗುವುದು ಹಾಗೂ ಅರ್ಜಿ ನಮೂನೆ ಮತ್ತು ಮೈದಾನಗಳ ವಿವರಗಳನ್ನು ಉಪ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಪೊಲೀಸ್ ಆಯುಕ್ತರವರ ಕಛೇರಿ ಹಾಗೂ ಉಪ ಪೊಲೀಸ್ ಆಯುಕ್ತರು. ಸಿ.ಎ.ಆರ್. (ಕೇಂದ್ರ)ವನ್ನು ಸಂಪರ್ಕಿಸಬಹುದಾಗಿದೆ.

English summary
The Bangalore police have invited applications from interested candidates for setting up firecracker stalls in the city during Diwali. Applicants who want to sell firecrackers for Deepavali on a temporary basis within the jurisdiction of The Bruhat Bengaluru Mahanagara Palike (BBMP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X