ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ನಾಡ್, ಅನಂತಮೂರ್ತಿ ಮುಖಮುಚ್ಚಿದ ಬಿಬಿಎಂಪಿ

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 10- ಕುಲಾಧಿಪತಿಯಾಗಿದ್ದುಕೊಂಡು ಡಾ. ಯುಆರ್ ಅನಂತಮೂರ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರುಗಳ ಚುನಾವಣೆ ಸಂದರ್ಭದಲ್ಲಿ ಕಾಮಗ್ರೆಸ್ ಪ್ರಚಾರ ನೇರತವಾಗಿ ಪ್ರಚಾರದಲ್ಲಿ ತೊಡಗಿರುವುದನ್ನು ಆಕ್ಷೇಪಿಸಿ ಬಿಜೆಪಿ ದೂರು ನೀಡಿದ್ದರಿಂದ ಬಿಬಿಎಂಪಿ ಕಚೇರಿಗಳಲ್ಲಿ ಅನಂತಮೂರ್ತಿ ಮತ್ತು ಕಾರ್ನಾಡ್ ಚಿತ್ರಗಳನ್ನು ಬಿಬಿಎಂಪಿ ಮರೆಮಾಚಿದೆ.

ಯಡಿಯೂರು ವಾರ್ಡಿನ ಬಿಬಿಎಂಪಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಅವರು ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿದ್ದರು, ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಎಂ ಲಕ್ಷ್ಮಿನಾರಾಯಣ ಅವರು ಬಿಬಿಎಂಪಿ ಕ್ರಮವನ್ನು ದೃಢೀಕರಿಸಿದ್ದಾರೆ.

Lok Sabha Election 2014 - UR Ananthamurthy- Girish Karnad pictures in BBMP headquarters covered with newspapers
ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರೂ ಆದ ರಮೇಶ್ ಅವರು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿಬಿ ಕಾವೇರಿ ಅವರಿಗೆ ಸಲ್ಲಿಸಿದ ದೂರಿನಲ್ಲಿ ಅನಂತ್ ಮತ್ತು ಕಾರ್ನಾಡ್ ಇಬ್ಬರೂ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ಪಾಲಿಕೆಯ ಆವರಣದಲ್ಲಿ ಅವರ ಫೋಟೋಗಳನ್ನು ಹಾಕಿರುವುದು ಮತದಾರರ ಮೇಲೆ ಪ್ರಭಾಔ ಬೀರಿದಂತಾಗುತ್ತದೆ. ಹಾಗಾಗಿ ಅವುಗಳನ್ನು ತೆಗೆಸಿಹಾಕಬೇಕು ಎಂದು ಅಲವತ್ತುಕೊಂಡಿದ್ದರು.

ದೂರನ್ನು ಪುರಸ್ಕರಿಸಿದ ಬಿಬಿಎಂಪಿ ಇಬ್ಬರೂ ಸಾಹಿತಿಗಳ ಭಾವಚಿತ್ರಗಳನ್ನು ದಿನಪತ್ರಿಕೆಗಳಿಂದ ಮರೆಮಾಚಿದೆ. ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಚೇರಿಗೆ ನೂರಾರು ಜನ ಎಡತಾಕುತ್ತಾರೆ. ಆದರೆ ಅವರ ಕಚೇರಿ ಆವರಣದಲ್ಲೇ ಇತರೆ ಜ್ಞಾನಪೀಠ ಸಾಹಿತಿಗಳ ಸಾಲಿನಲ್ಲಿ ಇವರಿಬ್ಬರ ಚಿತ್ರಗಳೂ ರಾರಾಜಿಸುತ್ತಿದ್ದವು. ಅದನ್ನು ಅಧಿಕಾರಿಯ ಗಮನಕ್ಕೆ ತಂದೆ. ಅವರು ಅದಕ್ಕೆ ತಕ್ಷಣಂ ಸ್ಪಂದಿಸಿ, ಈ ಕ್ರಮ ಕೈಗೊಂಡಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

ಹಾಗಂತ ನನಗೆ ಈ ಇಬ್ಬರೂ ಜ್ಞಾನಪೀಠ ಸಾಹಿತಿಗಳ ಬಗ್ಗೆ ಗೌರವ ಇಲ್ಲಾಂತಲ್ಲ. ಆದರೆ ಚುನಾವಣಾ ನೀತಿ ಸಂಹಿತೆಯನ್ನು ಗೌರವಿಸುವ ದೃಷ್ಟಿಯಿಂದ ಈ ಮನವಿ ಮಾಡಿಕೊಂಡಿದ್ದೆ ಎಂದು ರಮೇಶ್ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಕ್ರಮ ರಾಜ್ಯದ ಇತರ ಭಾಗಗಳಲ್ಲೂ ಜಾರಿಗೆ ಬರುತ್ತದಾ?:
ಇದಕ್ಕೂ ಮೊದಲು ರಾಜ್ಯ ಬಿಜೆಪಿಯೂ 'ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಇಬ್ಬರೂ ಬಹಿರಂಗವಾಗಿಯೇ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಖಂಡಿಸಿ, ಅವರ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರು ನೀಡಿದೆ.

ಕರ್ನಾಟಕದಲ್ಲಿ ರಾಜ್ಯ ಸರಕಾರದ ಅಧೀನದಲ್ಲಿರುವ ಬಸ್ಸುಗಳು, ಬಸ್ ಸ್ಟಾಂಡುಗಳು, ಶಾಲೆಗಳು ಮತ್ತಿತರ ಆಯಕಟ್ಟಿನ ಸ್ಥಳಗಳಲ್ಲಿ ರಾಜ್ಯದ ಎಲ್ಲ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳನ್ನು ಹಾಕಿದೆ. ಪಾರ್ಕು ಮತ್ತು ಪ್ರಮುಖ ಸ್ಥಳಗಳಲ್ಲಿ ಗೋಡೆಗಳ ಮೇಲೂ ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಇವುಗಳನ್ನು ಚುನಾವಣೆ ಮುಗಿಯುವವರೆಗೂ ಮರೆಮಾಚಬೇಕು ಎಂದು ಬಿಜೆಪಿಯು ಆಯೋಗದ ಗಮನ ಸೆಳೆದಿದೆ.

English summary
Lok Sabha Election 2014 - UR Ananthamurthy- Girish Karnad pictures in BBMP headquarters covered with newspapers. The controversy surrounding a section of writers openly campaigning for Congress entered the Bruhat Bengaluru Mahanagara Palike (BBMP) headquarters on Wednesday with the civic body authorities covering the photos of U R Ananthamurthy and Girish Karnad displayed in the corridors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X