ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕನ ಸಮಯಪ್ರಜ್ಞೆ ದುರಂತ ತಪ್ಪಿಸಿತು

|
Google Oneindia Kannada News

ಬೆಂಗಳೂರು ಸೆ. 23 : ಪ್ರಯಾಣಿಕರೊಬ್ಬರ ಸಮಯಪ್ರಜ್ಞೆ ಬಿಎಂಟಿಸಿ ಬಸ್‌ ಚಾಲಕ ಸೇರಿದಂತೆ ಅನೇಕ ಪ್ರಯಾಣಿಕರ ಜೀವ ಉಳಿಸಿದೆ.

28 ವರ್ಷದ ರೇಣುಕಾಪ್ರಸಾದ್‌ ಸೋಮವಾರ ಸಂಜೆ ವಿಲ್ಸನ್‌ ಗಾರ್ಡನ್‌ ಸಮೀಪ ವೋಲ್ವೊ ಬಸ್‌ ಚಾಲನೆ ಮಾಡುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಮುಂಬದಿಯ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ದೇವರಾಜು ಇದನ್ನು ಗಮನಿಸಿದ್ದಾರೆ. ಅಲ್ಲದೇ ನಿಮಗೆ ಏನಾಗುತ್ತಿದೆ? ಎಂದು ತಕ್ಷಣ ಪ್ರಸಾದ್‌ ಬಳಿ ಕೇಳಿದ್ದಾರೆ.(30 ಮಕ್ಕಳ ಪ್ರಾಣ ಉಳಿಸಿತು ಚಾಲಕನ ಸಮಯಪ್ರಜ್ಞೆ)

bmtc

ನನಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ಪ್ರಸಾದ್‌ ಚಾಲನೆಯಲ್ಲಿರುವಾಗಲೇ ಉತ್ತರಿಸಿದ್ದಾರೆ. ತಕ್ಷಣ ಎಚ್ಚೆತ್ತ ದೇವರಾಜು ಬಸ್‌ ನಿಲ್ಲಿಸುವಂತೆ ತಿಳಿಸಿದ್ದಲ್ಲದೇ ಪ್ರಯಾಣಿಕರನ್ನು ಜಾಗೃತಗೊಳಿಸಿದ್ದಾರೆ. ನಂತರ ಎದೆ ನೋವು ಕಾಣಿಸಿಕೊಂಡ ಚಾಲಕ ರೇಣುಕಾ ಪ್ರಸಾದ್‌ ಅವರನ್ನು ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕ ರೇಣುಕಾಪ್ರಸಾದ್‌ ಅವರಿಗೆ ಇಸಿಜಿ ನಡೆಸಲಾಗಿದ್ದು ಹೃದಯಸಂಬಂಧಿ ಯಾವುದೇ ತೋದರೆಯಿಲ್ಲ, ಗ್ಯಾಸ್‌ ಸ್ಟ್ರೀಕ್‌ ಸಮಸ್ಯೆಯಿಂದ ನೋವು ಕಾಣಿಸಿಕೊಂಡಿರಬುದು ಎಂದು ವೈದ್ಯರು ವರದಿ ನೀಡಿದ್ದಾರೆ.

English summary
An alert passenger saved the life of a BMTC bus driver and scores of passengers when he noticed the driver in discomfort and stopped the bus on Monday. The BMTC officers said 28-year-old Renukaprasad, who was driving a Volvo bus on Monday afternoon, had a chest pain. Devaraju, the passenger, who was sitting in the front seat, noticed a visibly uncomfortable Prasad and asked him about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X