ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಕಿಯ ನರ್ತಕಿ ಕನಸು ಹೊಸಕಿಹಾಕಿದ ಬಿಎಂಟಿಸಿ

By Ashwath
|
Google Oneindia Kannada News

ಬೆಂಗಳೂರು,ಆ.5: ಬಿಎಂಟಿಸಿ ಬಸ್‌ ಹರಿದು ವಿದ್ಯಾರ್ಥಿ‌ನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಂಟೋನ್ಮೆಂಟ್ ರೈಲು ನಿಲ್ದಾಣ ಸಮೀಪ ನಡೆದಿದೆ.

ಒಂಭತ್ತು ವರ್ಷದ ವಿದ್ಯಾರ್ಥಿ‌ನಿ ಶುಭಾ ಹರಿಣಿ ಗಂಭೀರ ಗಾಯಗೊಂಡಿದ್ದು ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.[ಲಾಭದಲ್ಲಿ ಓಡುತ್ತಿದೆ ಬಿಎಂಟಿಸಿ, ಕೆಎಸ್‌ಆರ್‌‌ಟಿಸಿ]

bmtc

ಪ್ರತಿದಿನ ಶುಭಾ, ತನ್ನ ಅಕ್ಕನೊಂದಿಗೆ ಬಿಎಂಟಿಸಿ ಬಸ್‌ನಲ್ಲಿ ಶಾಲೆಗೆ ತರೆಳಿ ಮನೆಗೆ ಹಿಂದಿರುಗುತ್ತಿದ್ದಳು. ಎಂದಿನಿಂತೆ ಇಂದು ಬಿಎಂಟಿಸಿ ಬಸ್‌‌ ಹತ್ತುವ ಸಂದರ್ಭದಲ್ಲಿ ಅಕ್ಕ ಮೊದಲು ಹತ್ತಿದ್ದರೆ, ಶುಭಾ ಬಸ್‌ ಹತ್ತುವಾಗ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಈ ಸಂದರ್ಭದಲ್ಲಿ ಬಸ್‌ ಚಲಿಸಿದ್ದು, ಶುಭಾಳ ಕಾಲಿನ ಮೇಲೆ ಚಕ್ರ ಹರಿದಿದೆ.

ಕಾಲಿಗೆ ತೀವ್ರ ಹಾನಿಯಾಗಿರುವುದರಿಂದ ಕಾಲುಗಳನ್ನು ಕತ್ತರಿಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ನಾಳೆಗೆ(ಆ.6) ತನ್ನ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕಿದ್ದ ಶುಭಾ ಹರಿಣಿ ಭವಿಷ್ಯದಲ್ಲಿ ಉತ್ತಮ ನೃತ್ಯಗಾರ್ತಿ‌ ಆಗಬೇಕೆಂದು ಕನಸು ಕಂಡಿದ್ದಳು.

English summary
A nine-year-old girl was run over by a public bus in Bangalore today. The bus is operated by the Bangalore Metro Transport Corporation or BMTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X