ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ವಿಸರ್ಜನೆ: ವಿದ್ಯುತ್ ತಂತಿ ತಾಗಿ ಐವರ ಸಾವು

|
Google Oneindia Kannada News

ಬೆಂಗಳೂರು, ಸೆ.14 : ಗಣೇಶ ವಿಸರ್ಜನೆ ಮಾಡಿ ಮನೆಗೆ ಮರಳುತ್ತಿದ್ದ ಯುವಕರು ಜವರಾಯನ ಪಾದ ಸೇರಿದ್ದಾರೆ. ಅವರ ಸಾವಿಗೆ ಕಾರಣವಾಗಿದ್ದು ಹೈಟೆನ್ಷನ್ ವಿದ್ಯುತ್ ತಂತಿ. ಮೃತರೆಲ್ಲರು ಪಾಲಕರಿಗೆ ಏಕಮಾತ್ರ ಪುತ್ರರಾಗಿದ್ದರು.

ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ(ಮಧುರೆ)ಯಲ್ಲಿ ಶನಿವಾರ ಇಂಥ ಹೃದಯವಿದ್ರಾವಕ ಘಟನೆ ನಡೆದಿದೆ. ಗಣೇಶ ವಿಸರ್ಜಿಸಿ ಹಿಂದಿರುಗುತ್ತಿದ್ದ ಟ್ರ್ಯಾಕ್ಟರ್‌ಗೆ ಕಟ್ಟಿದ್ದ ಕಮಾನಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲು ಸ್ಥಳದಲ್ಲೇ ಐವರು ಯುವಕರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.(ಹೊಗೆ ಬಿಟ್ಟರೆ 20 ಸಾವಿರ ರೂಪಾಯಿ ದಂಡ!)

bangalore

ನಾಗೇಶ್(28), ದರ್ಶನ್(22), ಆಂಜಿನಪ್ಪ(20), ಅರುಣ್(22) ಹಾಗೂ ರಾಜು (22) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಚಂದನ್ (19), ಹಂಪೇಶ್(42), ಲಿಖಿತ್(20) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಮೂರು ವರ್ಷದಿಂದ ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿದ್ದ ಯುವಕರು ಶನಿವಾರ ರಾತ್ರಿ ಗಣೇಶ ವಿಸಜರ್ಜಿಸಿ ಹಿಂದಿರುಗುತ್ತಿದ್ದರು. ಮೆರವಣಿಗೆ ವಾಪಸ್‌ ಬರುತ್ತಿದ್ದ ವೇಳೆ ರಸ್ತೆ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ವೈರ್ ತಾಗಿದೆ. ಟ್ರ್ಯಾಕ್ಟರ್ ಇಡಿ ವಿದ್ಯುತ್ ಪ್ರಹರಿಸಿ ಯುವಕರು ಸಾವಿಗೀಡಾಗಿದ್ದಾರೆ.

ವಿದ್ಯುತ್ ಪ್ರಹರಿಸುತ್ತಿದ್ದಂತೆ ಟ್ರ್ಯಾಕ್ಟರ್ ಮೇಲೆ ಕುಳಿತ್ತಿದ್ದ ಸುಮಾರು 20 ಮಂದಿ ಯುವಕರು ಹೊರ ಜಿಗಿದಿದ್ದಾರೆ. ಇದರಲ್ಲಿ ಬಲವಾಗಿ ವಿದ್ಯುತ್ ಪ್ರಹರಿಸಿದ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರಿಗೆ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್ ಹರಿದು ಕೈ, ಕಾಲುಗಳು ಶಕ್ತಿ ಕಳೆದುಕೊಂಡಿವೆ.
ಅವಘಡ ಸ್ಥಳಕ್ಕೆ ದೊಡ್ಡ ಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

English summary
Bangalore: 5 youths killed and 3 people injured in a electrical line touch incident near Doddaballapura, on Saturday mid night. The youths are coming back in a tractor. At the same time a arch which are placed in tractor touched electrical line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X