ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿದ್ದಾರೆ 85,19,236 ಮತದಾರರು

|
Google Oneindia Kannada News

ಬೆಂಗಳೂರು, ಏ.15 : ಮತದಾನ ಮಾಡಲು ಬೆಂಗಳೂರಿಗರು ಸಿದ್ಧವಾಗುತ್ತಿದ್ದಾರೆ. ಈ ಬಾರಿಯ ಚುನವಣೆಯಲ್ಲಿ ಬೆಂಗಳೂರಿನಲ್ಲಿ 85,19,236 ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ. ರಾಜ್ಯದ ಮತದಾರರಲ್ಲಿ ಶೇ.18.45ರಷ್ಟು ಮತದಾರರು ಬೆಂಗಳೂರು ವ್ಯಾಪ್ತಿಯಲ್ಲೇ ಇದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟಾರೆ 85,19,236 ಮತದಾರರಿದ್ದಾರೆ ಎಂದು ಹೇಳಿದ್ದಾರೆ. ಈ ವರ್ಷದ ಜನವರಿ ಅಂತ್ಯದ ವೇಳೆಗೆ ಈ ಸಂಖ್ಯೆ 79,35,992ರಲ್ಲಿತ್ತು ರಷ್ಟಿತ್ತು, ನಂತರ ಈ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದರು.

bbmp

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಂತಿಮ ದಿನದವರೆಗೂ ಜನರು ತಮ್ಮ ಹೆಸರನ್ನು ನೋಂದಾಯಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಲಕ್ಷೀನಾರಾಯಣ ತಿಳಿಸಿದರು. ಸದ್ಯ 85,19,236 ಮತದಾರರಲ್ಲಿ 44,55,217 ಪುರುಷರು, 40,62,774 ಮಹಿಳೆಯರು ಮತ್ತು 1,245 ಇತರೆ ಮತದಾರರಿದ್ದಾರೆ ಎಂದರು.

ನಗರದ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಶಾಂತಿಯುತ ಮತದಾನಕ್ಕೆ ಸಹಕರಿಸಬೇಕು ಎಂದು ಎಂ.ಲಕ್ಷ್ಮೀನಾರಾಯಣ ಮನವಿ ಮಾಡಿದರು. [ಮತದಾನದ ಬಗ್ಗೆ ಬೆಂಗಳೂರಿಗರು ಹೇಳಿದ್ದೇನು]

593 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ವಿಧಾನದಿಂದ ಆನ್‌ ಲೈನ್ ಮೂಲಕ ಮತದಾನ ಪ್ರಕ್ರಿಯೆ ವೀಕ್ಷಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 900 ಬಿಎಂಟಿಸಿ ಬಸ್‌, 200 ಮಿನಿ ಬಸ್‌ ಮತ್ತಿತರ ವಾಹನಗಳನ್ನು ಮತದಾನದ ದಿನ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

English summary
Elections 2014 : There has been an increase of 5.84 lakh voters in four parliamentary constituencies in Bangalore since January 2014. As per data provided by the Bruhat Bangalore Mahanagara Palike (BBMP), the total number of voters in Bangalore South, Bangalore North, Bangalore Central and Bangalore Rural parliamentary constituencies went up from 79.35 lakh in January 2014 to 85.19 lakh at present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X