ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗಾಗಿ 11,500 ವಸತಿ ಗೃಹ ನಿರ್ಮಾಣ

|
Google Oneindia Kannada News

ಬೆಂಗಳೂರು, ಏ. 23 : ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ 2500 ಸೇರಿದಂತೆ ರಾಜ್ಯದ 13 ಕಡೆ 11,500 ಪೊಲೀಸ್ ವಸತಿ ಗೃಹಗಳನ್ನು 1800 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಬುಧವಾರ ಶಿವಾಜಿನಗರದಲ್ಲಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದ ಕೆ.ಜೆ.ಜಾರ್ಜ್, ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ 2500 ವಸತಿ ಗೃಹಗಳು ಸೇರಿದಂತೆ ರಾಜ್ಯಾದ್ಯಂತ 11,500 ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

police

ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ನೂತನ ವಸತಿ ಗೃಹದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಶಿವಾಜಿನಗರದ ವಸತಿ ಗೃಹದಲ್ಲಿರುವವರನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಸ್ಥಳಾಂತರ ಪೂರ್ಣಗೊಂಡ ಬಳಿಕ ಶಿವಾಜಿನಗರ ವಸತಿ ಗೃಹವಿರುವ ಸ್ಥಳದಲ್ಲಿ ನೂತನ ಬಹುಮಹಡಿ ಕಟ್ಟಡದ ವಸತಿ ಗೃಹ ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು. [ಎಎನ್ಎಫ್ ಶೂಟೌಟ್ ತನಿಖೆ ಸಿಐಡಿಗೆ]

ಶಿವಾಜಿನಗರದಲ್ಲಿನ ವಸತಿ ಗೃಹದಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿರುವ ಬಗ್ಗೆ ನಿವಾಸಿಗಳು ಸಚಿವರಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ ಹಾಜರಿದ್ದ ಜಲಮಂಡಳಿ ಇಂಜಿನಿಯರ್ ಅವರಿಗೆ ಸಮಸ್ಯೆಯನ್ನು ಒಂದು ತಿಂಗಳಿನಲ್ಲಿ ಸರಿಪಡಿಸಬೇಕು ಎಂದು ಗೃಹ ಸಚಿವರು ಗಡುವು ನೀಡಿದರು.

ಪೊಲೀಸ್ ವಸತಿ ಗೃಹಗಳ ಕುರಿತು ಮಾಹಿತಿ ನೀಡಿದ ಕೆ.ಜೆ.ಜಾರ್ಜ್ ರಾಜ್ಯದಲ್ಲಿ ಶೇ.40ರಷ್ಟು ಪೊಲೀಸರಿಗೆ ಮಾತ್ರ ವಸತಿ ಗೃಹಗಳ ಸೌಲಭ್ಯ ದೊರಕಿದೆ. ಶೇ.60ರಷ್ಟು ಪೊಲೀಸರಿಗೆ ವಸತಿ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಪೊಲೀಸರಿಗೂ ವಸತಿ ಗೃಹದ ಸೌಕರ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಗತ್ಯ ಅನುದಾನವನ್ನು ನೀಡಲಾಗುವುದು ಎಂದು ಜಾರ್ಜ್ ಹೇಳಿದರು.

ಮೂಲ ಸೌಕರ್ಯ ಸಚಿವ ರೋಷನ್ ಬೇಗ್, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಪೊಲೀಸ್ ಹೌಸಿಂಗ್ ಕಾರ್ಪೋರೇಷನ್‌ನ ಎಡಿಜಿಪಿ ಪ್ರವೀಣ್‌ ಸೂದ್ ಮುಂತಾದವರು ಗೃಹ ಸಚಿವರ ಜೊತೆ ಬುಧವಾರ ನಗರದ ವಿವಿಧ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದರು.

English summary
11,500 police quarters, largely for the police constabulary and sub-inspectors, will be constructed across the State said, Home Minister K J George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X