ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ಕೋಟಿ ಸಸಿ ನೆಡುವ ವಿಶ್ವದಾಖಲೆಯಲ್ಲಿ ಪಾಲ್ಗೊಳ್ಳಿ

By Ashwath
|
Google Oneindia Kannada News

ಬೆಂಗಳೂರು, ಜು.28: ಭಾರತದೆಲ್ಲೆಡೆ ಒಂದು ದಿನದಲ್ಲಿ ಒಂದು ಕೋಟಿ ಸಸಿಯನ್ನು ನೆಟ್ಟು ವಿಶ್ವ ದಾಖಲೆ ನಿರ್ಮಿಸಲು ಯುನಿಕ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಉದ್ದೇಶಿಸಿದ್ದು, ಈ ವಿಶ್ವ ದಾಖಲೆ ತೀರ್ಪು‌‌‌‌ಗಾರರಾಗಿ ರೆಕಾರ್ಡ್‌ ರಮೇಶ್‌ ಬಾಬು ಆಯ್ಕೆಯಾಗಿದ್ದಾರೆ.

ಆಗಸ್ಟ್‌ 24ರಂದು ಸಸಿ ನೆಡುವ ವಿಶ್ವದಾಖಲೆ ನಡೆಯಲಿದ್ದು, ಭಾರತದ ನೈರುತ್ಯ ವಲಯದ ತೀರ್ಪು‌ಗಾರರಾಗಿ ರೆಕಾರ್ಡ್‌ ರಮೇಶ್‌ ಬಾಬು ಅವರನ್ನು ಯುನಿಕ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ನೇಮಿಸಿದೆ. [ವಿಶ್ವ ದಾಖಲೆ ವೀರ ರಮೇಶ್‌‌ ಬಾಬು ಸಂದರ್ಶನ]

Unique World Records

ಅಂದು ಬೆಳಗ್ಗೆ 9 ಗಂಟೆಯಿಂದ 5 ಗಂಟೆಯ ಒಳಗಡೆ ದೇಶದೆಲ್ಲೆಡೆ ಯಾರು ಬೇಕಾದರೂ ಯಾವುದೇ ಸಸಿಯನ್ನು ನೆಡುವ ಮೂಲಕ ಈ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ರಮೇಶ್‌ ಬಾಬು ತಿಳಿಸಿದ್ದಾರೆ.

ಬೆಂಗಳೂರಿನ ನಿವೃತ್ತ ಮೆಟಲರ್ಜಿ ವಿಜ್ಞಾನಿ ಆಗಿರುವ ಪ್ರೊ.ಡಾ. ಎಸ್‌. ರಮೇಶ್‌ ಬಾಬು ಇದುವರೆಗೂ 50 ವಿಶ್ವ ದಾಖಲೆ 9 ರಾಷ್ಟ್ರೀಯ ದಾಖಲೆಗಳನ್ನು ಬರೆದಿದ್ದಾರೆ. ಇವರಿಗೆ ದಾಖಲೆ ಮಾಡುವುದು ಅಂದರೆ ನೀರು ಕುಡಿದಷ್ಟು ಸಲೀಸು.

ದಾಖಲೆ ಮಾಡುವುದನ್ನೇ ಹವ್ಯಾಸ ವಾಗಿರಿಸಿಕೊಂಡಿರುವ ಇವರು ಭಾರತದಲ್ಲೇ ಅತಿ ಹೆಚ್ಚು ದಾಖಲೆ ಮಾಡಿದ ವ್ಯಕ್ತಿ ಎಂಬ ಪಟ್ಟಕ್ಕೆ ಭಾಜನರಾಗಿದ್ದಾರೆ. ದಾಖಲೆಗಳ ಸಂಖ್ಯೆಯಿಂದಾಗಿಯೇ ಈಗ ''ರೆಕಾರ್ಡ್ ರಮೇಶ್'' ಎಂದು ಪ್ರಸಿದ್ಧಿ ಪಡೆದಿದ್ದಾರೆ. ಬೆಂಗಳೂರಿನ ಟಾಟಾ ನಗರದ ನಿವಾಸಿಯಾಗಿರುವ 57 ವರ್ಷದ ರಮೇಶ್ ಬಾಬು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ.

ಇವರ ದಾಖಲೆಗಳನ್ನು ಮೆಚ್ಚಿ ಇದೀಗ ಇವರಿಗೆ ಯುನಿಕ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಒಂದು ಕೋಟಿ ಗಿಡ ನೆಡುವ ವಿಶ್ವದಾಖಲೆ ನಿರ್ಮಿ‌ಸುವ ವನಮಹೋತ್ಸವ ಕಾರ್ಯ‌ಕ್ರಮದ ನೈರುತ್ಯ ವಲಯದ ತೀರ್ಪು‌‌‌‌ಗಾರರಾಗಿ ನೇಮಿಸಿದೆ.

ಹೆಚ್ಚಿನ ಮಾಹಿತಿಗೆ ರಮೇಶ್‌ ಬಾಬು ಅವರನ್ನು ಸಂಪರ್ಕಿಸಬಹುದು: 94490 13887

English summary
Unique World Records Limited has taken the initiative “1 Crore Tree Planatation By most people at most loacation"to accomplish the motive"Go Green -Save The Planet-Plant a tree"by the way of attempting New World Record on 24th August, 2014. Anybody can take Part in this event like General Public, Students of all Schools and Colleges from all over the India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X