ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೂ ಬಂತು ಅಗ್ಗದ ಮಿನರಲ್ ವಾಟರ್!

|
Google Oneindia Kannada News

ಬೆಂಗಳೂರು, ಸೆ.5 : ಅತ್ಯಂತ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಗದಗ ಮಾದರಿ ಕುಡಿಯುವ ನೀರಿನ ಯೋಜನೆ ಬೆಂಗಳೂರಿನಲ್ಲಿ ಜಾರಿಗೆ ಬಂದಿದೆ. ನಗರದ ರಾಜರಾಜೇಶ್ವರಿ ವಾರ್ಡ್ ನಲ್ಲಿ ಈ ಯೋಜನೆ ಗುರುವಾರದಿಂದ ಪ್ರಾರಂಭವಾಗಲಿದೆ.

ರಾಜರಾಜೇಶ್ವರಿ ನಗರದ ಜನರು ಗುರುವಾರದಿಂದ ಕೇವಲ 2 ರೂ. ಗಳಿಗೆ ಶುದ್ಧೀಕರಿಸಿದ 25 ಲೀಟರ್ ಕುಡಿಯುವ ನೀರು ಪಡೆಯಬಹುದುದಾಗಿದೆ. ಬಿಬಿಎಂಪಿ ಕೌನ್ಸಿಲರ್ ಜಿ.ಎಚ್. ರಾಮಚಂದ್ರ ರಾಜರಾಜೇಶ್ವರಿ ನಗರದಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದಾರೆ.

drinking water

ಸಾರ್ವಜನಿಕರು ಬಿಬಿಎಂಪಿ ವಾರ್ಡ್ ಕಚೇರಿಗೆ ತೆರಳಿ, ಯೋಜನೆಗಾಗಿ ರೂಪಿಸಿರುವ ಸ್ಮಾರ್ಟ್ ಕಾರ್ಡ್ ಪಡೆದು ದಿನ ಬಿಟ್ಟು ದಿನದಂತೆ ತಿಂಗಳಲ್ಲಿ 15 ದಿನ ಮಿನರಲ್ ವಾಟರ್ ಪಡೆಯಬಹುದಾಗಿದೆ. ಜನರಲ್ ಕಾರ್ಯಪ್ಪ ಪಾರ್ಕ್ ಬಳಿ, ಜವರಾಯಿಗೌಡನ ದೊಡ್ಡಿ ಮುಖ್ಯದ್ವಾರ, ಮಾರಪ್ಪ ಬಡಾವಣೆ ಹಾಗೂ ಕೆರೆಕೋಡಿ ಪಾಳ್ಯದಲ್ಲಿ ಶುದ್ಧ ಕುಡಿಯು ನೀರು ಲಭ್ಯವಿರುತ್ತದೆ.

ಯೋಜನೆ ಬಗ್ಗೆ ಮಾಹಿತಿ ನೀಡಿದ ಪಾಲಿಕೆ ಸದಸ್ಯ ರಾಮಚಂದ್ರ, ನೀರು ಸಂಗ್ರಹಕ್ಕಾಗಿ ಕ್ಯಾನ್‌ಗಳನ್ನು ನಾವೇ ನೀಡುತ್ತಿದ್ದೇವೆ. ಒಂದು ಕ್ಯಾನ್‌ಗೆ 125 ರೂ.ಗಳಾಗಲಿದ್ದು, 50 ರೂ.ಯನ್ನು ನಾವು ಭರಿಸುತ್ತೇವೆ. ನಾಗರಿಕರು 75 ರೂ. ನೀಡಬೇಕಾಗುತ್ತದೆ ಎಂದರು.

ಒಂದು ಘಟಕ ಸ್ಥಾಪಿಸಲು 12 ಲಕ್ಷ ರೂ. ವೆಚ್ಚವಾಗಲಿದೆ. ಸದ್ಯ ಮೂರು ಘಟಕಗಳನ್ನು ಸ್ಥಾಪಿಸಲಾಗಿದ್ದು, ಯೋಜನೆಗೆ ಶಾಸಕರು ಮತ್ತು ಸಂಸದರು ಸಹಕಾರ ನೀಡಿದರೆ, ಪ್ರತಿ ಬಡಾವಣೆಯಲ್ಲಿಯೂ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು. (1 ರು ಗೆ ಎಟಿಎಂ ಆರಂಭಿಸಿದ ಡಿಕೆಶಿ ಬ್ರದರ್ಸ್)

ಈ ಯೋಜನೆಗೆ ಬಿಬಿಎಂಪಿಯು ಸಂಪೂರ್ಣ ಸಹಕಾರ ನೀಡುತ್ತಿದ್ದು, ಪ್ಲಾಂಟ್ ಅಳವಡಿಸಿರುವ ಜಾಗ, ಕೊಳವೆ ಬಾವಿ ಮತ್ತು ವಿದ್ಯುತ್ ವೆಚ್ಚವನ್ನು ಪಾಲಿಕೆಯೇ ಭರಿಸುತ್ತಿದೆ. ಯೋಜನೆಯ ಉಸ್ತುವಾರಿಯನ್ನು ಪ್ಯೂರ್ ಅಕ್ವಾ ವಾಟರ್ ಟೆಕ್ನಾಲಜಿ ಸಂಸ್ಥೆ ವಹಿಸಿಕೊಂಡಿದೆ.

ಬೆಂಗಳೂರಿನಲ್ಲಿ ಪ್ರಥಮ : ಇಂತಹ ಯೋಜನೆಯನ್ನು ಯೋಜನೆಯನ್ನು ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಸಚಿವ ಎಚ್.ಕೆ. ಪಾಟೀಲ್ ಪ್ರಾರಂಭಿದ್ದರು. ಕನಕಪುರದಲ್ಲಿ ಶಾಸಕ ಡಿ.ಕೆ. ಶಿವಕುಮಾರ್ ಸಹ ಇದನ್ನು ಜಾರಿಗೆ ತಂದಿದ್ದಾರೆ. ಬೆಂಗಳೂರಿನ 198 ಪಾಲಿಕೆ ವಾರ್ಡ್‌ಗಳ ಪೈಕಿ ರಾಜರಾಜೇಶ್ವರಿ ನಗರದಲ್ಲಿ ಮೊದಲು ಈ ಯೋಜನೆ ಜಾರಿಗೆ ಬರುತ್ತಿದೆ.

English summary
The Indian rupee may be crashing globally, but in a suburb in Bangalore, just Rs. 2 can fetch 25 liters of clean drinking water. This project will be begins in Rajarajeshwari Nagar ward On September 5, Thursday. Bruhat Bangalore Mahanagara Palike (BBMP) Councillor G.H.Ramachandra established this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X