ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ರಾಮಾ ಗಾಯದ ಮೇಲೆ ಬರೆ! ಬಸ್ ದರ ಏರಿಕೆ

|
Google Oneindia Kannada News

ಬೆಂಗಳೂರು, ಸೆ 2: ಈಗ ದೇಶದೆಲ್ಲಡೇ ಅಭಿವೃದ್ದಿ ನಾಸ್ತಿ, ಬೆಲೆ ಏರಿಕೆ, ಹಣದುಬ್ಬರವೇ ಜಾಸ್ತಿ. ದೈನಂದಿನ ಪದಾರ್ಥಗಳು, ತೈಲ ಉತ್ಪನ್ನಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ 'ಸಾಮಾನ್ಯದ ವಿಷಯವಾಗದೇ ಬೇರೆ ದಾರಿ ಇಲ್ಲದಂತಾಗಿದೆ.

ಕಣ್ಣೀರು ತರಿಸುತ್ತಿರುವ ಈರುಳ್ಳಿ ಮತ್ತು ತರಕಾರಿ ಬೆಲೆಗಳು, ಅಪಮೌಲ್ಯ ಗೊಳ್ಳುತ್ತಿರುವ ರೂಪಾಯಿ ಬೆಲೆ, ತಿಂಗಳಿಗೆ ಒಮ್ಮೆಯಾದರೂ ದುಬಾರಿಯಾಗುತ್ತಿರುವ ತೈಲ ಉತ್ಪನ್ನಗಳು, ಅಡುಗೆ ಅನಿಲದ ಬೆಲೆ ಇನ್ನೆಷ್ಟು ಹೆಚ್ಚಾಗುತ್ತದೋ ಎನ್ನುವ ಆತಂಕದ ನಡುವೆ ಗಣೇಶ ಹಬ್ಬಕ್ಕೆ ಜನತೆಗೆ ರಾಜ್ಯ ಸರಕಾರ ಇನ್ನೊಂದು ಬೆಲೆ ಏರಿಕೆಯ ಗಿಫ್ಟ್ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಎಲ್ಲಾ ಘಟಕಗಳು ಗೌರಿ, ಗಣೇಶ ಹಬ್ಬಕ್ಕೆ ಹೆಚ್ಚುವರಿಯಾಗಿ ಸಂಚರಿಸಲಿರುವ ಬಸ್ಸುಗಳ ದರವನ್ನು ಏಕಾಏಕಿ ಶೇ.20ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.

ಬಸ್ ಪ್ರಯಾಣ ದರವನ್ನು ಸಾಂದರ್ಭಿಕವಾಗಿ ಹೆಚ್ಚಿಸಲು ಸಾರಿಗೆ ಕಾಯ್ದೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ, ಈ ಸಂಬಂಧ ಸುತ್ತೋಲೆ ಕೂಡಾ ಇದೆ. ಈ ಬಾರಿಯ ಹಬ್ಬಕ್ಕೆ ಮಾತ್ರ ಪ್ರಯಾಣ ದರ ಏರಿಸುತ್ತಿಲ್ಲ, ಇದು ಆರೇಳು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ದತಿ ಎಂದು KSRTC ಅಧಿಕಾರಿಗಳು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಬಸ್ ಬೆಲೆಗಳು ಇಪ್ಪತ್ತು ಶೇಕಡಾದಷ್ಟು ಏರಿಕೆಯಾದರೂ ಟಿಕೆಟುಗಳು ಹೆಚ್ಚು ಕಮ್ಮಿ ಭರ್ತಿಯಾಗಿದ್ದು, ಖಾಸಾಗಿ ಬಸ್ಸುಗಳಂತೂ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಈ ಹೊಸ ದರ ಗುರುವಾರ (ಸೆ 5) ರಿಂದ ಮಂಗಳವಾರದವರೆಗೆ (ಸೆ 10) ಚಾಲ್ತಿಯಲ್ಲಿರುವ ಸಾಧ್ಯತೆಯಿದೆ. ಈ ಸಂಬಂಧ ರಸ್ತೆ ಸಾರಿಗೆ ಸಂಸ್ಥೆಯ ಅಧಿಕೃತ ಆದೇಶ ಇನ್ನೂ ಹೊರಬೀಳ ಬೇಕಷ್ಟೇ..

ಶ್ರಾವಣ ಮತ್ತು ಭಾದ್ರಪದ ತಿಂಗಳಲ್ಲಿ ಬರುವ ಹಬ್ಬ ಹರಿದಿನಗಳ ಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಸರಕಾರಿ ಮತ್ತು ಖಾಸಾಗಿ ಬಸ್ಸುಗಳ ಹೆಚ್ಚುವರಿ ಬಸ್ಸುಗಳ ಗಣೇಶ ಹಬ್ಬದ ಸ್ಪೆಷಲ್ ಬೆಲೆ ಸ್ಲೈಡಿನಲ್ಲಿ (ಅಂದಾಜು)

ಬೆಂಗಳೂರು - ಹುಬ್ಬಳ್ಳಿ

ಬೆಂಗಳೂರು - ಹುಬ್ಬಳ್ಳಿ

KSRTC - 960/- (Volvo)
ಖಾಸಾಗಿ ಬಸ್ಸುಗಳು - 850/- ರಿಂದ 2500/- (SRS, VRL, Sharma, Sai Neeta, Sea Bird ಇತ್ಯಾದಿ)

ಬೆಂಗಳೂರು - ಮಂಗಳೂರು

ಬೆಂಗಳೂರು - ಮಂಗಳೂರು

KSRTC - 860/- (Volvo)
ಖಾಸಾಗಿ ಬಸ್ಸುಗಳು - 900/- ರಿಂದ 1200/- (VRL, Suguma, Durgamba, Vishal, Ideal, Bharathi, SRS ಇತ್ಯಾದಿ)

ಬೆಂಗಳೂರು - ಬೆಳಗಾವಿ

ಬೆಂಗಳೂರು - ಬೆಳಗಾವಿ

KSRTC - 1080/- (Volvo)
ಖಾಸಾಗಿ ಬಸ್ಸುಗಳು - 1200/- ರಿಂದ 2500/- (Geepee, National, Shanthadurga, VRL, Sea Bird ಇತ್ಯಾದಿ)

ಬೆಂಗಳೂರು - ಚೆನ್ನೈ

ಬೆಂಗಳೂರು - ಚೆನ್ನೈ

KSRTC - 960/- (Volvo)
ಖಾಸಾಗಿ ಬಸ್ಸುಗಳು - 950/- ರಿಂದ 1400/- (SMPK, ABT, Yesbee, SVT, KGN, Saachin ಇತ್ಯಾದಿ)

ಬೆಂಗಳೂರು - ಹೈದರಾಬಾದ್

ಬೆಂಗಳೂರು - ಹೈದರಾಬಾದ್

KSRTC - 1576/- (Volvo)
ಖಾಸಾಗಿ ಬಸ್ಸುಗಳು - 1600/- ರಿಂದ 2450/- (Akbar, Jabbar, Apple, KGN ಇತ್ಯಾದಿ)

ಬೆಂಗಳೂರು - ಬೀದರ್

ಬೆಂಗಳೂರು - ಬೀದರ್

KSRTC - 1140/- (Volvo)
ಖಾಸಾಗಿ ಬಸ್ಸುಗಳು - 1100/- ರಿಂದ 1500/- (Pavit, SRS, VRL ಇತ್ಯಾದಿ)

English summary
KSRTC to increase 20% on additional buses traveling during Gowri Ganesh Festival. Even Private buses also increasing the bus fare during this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X