ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪರ ಹೇಳಿಕೆ ಎಲ್ಲವೂ ಫೇಕ್ ಫೇಕ್

By Mahesh
|
Google Oneindia Kannada News

ಮುಂಬೈ, ಆ.22: 'ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗಲು ತಾವು ಬೆಂಬಲ ನೀಡುತ್ತೇನೆ'ಎಂದು ಸಾಮಾಜಿಕ ತಾಣವೊಂದು ಪ್ರಸಾರ ಮಾಡಿರುವುದಕ್ಕೆ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಕಿಡಿಕಾರಿದ್ದಾರೆ. ಅಮಿತಾಬ್ ಅವರ ಹೇಳಿಕೆಗೆ ಸಿಎಂ ಮೋದಿ ಕೂಡಾ ಸಮರ್ಥನೆ ನೀಡಿದ್ದಾರೆ.

ಗುಜರಾತ್ ನ ಸಾಂಸ್ಕೃತಿಕ, ಪ್ರವಾಸೋದ್ಯಮ ರಾಯಭಾರಿಯಾಗಿರುವ ಅಮಿತಾಬ್ ಬಚ್ಚನ್, ನರೇಂದ್ರ ಮೋದಿ ಪ್ರಧಾನಿಯಾಗಲು ಬೆಂಬಲ ಸೂಚಿಸಿದ್ದಾರೆ ಎಂದು ಸಾಮಾಜಿಕ ತಾಣವೊಂದರಲ್ಲಿ ವಿಡಿಯೋ ತುಣುಕೊಂದು ವರದಿ ಮಾಡಿತ್ತು. ಇದರಿಂದ ಕುಪಿತಗೊಂಡಿರುವ ಅಮಿತಾಬ್ ನಾನು ಈ ರೀತಿ ಹೇಳಿಕೆಯನ್ನೇ ನೀಡಿಲ್ಲ. ನನ್ನ ಭಾವಚಿತ್ರವನ್ನು ತಿರುಚಿ ಸುದ್ದಿ ಪ್ರಕಟಿಸಲಾಗಿದೆ. ಇದರ ವಿರುದ್ಧ ಕಾನೂನು ಸಮರ ಸಾರುವುದಾಗಿ ಎಚ್ಚರಿಸಿದ್ದಾರೆ.

ನಾನು ನರೇಂದ್ರ ಮೋದಿಯನ್ನು ಬೆಂಬಲಿಸಿ ಮಾತನಾಡಿದ್ದೇನೆಂದು ಸಾಮಾಜಿಕ ತಾಣಗಳಲ್ಲಿ ಯಾರು ದಾಖಲೆ (ಅಪ್ ಲೋಡ್) ಮಾಡಿದ್ದಾರೋ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಬೆಂಬಲ ನೀಡಿರುವುದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಬಿಗ್ ಬಿ ಮಾತ್ರ ನಾನು ಆ ರೀತಿ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಇದು ಆಧಾರ ರಹಿತ ಎಂದು ಕಿಡಿಕಾರಿದ್ದರು. ಈ ಇಡೀ ಪ್ರಸಂಗ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...

ಮೋದಿ ಸಹಮತ

ಅಮಿತಾಬ್ ಬಚ್ಚನ್ ಬೆಂಬಲ ನೀಡಿರುವುದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಮೋದಿ ಅವರು ಬಿಗ್ ಬಿ ಅವರ ಹೇಳಿಕೆಗೆ ಸಮರ್ಥನೆ ನೀಡಿ ಟ್ವೀಟ್ ಮಾಡಿ ಗೊಂದಲ ನಿವಾರಿಸಿದರು.

ವಿಡಿಯೋ ಬಗ್ಗೆ ಬಿಗ್ ಬಿ

ವಿಡಿಯೋದಲ್ಲಿರುವುದು ನಾನಲ್ಲ. ನನ್ನ ಭಾವಚಿತ್ರವನ್ನು ತಿರುಚಿ ಸುದ್ದಿ ಪ್ರಕಟಿಸಲಾಗಿದೆ. ಇದರ ವಿರುದ್ಧ ಕಾನೂನು ಸಮರ ಸಾರುವುದಾಗಿ ಎಚ್ಚರಿಸಿದ ಬಿಗ್ ಬಿ

ವಿಡಿಯೋ ಬಗ್ಗೆ ಎಚ್ಚರಿಕೆ

ಟ್ವಿಟರ್ ಅಲ್ಲದೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಅಮಿತಾಬ್ ರಿಂದ ಸ್ಪಷ್ಟನೆ

ಅಭಿಮಾನಿಗಳಿಂದ ಬೆಂಬಲ

ಟ್ವೀಟ್ ಮಾಡಿ ಅಮಿತಾಬ್ ಬಚ್ಚನ್ ಗೆ ಬೆಂಬಲ ಕೋರಲು ಮನವಿ

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಏನಿದೆ?

ಭಾರತವನ್ನು ಮುನ್ನಡೆಸಲು ಮೋದಿಯೊಬ್ಬರೇ ಸಮರ್ಥರು ಎಂದು ಅಮಿತಾಬ್ ಹೇಳಿಕೆ ನೀಡುವಂತೆ ಚಿತ್ರಿಸಲಾಗಿದೆ. 2007ರಲ್ಲಿ ಲೀಡ್ ಇಂಡಿಯಾ ಅಭಿಯಾನದಲ್ಲಿ ಅಮಿತಾಬ್ ನೀಡಿದ್ದ ಹೇಳಿಕೆಗಳನ್ನು ತಿರುಚಿ ಮೋದಿ ಪರ ಹೇಳಿಕೆ ನೀಡಿದಂತೆ ತೋರಿಸಲಾಗಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ

ಮೋದಿ ಬಗ್ಗೆ ಬಿಗ್ ಬಿ ಹೇಳಿಕೆ ನೀಡಿದ್ದರೇ? ಇಲ್ಲವೇ? ಎಂಬುದರ ಬಗ್ಗೆ ಚರ್ಚೆ ನಡೆದಿದೆ.

ಬಿಗ್ ಬಿ ಸ್ಪಷ್ಟನೆ

ಸಿಎನ್ಎನ್ ಐಬಿಎನ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಬಿಗ್ ಬಿ

ಗಬ್ಬರ್ ಸಿಂಗ್ ಟ್ವೀಟ್

ಗಬ್ಬರ್ ಸಿಂಗ್ ಟ್ವೀಟ್ ಮಾಡಿದ್ದು ಹೀಗೆ

ಯೂಟ್ಯೂಬ್ ಗೆ ಪಾಠ

ಯೂಟ್ಯೂಬ್ ಗೆ ಪಾಠ ಹೇಳಿದ ಅಭಿಮಾನಿಗಳು

ಮಾಧ್ಯಮಗಳಲ್ಲಿ ವರದಿ

ಮಾಧ್ಯಮಗಳಲ್ಲಿ ವರದಿಯಾಗಿದ್ದು ಹೇಗೆ

English summary
Gujarat Chief Minister Narendra Modi on Thursday backed Bollywood megastar Amitabh Bachchan over the latter's anger expressed against a video showing him singing huge praises for the leader. Modi said in his tweet that the person who made the fake video should take immediate action and apologise to the actor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X