ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಗಳಲ್ಲಿ ಉಚಿತ ಶೌಚಾಲಯ, ಶವರ್ ಬಾತ್!

|
Google Oneindia Kannada News

H. K.Patil
ಹುಬ್ಬಳ್ಳಿ, ಆ.16 : ಕುಡಿಯುವ ನೀರಿನ ಘಟಕ ಸ್ಥಾಪಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌, ಗ್ರಾಮೀಣ ಭಾಗದಲ್ಲಿ ಶೌಚಾಲಯದ ಜೊತೆ ಶವರ್ ಬಾತ್‌ ಹೊಂದಿರುವ ಸ್ನಾನಗೃಹ ನಿರ್ಮಿಸಲು ಮುಂದಾದಿದ್ದಾರೆ.

ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯದ ಜೊತೆ ಶವರ್ ಬಾತ್ ಹೊಂದಿರುವ ಸಾರ್ವಜನಿಕರು ಉಚಿತವಾಗಿ ಬಳಸಬಹುದಾದ ಸ್ನಾನಗೃಹ ನಿರ್ಮಿಸುವ ಮೂಲಕ ಹಳ್ಳಿಯ ಜನರ ಆತ್ಮಾಭಿಮಾನ ಹೆಚ್ಚಿಸುವ ಜೊತೆಗೆ, ನೀರನ್ನು ಮಿತವ್ಯಯಮಾಡಲು ಸಚಿವರು ಚಿಂತಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಬಯಲು ಶೌಚ ತಪ್ಪಿಸಲು ಸಾಮೂಹಿಕ ಶೌಚಾಲಯ ನಿರ್ಮಿಸಲು ಮುಂದಾಗಿದ್ದ ಸರ್ಕಾರ, ಅದರ ಜೊತೆಗೆ ಶವರ್ ಬಾತ್ ಹೊಂದಿರು ಸ್ನಾನಗೃಹವನ್ನು ನಿರ್ಮಿಸಲು ಆಲೋಚಿಸಿದ್ದು, ಶೀಘ್ರವೇ ಈ ಯೋಜನೆಗೆ ಚಾಲನೆ ದೊರೆಯಲಿದೆ.

ಬೆಳಗಾವಿಯಿಂದ ಪ್ರಾರಂಭ : ಶೌಚಾಲಯ ಮತ್ತು ಶವರ್ ಬಾತ್ ಹೊಂದಿರುವ ಸ್ನಾನಗೃಹ ಯೋಜನೆ ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆಯಿಂದ ಪ್ರಾರಂಭವಾಗಲಿದೆ. ಜಿಲ್ಲೆಯ ಕೊಗನಳ್ಳಿಯಲ್ಲಿ ಪ್ರಾಯೋಗಿಕವಾಗಿ 100 ಶೌಚ ಹಾಗೂ ಶವರ್ ವಿರುದ ಸ್ನಾನಗೃಹ ನಿರ್ಮಿಸಲು ಸಿದ್ಧತೆ ಪ್ರಾರಂಭವಾಗಿದೆ.

ಯೋಜನೆ ಅನುಷ್ಠಾನ ಕುರಿತು ಸಚಿವ ಎಚ್‌.ಕೆ.ಪಾಟೀಲರು ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದು, ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಕಟ್ಟಡದ ವಿನ್ಯಾಸ : ಸರ್ಕಾರ ಪ್ರಿ ಫ್ಯಾಬ್ರಿಕೇಟೆಡ್‌ ಶೌಚ-ಸ್ನಾನದ ಕೋಣೆ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಬೆಂಗಳೂರು ಮೂಲದ ಕಂಪನಿ ಇಂತಹ ಕೋಣೆಗಳನ್ನು ನಿರ್ಮಿಸುತ್ತದೆ. ಐದೂವರೆ ಹಾಗೂ ಮೂರುವರೆ ಅಡಿ ವಿನ್ಯಾಸದಲ್ಲಿ ಶೌಚ ಹಾಗೂ ಶವರ್ ಸ್ನಾನದ ಗೃಹ ನಿರ್ಮಿಸಲಾಗುತ್ತಿದೆ.

ಇದು ನೋಡುವುದಕ್ಕೆ ಒಂದು ಕೋಣೆಯಂತೆ ಕಂಡರೂ, ಅದರಲ್ಲಿಯೇ ಎರಡು ಭಾಗಗಳಿದ್ದು, ಒಂದರಲ್ಲಿ ಸ್ನಾನದ ಕೋಣೆ ಅದರ ಹಿಂದೆ ಶೌಚ ವ್ಯವಸ್ಥೆ ಮಾಡಲು ನೀಲನಕ್ಷೆ ತಯಾರಿಸಲಾಗಿದೆ. ಒಂದು ಸ್ನಾನಗೃಹ ನಿರ್ಮಾಣಕ್ಕೆ 28 ಸಾವಿರ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೌಚಗೃಹ ನಿರ್ಮಾಣಕ್ಕೆ 15 ಸಾವಿರ ರೂ., ಇತರರಿಗೆ 10 ಸಾವಿರ ರೂ.ಸಹಾಯಧನ ನೀಡುತ್ತಿದೆ. ಈ ಹಣದ ಜೊತೆ ಶವರ್ ಬಾತ್ ವುಳ್ಳ ಸ್ನಾನಗೃಹ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ನೀಡಲು ಆಲೋಚಿಸಿದೆ.

ಶವರ್ ಬಾತ್ ವಿರುವ ಸ್ನಾನ ಗೃಹದಿಂದ ನೀರಿನ ಮಿತಬಳಕೆ ಆಗಲಿದೆ. ಗ್ರಾಮೀಣ ಭಾಗದ ಜನರ ಆತ್ಮಾಭಿಮಾಣ ಹೆಚ್ಚಾಗಲಿದೆ. ಇದು ಪ್ರಾಯೋಗಿಕ ಕಾರ್ಯಕ್ರಮ ಜನರ ಪ್ರತಿಕ್ರಿಯೆ ನೋಡಿ ಯೋಜನೆ ಜಾರಿ ಮಾಡುವ ಕುರಿತು ಚಿಂತಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

English summary
Karnataka government plans to build toilets and shower bath facility Bathroom in villages said, Rural development and Panchayat Raj minister H. K.Patil. The trial basis project begins from Belgaum district soon. for provide better facility in rural areas government plans to build these Bathrooms he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X