ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ರಜನಿಕಾಂತ್ ರಾಜಕೀಯ ಎಂಟ್ರಿ ಏನಾಯ್ತು?

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 6: ದಕ್ಷಿಣ ಭಾರತದ ಸೂಪರ್ ಸ್ಟಾರ್, ಕನ್ನಡಿಗ ರಜನಿಕಾಂತ್ ಅವರ ಇಬ್ಬರು ಅತ್ಯಾಪ್ತ ಮಿತ್ರರು ಇತ್ತೀಚೆಗೆ ನಮ್ಮ ಒನ್ಇಂಡಿಯಾ ಕಚೇರಿಗೆ ಭೇಟಿ ನೀಡಿದ್ದರು.

ಗೆಳೆಯರಾದ ಬಿಟಿಎಸ್ ಡ್ರೈವರ್ ರಾಜ್ ಬಹಾದ್ದೂರ್ ಮತ್ತು ಗೋಪಿನಾಥ್ ರಾವ್ ಅವರು ನಟ ರಜನಿಕಾಂತ್ ಅವರ ಬಗ್ಗೆ ಸಾಕಷ್ಟು ಮಾತನಾಡಿದರು. ಮುಖ್ಯವಾಗಿ ರಜನಿಕಾಂತ್ ರಾಜಕೀಯಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆ ಕೇಳೀದ್ದೇ ತಡ ರಾಜ್ ಬಹಾದ್ದೂರ್ ಅವರಂತೂ ತುಸು ಸಿಟ್ಟಿಗೆದ್ದರು. ಯಾಕೆ ಸ್ವಾಮಿ ಅವರು ಈಗ ಮಾನ/ಮರ್ಯಾದೆ/ ನೆಮ್ಮದಿಯಿಂದ ಬಾಳುತ್ತಿರುವುದು ಬೇಡವಾ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪರೂಪದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...

Super star Rajinikanth political entry close friends red signal

ರಾಜಕೀಯಕ್ಕೆ ಬಂದು ಶಿವಾಜಿ (ರಜನಿಕಾಂತ್ ಅವರನ್ನು ಶಿವಾಜಿ ಅಂತಲೇ ಜೋಡಿ ಸಂಬೋಧಿಸುವುದು) ಅದನ್ನೆಲ್ಲಾ ಕಳೆದುಕೊಳ್ಳಬೇಕಾ? ಅಪರೂಪಕ್ಕೆ ಸಿಕ್ಕಿದಾಗಲೆಲ್ಲ ಅವನೇ ಕೇಳುತ್ತಿರುತ್ತಾನೆ? ಏನ್ರೋ ನಾನು ರಾಜಕೀಯಕ್ಕೆ ಸೇರಿಕೊಳ್ಳಲಾ ಅಂತ. ಆದರೆ ನಾವು ಕಡ್ಡಿಮುರಿದಂತೆ ಸ್ಪಷ್ಟವಾಗಿ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಬಾರದು.

ಮತ್ತು ಜೀವನುದ್ದಕ್ಕೂ ಶ್ರಮಪಟ್ಟು ಗಳಿಸಿಕೊಂಡು ಬಂದಿರುವ ಮಾನ/ಮರ್ಯಾದೆ/ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಡವೋ ಎಂದು ತಿಳಿಯಹೇಳುತ್ತೇವೆ. ಅದಕ್ಕೆ ರಜನಿ ಅವನದೇ ಸ್ಟೈಲಿನಲ್ಲಿ ಕುಹಕ ನಗೆ ನಕ್ಕು ಸುಮ್ಮನಾಗುತ್ತಾನೆ. ಆದರೂ ಅವನು ಯಾವಾಗ ಏನು ಮಾಡುತ್ತಾನೋ ಗೊತ್ತಾಗೋದೇ ಇಲ್ಲ ಎಂದು ಗೆಳೆಯನ ರಾಜಕೀಯ ಆರಂಗೇಟ್ರಂ ಬಗ್ಗೆ ರಾಜ್ ಬಹಾದ್ದೂರ್ ಮತ್ತು ಗೋಪಿನಾಥ್ ಹೇಳುತ್ತಾರೆ. ಕಾಲಾಯತಸ್ಮೈನಮಃ!

English summary
Matinee idol, Super star, Kannadiga to the core Mr. Rajinikanth's close friend Mr Raj Bahadur and a close relative of Rajinikanth Mr. Gopinath Rao had visited Oneindia office in Bangalore recently. During a close chit chat with the duo we derived a conclusion that Rajinikanth wont enter political arena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X