ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಇನ್ನೂ ಬರ ಇದೆ

By Mahesh
|
Google Oneindia Kannada News

ಬೆಂಗಳೂರು, ಆ.4: ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ನದಿಗಳಲ್ಲಿ ಪ್ರವಾಹ ಉಕ್ಕಿ ಹರಿದು ಜಲಾಶಯಗಳು ಭರ್ತಿಯಾದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬರ ಇನ್ನಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ರಾಜ್ಯದ ಒಳ ನಾಡಿನ 13 ತಾಲೂಕುಗಳ 104 ಹೋಬಳಿಗಳಲ್ಲಿ ಮಳೆ ಅಭಾವ ಕಂಡು ಬಂದಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಇಲ್ಲಿದೆ

2013ರ ಅಸೆಂಬ್ಲಿ ಚುನಾವಣೆಗೂ ಮುನ್ನ ರಾಜ್ಯದ ಶೇ 10 ಭಾಗ ಅಥವಾ 176 ತಾಲೂಕುಗಳಲ್ಲಿ 142 ತಾಲೂಕುಗಳು ಬರ ಪೀಡಿತವಾಗಿತ್ತು. ಇದಕ್ಕಾಗಿ ಕೇಂದ್ರದಿಂದ ಸುಮಾರು 4500 ಕೋಟಿ ರು ಅನುದಾನ ಕೂಡಾ ಸಿಕ್ಕಿತ್ತು. ಈ ಬಾರಿ ಹಲವು ಭಾಗದಲ್ಲಿ ಅತಿವೃಷ್ಟಿಯಾಗಿದೆ.

ಆದರೆ, ಮಳೆ ಕೊರತೆಯಿಂದ 3,553 ಸಣ್ಣ ಜಲಾಶಯಗಳ ಪೈಕಿ 2,331 ಕೆರೆಗಳಿಗೆ ಮುಂಗಾರು ಮಳೆ ನೀರು ಒದಗಿಸಿಲ್ಲ. ಕೇವಲ 122 ಕೆರೆಗಳು ಮಾತ್ರ ರಾಜ್ಯದಲ್ಲಿ ಭರ್ತಿಯಾಗಿವೆ. 285 ಕೆರೆಗಳು ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿವೆ.

ಬೆಂಗಳೂರು ನಗರ ಜಿಲ್ಲೆಯ 47 ಕೆರೆಗಳಲ್ಲಿ 36 ಕೆರೆಗಳಲ್ಲಿ ನೀರಿಲ್ಲ. ಕೇವಲ 2 ಕೆರೆಗಳು ಮಾತ್ರ ಭರ್ತಿಯಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 98 ಕೆರೆಗಳ ಪೈಕಿ ಒಂದು ಕೆರೆ ಕೂಡಾ ಭರ್ತಿಯಾಗಿಲ್ಲ. 68 ಕೆರೆಗಳಿಗೆ ನೀರೇ ಬಂದಿಲ್ಲ. ಶೇ. 30ಕ್ಕಿಂತ ಹೆಚ್ಚು ನೀರು ಒಂದು ಕೆರೆಗೂ ಬಂದಿಲ್ಲ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.

Karnataka Monsoon, Drought in Interior Parts

ಸೂಪಾ, ಲಿಂಗನಮಕ್ಕಿ, ಘಟಪ್ರಭ, ಮಲಪ್ರಭ ಜಲಾಶಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಲಿಂಗನಮಕ್ಕಿ ಜಲಾಶಯವು ಶೀಘ್ರದಲ್ಲೇ ಭರ್ತಿಯಾಗುವ ಲಕ್ಷಣಗಳಿವೆ. ಉಳಿದ ಮೂರು ಜಲಾಶಯಗಳು ಕೂಡ ಇನ್ನೊಂದು ತಿಂಗಳೊಳಗಾಗಿ ಭರ್ತಿಯಾಗುವ ಸಾಧ್ಯತೆಗಳಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಪ್ಪಳ, ಬಳ್ಳಾರಿ, ಚಾಮರಾಜನಗರ, ಮಂಡ್ಯ, ಯಾದಗಿರಿ, ತುಮಕೂರು, ಚಿಕ್ಕಬಳ್ಳಾಪುರ, ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಮಳೆ ಕೊರತೆ ಉಂಟಾಗಿದೆ. ಆದರೆ, ರಾಜ್ಯದಲ್ಲಿ ಒಟ್ಟಾರೆ ವಾಡಿಕೆಗಿಂತ ಶೇ.55 ರಷ್ಟು ಹೆಚ್ಚು ಮಳೆಯಾಗಿದೆ.

ರಾಜ್ಯದ 176 ತಾಲ್ಲೂಕುಗಳ ಪೈಕಿ 75 ತಾಲೂಕುಗಳ 309 ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ಅತಿವೃಷ್ಟಿಗೆ ಕಾರಣವಾಗಿದೆ. 88 ತಾಲೂಕುಗಳ 334 ಹೋಬಳಿಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಎರಡು ತಿಂಗಳ ಸರಾಸರಿ ಶೇ.21ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಸರಾಸರಿ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 41.94 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆಯಾಗುವುದು ವಾಡಿಕೆ. ಆದರೆ, ಅತಿವೃಷ್ಟಿ ಮತ್ತು ಅನಾವೃಷ್ಟಿ ನಡುವೆ 43.62 ಲಕ್ಷ ಹೆಕ್ಟೇರ್ ನಲ್ಲಿ ಈಗಾಗಲೇ ಬಿತ್ತನೆಯಾಗಿದೆ.

ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಗಳೆರಡೂ ಕಂಡು ಬಂದಿದೆ. ಕಳೆದ ಎರಡು ವಾರದಲ್ಲಿ ರಾಜ್ಯದ ಒಳನಾಡಿನಲ್ಲಿ ಮಳೆ ಕೊರತೆ ಉಂಟಾಗಿದ್ದು, ಬರದ ಛಾಯೆ ಮತ್ತೆ ಕಾಡತೊಡಗಿದೆ.

ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾದರೂ ಆನಂತರ ಒಂದು ಹೋಬಳಿಯಲ್ಲಿ ಮಳೆ ಬಿದ್ದರೆ, ಮತ್ತೊಂದು ಹೋಬಳಿಯಲ್ಲಿ ಮಳೆ ಕೊರತೆ ಉಂಟಾಗಿರುವುದು ಕಂಡು ಬಂದಿದೆ.

English summary
Drought is officially over in Karnataka says CM Siddaramaiah. With water levels in all major dams almost to the brim owing to heavy rains this year. But, 13 taluks in interior part of state yet to receive rain says Natural disaster monitoring centre report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X