ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸಮೀಪ ಬೃಹತ್ ಬಸವಣ್ಣ ಪ್ರತಿಮೆ

By Mahesh
|
Google Oneindia Kannada News

Basavanna's 111-feet statue to be constructed near Bangalore
ಬೆಂಗಳೂರು, ಆ.4: ಬೆಂಗಳೂರು-ಮೈಸೂರು ರಸ್ತೆಯ ಕುಂಬಳಗೋಡು ಸಮೀಪದ ಬಸವಗಂಗೋತ್ರಿ ಬಳಿ ಭಕ್ತಿ ಭಂಡಾರಿ ಅಣ್ಣ ಬಸವಣ್ಣ ಅವರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ವಿಶ್ವಕಲ್ಯಾಣ ಮಿಷನ್ ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ.

ಸುಮಾರು 5 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಪ್ರತಿಮೆಯ ಎತ್ತರ ಸುಮಾರು 111 ಅಡಿ ಮೀರಲಿದೆ. ಬಸವ ಧರ್ಮ ಪೀಠದ ಮುಖ್ಯಸ್ಥೆ ಮಾತೆ ಮಹಾದೇವಿ ಅವರು ಪ್ರತಿಮೆ ನಿರ್ಮಾಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಸುಮಾರು 30 ಅಡಿ ತಳಪಾಯದ ಮೇಲೆ ಬೃಹತ್ ಬಸವ ಮೂರ್ತಿ ನೆಲೆ ನಿಲ್ಲಲಿದೆ. ತಳಪಾಯದಲ್ಲಿ ಬಸವಣ್ಣ ಅವರ ಆಯ್ದ ವಚನಗಳನ್ನು ಕೆತ್ತಲಾಗುತ್ತದೆ. ಬಸವ ತತ್ತ್ವ ಹಾಗೂ ಬಸವಣ್ಣ ಅವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇನ್ನಷ್ಟು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ಮಾತೆ ಮಹಾದೇವಿ ಹೇಳಿದರು.

ಲಿಂಗಾಯತ ಎಂಬುದು ಜಾತಿ ಅಥವಾ ಸಮುದಾಯವಲ್ಲ, ಲಿಂಗಾಯತ ಎಂಬುದು ಧರ್ಮ. ಲಿಂಗಾಯತರಿಗೆ ಸೂಕ್ತ ಸ್ಥಾನ ಸಿಗಲು ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಲಿಂಗಾಯತರಂತೆ ಜೈನ, ಸಿಖ್, ಪಾರ್ಸಿ, ಬೌದ್ಧ ರಂತೆ ಲಿಂಅಗಯತ ಕೂಡಾ ಪ್ರತ್ಯೇಕ ಧರ್ಮ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ತಿಳಿ ಹೇಳಬೇಕು. ಲಿಂಗಾಯತರಿಗೆ ಪ್ರತ್ಯೇಕ ಆಚಾರ ವಿಚಾರಗಳಿದೆ, ಸಂಪ್ರದಾಯ ಕಟ್ಟಳೆ, ಧಾರ್ಮಿಕ ವಿಧಿ ವಿಧಾನಗಳಿವೆ ಎಂದು ಮಾತೆ ಮಹಾದೇವಿ ಹೇಳಿದರು.

ಬಸವಣ್ಣ ಅವರ ಜೀವನ ಮತ್ತು ಸಂದೇಶಗಳ ಬಗ್ಗೆ ಜನತೆ ಅರಿವು ಮೂಡಿಸಲು ದೊಡ್ಡ ಮಟ್ಟದ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಲಿಂಗಾಯತ ರಾಜಕಾರಣಿಗಳು ಲಿಂಗಾಯತ ಧರ್ಮಕ್ಕೆ ಹೆಚ್ಚಿನ ಸ್ಥಾನ ಮಾನ ಸಿಗುವಂತೆ ಮಾಡಲು ಶ್ರಮಿಸುತ್ತಿಲ್ಲ ಎಂದು ಮಾತೆ ಮಹಾದೇವಿ ವಿಷಾದ ವ್ಯಕ್ತಪಡಿಸಿದರು.

English summary
Vishwakalyan Mission Charitable Trust (Bangalore) will construct a 111-foot statue of 12th century saint reformer Basavanna at Basavagangotri near Kumbalgodu village off Bangalore-Mysore Road. The project will cost the trust Rs 5 crore, which will be raised from public said Maate Mahadevi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X