Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಮೈಸೂರಿನ ಎಸ್ಪಿಐ ತೆಕ್ಕೆಗೆ ನ್ಯೂಜೆರ್ಸಿ ಕಂಪನಿ

Posted by:
Published: Tuesday, July 16, 2013, 15:49 [IST]
 

ಮೈಸೂರಿನ ಎಸ್ಪಿಐ ತೆಕ್ಕೆಗೆ ನ್ಯೂಜೆರ್ಸಿ ಕಂಪನಿ

ಮೈಸೂರು, ಜು.16: ಇಲ್ಲಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ವಿಶಾಲ ಕಚೇರಿ ಹೊಂದಿರುವ ಎಸ್ ಪಿಐ ಸಮೂಹ ಸಂಸ್ಥೆ ತೆಕ್ಕೆಗೆ ನ್ಯೂಜೆರ್ಸಿ ಮೂಲದ ಐಟಿಆರ್ ಸಾಫ್ಟ್ ವೇರ್ ಹಾಗೂ ಸರ್ವೀಸಸ್ ಸಂಸ್ಥೆ ಸೇರಿಕೊಂಡಿದೆ. ಎಸ್ ಪಿಐ ಸಂಸ್ಥೆಯ ರೀಟೈಲ್ ಕ್ಷೇತ್ರದ ವಾಣಿಜ್ಯ ಉದ್ದೇಶಗಳಿಗೆ ಐಟಿಆರ್ ತಂತ್ರಜ್ಞಾನದ ನೆರವು ನೀಡಲಿದೆ.

ಐಟಿಆರ್ ಸಂಸ್ಥೆ ಎಸ್ ಪಿಐನ ಐದನೇ ಖರೀದಿಯಾಗಿದೆ. ಈ ಮುಂದೆ ಮೈಸೂರಿನ ಕೊಮಾಟ್ ಟೆಕ್ನಾಲಜೀಸ್(ಟ್ರಾನ್ಸ್ ಸ್ಕ್ರಿಪ್ಷನ್ ಕಂಪನಿ 2007ರಲ್ಲಿ ಖರೀದಿ), ಆಸ್ಟ್ರೇಲಿಯಾದ ಸಿಆರ್ ಜಿ (ಆಡಿಟ್ ರಿಕೆವರಿ ಕಂಪನಿ 2010ರಲ್ಲಿ ಖರೀದಿ), ನೇಪಾಳದ ವರ್ಲ್ಡ್ ಲಿಂಕ್ ಟೆಕ್ನಾಲಜೀಸ್ (ಕನ್ಸಲ್ಟಿಂಗ್, ಡೆವೆಲಪ್ಮೆಂಟ್, ಬ್ಯಾಂಕಿಂಗ್ ಸೇವೆ ಸಾಫ್ಟ್ ವೇರ್ ಸಲ್ಯೂಷನ್ 2011ರಲ್ಲಿ ಖರೀದಿ) ಹಾಗೂ ಅಂಟ್ಲಾಟದ ಸರ್ಕಲ್ ಟೆಕ್ನಾಲಜೀಸ್ ಕಂಪನಿ (ಸ್ಟಾಫಿಂಗ್ ಕಂಪನಿ ಅಕ್ಟೋಬರ್ 2012ರಲ್ಲಿ ಖರೀದಿ) ಗಳನ್ನು ಎಸ್ ಪಿಐ ತನ್ನದಾಗಿಸಿಕೊಂಡಿದೆ.

'ಸದ್ಯಕ್ಕೆ ಪ್ರಾಡೆಕ್ಟ್ ಹಾಗೂ ಸರ್ವೀಸ್ ಕ್ಷೇತ್ರದಿಂದ ಶೇ 5 ರಷ್ಟು ಮಾತ್ರ ಆದಾಯ ಗಳಿಸುತ್ತಿದ್ದೇವೆ. 2015ರ ವೇಳೆಗೆ ಶೇ 20ರಷ್ಟು ಆದಾಯ ಗಳಿಸುವ ನಿರೀಕ್ಷೆಯಿದೆ. ರೀಟೈಲರ್ ಗಳ ಬೇಡಿಕೆಗೆ ತಕ್ಕಂತೆ ಉತ್ಪನ್ನ ಹಾಗೂ ಸೇವೆ ಒದಗಿಸುವುದು ನಮ್ಮ ಗುರಿ. ಹೀಗಾಗಿ 2015ರ ತನಕ ಇನ್ನಷ್ಟು ಕಂಪನಿಗಳ ಜೊತೆ ವಿಲೀನ, ಒಪ್ಪಂದ, ಖರೀದಿ ಮುಂದುವರೆಯಲಿದೆ' ಎಂದು ಎಸ್ ಪಿಐ ನ ಜಾಗತಿಕ ಸಿಇಒ ಹಾಗೂ ಸಹ ಸ್ಥಾಪಕ ಸಿದ್ ಮುಖರ್ಜಿ ಹೇಳಿದ್ದಾರೆ.

'ರೀಟೈಲರ್ ಖರೀದಿ ಪ್ರಕ್ರಿಯೆಯಲ್ಲಿ ಸಹಾಯಕವಾಗುವ ಬಿಸಿನೆಸ್ ಕೌಶಲ್ಯ ಉಪಕರಣಗಳನ್ನು ಐಟಿಆರ್ ಸಾಫ್ಟ್ ವೇರ್ ವಿನ್ಯಾಸಗೊಳಿಸಿದೆ. ಇದರಿಂದ ಯೋಜನೆ, ಖರೀದಿ, ಅಳವಡಿಕೆ, ನೇಮಕಾತಿ ಪ್ರಕ್ರಿಯೆ ಸುಲಭ ಸಾಧ್ಯವಾಗಲಿದೆ' ಎಂದು ಮುಖರ್ಜಿ ಹೇಳಿದ್ದಾರೆ.

English summary
SPI has acquired ITR Software, a New Jersey based Software and Services organization that is dedicated to providing merchandising solutions to the retail industry.ITR Software is SPI’s fifth acquisition The earlier acquisitions are : Comat Technologies Mysore, CRG Australia,WorldLink Technologies Nepal, Circle Technologies Inc. Atlanta
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like