ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ವೃತ್ತಿ, ಮನರಂಜನೆ ಇತರೆ ತೆರಿಗೆ ವಿವರ

By Mahesh
|
Google Oneindia Kannada News

ಬೆಂಗಳೂರು, ಜು.14: ಮುಖ್ಯಮಂತ್ರಿಯಾಗಿ ಚೊಚ್ಚಲ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಆದ ಡಾ. ವೈವಿ ರೆಡ್ಡಿ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ 14ನೇ ಹಣಕಾಸು ಆಯೋಗವನ್ನು ಸ್ವಾಗತಿಸಿದ್ದಾರೆ. ಈ ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಂಚಿಕೆ ಹಾಗೂ ತೆರಿಗೆ ಉತ್ಪನ್ನಗಳ ಕುರಿತಂತೆ ಶಿಫಾರಸ್ಸು ಸಲ್ಲಿಸಲಿದೆ.

ಖಜಾನೆ II : ಖಜಾನೆ ಸ್ವಯಂಚಾಲಿತ ಯೋಜನೆ ವಿಸ್ತೃತ, ಸುಧಾರಿತ ಹಾಗೂ ಸಮಗ್ರ ಅರ್ಥಿಕ ನಿರ್ವಹಣಾ ಪದ್ಧತಿಯಾಗಿದೆ. ಸರ್ಕಾರಿ ಹಣಕಾಸು ವ್ಯವಹಾರ ಮಾಹಿತಿ, ವಿವಿಧ ಇಲಾಖೆ, ಬ್ಯಾಂಕ್, ಖಜಾನೆ, ಮಹಾಲೇಖಪಾಲರ ಪರಸ್ಪರ ವಿನಿಮಯ, ಇಲಾಖೆಗಳ ಬಿಲ್ಲು ತಯಾರಿಕೆ ಆನ್ ಲೈನ್ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ. ವರ್ಷಾಂತ್ಯದಲ್ಲಿ ಈ ಯೋಜನೆ ಜಾರಿಯಾಗಲಿದೆ.

Karnataka Budget 2013-14: VAT, Transport, E‌xcise, Commercial, Sales Proposals

ತೆರಿಗೆ ಪ್ರಸ್ತಾಪಗಳು:
* ಸಕ್ಕರೆ ಮೇಲಿನ ಶೇ 1 ರ ಪ್ರವೇಶ ತೆರಿಗೆ ವಿನಾಯಿತಿ
* ಪಿಗ್ಮಿ ಏಜೆಂಟುಗಳು ಮತ್ತಿತರ ಏಜೆಂಟುಗಳಿಗೆ ವೃತ್ತಿ ತೆರಿಗೆ ವಿನಾಯಿತಿಗಾಗಿ ವಾರ್ಷಿಕ ಆದಾಯ ಮಿತಿ ರು. 1.2 ಲಕ್ಷಕ್ಕೆ ಏರಿಕೆ
* ಮನರಂಜನಾ ತೆರಿಗೆ: ಚಲನಚಿತ್ರ ಮಂದಿರಗಳ ಮಾಲೀಕರು ವಸೂಲು ಮಾಡಬಹುದಾದ ಸೇವಾ ಶುಲ್ಕದಲ್ಲಿ ಹವಾ ನಿಯಂತ್ರಿತ ಮತ್ತು ತಂಪು ಹವಾ ಸೌಲಭ್ಯವಿರುವ ಚಿತ್ರಮಂದಿರಗಳಲ್ಲಿ ಪ್ರತಿಯೊಬ್ಬರಿಗೆ ರು 1.50 ರಿಂದ ರು 3ಕ್ಕೆ ಹಾಗೂ ಇತರೆ ಚಿತ್ರಮಂದಿರಗಳಲ್ಲಿ ಪ್ರತಿಯೊಬ್ಬರಿಗೆ ರು 1 ರಿಂದ ರು 2ಕ್ಕೆ ಏರಿಕೆ
* ಸರಕು ಮತ್ತು ಸೇವಾ ತೆರಿಗೆ : ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಿಎಎಸ್ ಟಿ ಸಮಾಲೋಚನಾ ಸಮಿತಿ ರಚನೆ
* ವಾಣಿಜ್ಯ ತೆರಿಗೆ : 2013-14ನೇ ಸಾಲಿಗೆ 37,740 ಕೋಟಿ ರುಗಳ ತೆರಿಗೆ ಸಂಗ್ರಹಣೆ ಗುರಿ ನಿಗದಿ
* ಮೌಲ್ಯವರ್ಧಿತ ತೆರಿಗೆ: ವ್ಯಾಪಾರಿಗಳಿಗೆ ರಿಟರ್ನ್ ಗಳ ಜೊತೆಗೆ ತಮ್ಮ ಖರೀದಿ ಮತ್ತು ಮಾರಾಟಗಳ ವಿವರಗಳನ್ನು ಸಲ್ಲಿಸುವ ಸೌಲಭ್ಯ
* ಮೌಲ್ಯವರ್ಧಿತ ತೆರಿಗೆ ದರಗಳಲ್ಲಿನ ಶೇ 5 ರಿಂದ ಶೇ 5.5ಕ್ಕೆ ಮತ್ತು ಶೇ 14 ರಿಂದ ಶೇ 14.5ಕ್ಕೆ ಏರಿಕೆ 2013ರ ಜುಲೈ 31 ರ ನಂತರವೂ ಮುಂದುವರಿಕೆ
* 300 ರುಗಳ ವರೆಗಿನ ಬೆಲೆಯ ಪಾದರಕ್ಷೆಗಳ ತೆರಿಗೆ ವಿನಾಯಿತಿ
ಮಾರಾಟ ತೆರಿಗೆ:
*ಡೀಸೆಲ್ ಮೇಲಿನ ಮಾರಾಟ ತೆರಿಗೆ ಶೆ 16.75 ರಿಂದ ಶೇ 15.65ಕ್ಕೆ ಇಳಿತ, ತೆರಿಗೆ ಕಡಿತದಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 51 ಪೈಸೆಯಷ್ಟು ಇಳಿತ.
* ಕಬ್ಬಿನ ಮೇಲಿನ ಖರೀದಿ ತೆರಿಗೆಯಲ್ಲಿ ಪ್ರತಿ ಟನ್ನಿಗೆ 20 ರು ನಷ್ಟು ಹಾಗೂ ರಸ್ತೆ ಸೆಸ್ ನಲ್ಲ್ 5 ರು ನಷ್ಟು ಇಳಿತ
English summary
Finance minister, Chief Minister Siddaramaiah presented maiden Budget 2013-14 today. Here is the detail report on VAT, Transport, Excise, Commercial, Sales, Entry, Professional tax, Entertainment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X