ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಮಾಹಿತಿ ,ಜೈವಿಕ ತಂತ್ರಜ್ಞಾನ ಕ್ಷೇತ್ರದ ಪಾಲು

By Mahesh
|
Google Oneindia Kannada News

ಬೆಂಗಳೂರು, ಜು.12: ಕಾರ್ಮಿಕ, ಉದ್ಯೋಗ ಹಾಗೂ ತರಬೇತಿ ಕ್ಷೇತ್ರಗಳು ಸೇರಿದಂತೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಚೊಚ್ಚಲ ಬಜೆಟ್ ನಲ್ಲಿ ಸಿಕ್ಕಿದ್ದೇನು? ವಿವರ ಇಲ್ಲಿದೆ ನೋಡಿ....

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಲಯಕ್ಕೆ ಸಿಕ್ಕ ಪ್ರೋತ್ಸಾಹ ಧನದ ವಿವರ ಮುಂದೆ ಓದಿ
* ಈ ಕ್ಷೇತ್ರದಲ್ಲಿ ಕರ್ನಾಟಕವು ಜಾಗತಿಕ ಮನ್ನಣೆ ಪಡೆದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ರಫ್ತು ಪ್ರಮಾಣವನ್ನು ಈಗಿನ 1.35 ಲಕ್ಷ ಕೋಟಿ ರೂ.ಗಳಿಂದ 2020ರ ವೇಳೆಗೆ 4 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವ ಯೋಜನೆ ಹೊಂದಲಾಗಿದೆ.

Karnataka Budget 2013-14: Industry, Trade, IT and BT Share

* ನೇರ ಉದ್ಯೋಗಗಳನ್ನು 8 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಸಮೂಹದ ಶಿಫಾರಸ್ಸುಗಳನ್ನು ಹಂತ ಹಂತವಾಗಿ ಅನುಷ್ಠಾನ
* ಎಲೆಕ್ಟ್ರಾನಿಕ್ ಉತ್ಪಾದನಾ ಸಮೂಹಗಳನ್ನು ಅಭಿವೃದ್ಧಿಪಡಿಸುವ ಹಾಗೂ ಈ ವಲಯದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ಕಾರವು ಎಲೆಕ್ಟ್ರಾನಿಕ್ ವ್ಯವಸ್ಥೆಯ ವಿನ್ಯಾಸ ಹಾಗೂ ಉತ್ಪಾದನಾ ನೀತಿ ಪ್ರಕಟ
* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಮಾಹಿತಿ ತಂತ್ರಜ್ಞಾನ ಬಂಡವಾಳ ಹೂಡಿಕೆ ಪ್ರದೇಶ(ITIR) ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ.
* ಗ್ರಾಮೀಣ ಬಿಪಿಒ ವಲಯಗಳ ಸಾಧ್ಯತೆಗಳನ್ನು ಪರಾಮರ್ಶಿಸಿ ಪುನರ್ ಪ್ರಾಯೋಜಿಸುವ ಉದ್ದೇಶವಿದೆ. ಏರುಗತಿಯಲ್ಲಿ ಬೆಳೆಯುತ್ತಿರುವ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಗುಲ್ಬರ್ಗಾ ನಗರಗಳಲ್ಲಿ ಐ.ಸಿ.ಟಿ. ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಪ್ರಯತ್ನ
* ಐಐಐಟಿ ಸ್ಥಾಪನೆ: ರಾಜ್ಯದಲ್ಲಿ 128 ಕೋಟಿ ರು ಬಂಡವಾಳದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(IIIT) ಧಾರವಾಡಲ್ಲಿ ಸ್ಥಾಪನೆಗೆ ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ. ರಾಜ್ಯ ಸರ್ಕಾರವು 45 ಕೋಟಿ ರೂ.ಗಳ ವಂತಿಕೆ ಭರಿಸಲಿದೆ.
* ಶಾಲಾ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನದ ಆಸಕ್ತಿಯನ್ನು ಹೆಚ್ಚಿಸಿ ಜ್ಞಾನವನ್ನು ವೃದ್ಧಿಸಲು ಮೊಬೈಲ್ ಮಾಹಿತಿ ತಂತ್ರಜ್ಞಾನ ಲ್ಯಾಬ್ ಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.
* ಸಾರ್ವಜನಿಕರಿಗೆ Wi-Fi ಸೇವೆ ಒದಗಿಸಲು ಬೆಂಗಳೂರಿನ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಪೈಲಟ್ ಯೋಜನೆ ಆರಂಭ. ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಮೈಸೂರು ನಗರಗಳಿಗೆ ವಿಸ್ತರಣೆ
* DNA Synthesis ಹಾಗೂ ನ್ಯಾನೋ ಟೆಕ್ನಾಲಜಿ ಉನ್ನತ ಸಂಶೋಧನೆ ಹಾಗು ವಾಣಿಜ್ಯ ಕೌಶಲ್ಯ ಪರಿವರ್ತನ ಕೇಂದ್ರ ಬೆಂಗಳೂರಿನ IBAB ಕ್ಯಾಂಪಸ್ ನಲ್ಲಿ ಸ್ಥಾಪನೆ.
* ಇ -ಜಿಲ್ಲಾ ಯೋಜನೆ 9 ಇಲಾಖೆ 132 ನಾಗರೀಕ ಸೇವೆ ಒದಗಿಸಲಾಗುತ್ತದೆ
* KSWAN ಮೂಲಕ ಎಲ್ಲಾ ತಾಲೂಕುಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ
* ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಯೋಜನೆ ಮರು ಚಾಲನೆ ಸಣ್ಣ ಕಂಪನಿಗಳಿಗೆ ಪ್ರೋತ್ಸಾಹ. 195 ಕೋಟಿ ಅನುದಾನ

English summary
Finance minister, Chief Minister Siddaramaiah presented maiden Budget 2013-14 today. Here is the detail report on Industry, Trade, Information Technology and Bio Technology Share
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X