ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕೆಂಪೇಗೌಡ ಪ್ರಶಸ್ತಿ: ಇದು ಮೊದಲ ಪಟ್ಟಿ

By Srinath
|
Google Oneindia Kannada News

ಬೆಂಗಳೂರು, ಜೂನ್ 29: ರಾಜಧಾನಿ ನಿರ್ಮಾತೃ ಕೆಂಪೇಗೌಡರ ಜನ್ಮದಿನಾಚರಣೆ ಅಂಗವಾಗಿ ಕೊಡಮಾಡುವ ಪ್ರತಿಷ್ಠಿತ 'ಕೆಂಪೇಗೌಡ ಪ್ರಶಸ್ತಿ'ಗಾಗಿ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ. 2013ನೇ ಸಾಲಿನ ಕೆಂಪೇಗೌಡ ವಾರ್ಷಿಕ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 100 ಮಂದಿಗೆ ನೀಡಲಾಗಿದೆ.

ಸಾಹಿತಿ ಗೊ.ರು. ಚನ್ನಬಸಪ್ಪ , ಸಂಗೀತ ವಿದ್ವಾನ್‌ ಆರ್‌. ಕೆ ಪದ್ಮನಾಭ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 100 ಮಂದಿ ಗಣ್ಯರು ಈ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶನಿವಾರದ ಬೆಳಗ್ಗೆಯ ವೇಳೆಗೆ ಇನ್ನೂ 25 ಮಂದಿ ಈ ಪಟ್ಟಿಗೆ ಸೇರ್ಪಡೆಯಾಗುವ ಅಂದಾಜಿದ್ದು, ಜೂನ್ 29ರ ಸಂಜೆ ಪ್ರಶಸ್ತಿ ವಿತರಣೆ ವೇಳೆಗೆ ಈ ಸಂಖ್ಯೆ ಇನ್ನೂ ಇನ್ನೂ ಹೆಚ್ಚಾಗುವ ಸಾಧ್ಯೆತೆಗಳಿವೆ. ಪಟ್ಟಿ Update ಆಗುತ್ತಿದೆ, ನಿರೀಕ್ಷಿಸಿ

Bangalore BBMP Kempe Gowda award 2013 list announced

2008ರಲ್ಲಿ 295 ಮಂದಿಗೆ ಪ್ರಶಸ್ತಿ ಪ್ರಶಸ್ತಿ ನೀಡಲಾಗಿತ್ತು. ಆದರೆ ಶಾರದಮ್ಮ ಮೇಯರ್ ಆಗಿದ್ದಾಗ ಪ್ರಶಸ್ತಿ ಪಟ್ಟಿಯನ್ನು ಕೇವಲ 50ಕ್ಕೆ ಇಳಿಸಿದರು. ಈ ಬಾರಿ ಪ್ರಶಸ್ತಿ ಮೊತ್ತವನ್ನು 15,000 ರೂ.ಗೆ ಇಳಿಸಲಾಗಿದೆ.

ಅಂದಹಾಗೆ, ಇಂದು ಸಂಜೆ 5 ಗಂಟೆಗೆ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಡಾ ರಾಜ್‌ ಕುಮಾರ್‌ ಗಾಜಿನ ಮನೆ ಆವರಣದಲ್ಲಿ ನಡೆಯಲಿರುವ 'ಕೆಂಪೇಗೌಡ ದಿನಾಚರಣೆ' ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಮಾಜಸೇವೆ ಕ್ಷೇತ್ರ: ಕೆ.ಎನ್‌. ಲಕ್ಷ್ಮಣ್‌ ಗೌಡ, ಸಿ.ಎಸ್‌. ಮಹಾಲಕ್ಷ್ಮೀ, ಆರ್‌. ಗುರುರಾವ್‌, ಎಸ್‌. ವೇಣುಗೋಪಾಲ್‌, ಸಿ. ಕಾಳಯ್ಯ, ಪುಟ್ಟಶಂಕರಯ್ಯ, ಡಾ. ಎನ್‌. ರಾಮರೆಡ್ಡಿ, ನಿವಾರಣಾ ಸಂಸ್ಥೆಯ ಭಾಸ್ಕರ್‌, ಗಂಗಾಧರ್‌, ಜಿ. ಕೃಷ್ಣಮೂರ್ತಿ, ಕೆ ಆರ್‌. ರಂಗನಾಥ್‌..

ಕ್ರೀಡಾ ವಿಭಾಗ: ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌, ಎಚ್‌. ಟಿ ಪ್ರಮೀಳಾ ನಾಗರಾಜು, ಶರತ್‌ ಎಂ. ಗಾಯಕ್‌ ವಾಡ್‌, ಎನ್‌. ಮಧು, ಎನ್‌. ಟಿ ಪ್ರಕಾಶ್‌, ಡಿ.ಎಂ. ಮಂಜುಳ, ಬಿ.ಆರ್‌. ಜನಾರ್ಧನ್‌, ಕು. ಜೀವಿತಾ ಸಚ್ಚಿದಾನಂದ, ವೆಂಕಟಾಚಲ, ಆರ್‌. ಕೆ ಪ್ರಕಾಶ್‌, ಪಿಎಲ್‌ ಎನ್‌. ಸ್ವಾಮಿ, ಆರ್‌. ಚಂದ್ರಶೇಖರ್‌, ಅಪ್ಪು.

ಶಿಕ್ಷಣ ಕ್ಷೇತ್ರ: ಸತೀಶ್‌ ಕುಮಾರ್‌ ಎಸ್‌. ಹೊಸಮನಿ, ಆರ್‌ ಎನ್‌. ಶೈಲಾ, ಪುಟ್ಟತಾಯಮ್ಮ, ಫಾ. ಥಾಮಸ್‌ ಸಿ. ಮ್ಯಾಥುಸ್, ವೆಂಕಟ ರಾಮೇಗೌಡ, ಡಿ.ಕೆ. ಕೋದಂಡರಾಮ.

ವೈದ್ಯಕೀಯ ಕ್ಷೇತ್ರ: ಡಾ. ಸಿ.ಎ. ಕಿಶೋರ್‌, ಡಾ. ಕೆ. ರಾಮದೇವ್‌, ಡಾ. ವಿ. ಅಶೋಕ್‌ ಕುಮಾರ್‌, ಎಂ.ಎಸ್‌. ವೆಂಕಟೇಶ್‌, ಡಾ. ವಿನಯ್‌ ಆರ್‌. ಮೂರ್ತಿ.

ಸಂಗೀತ ಕ್ಷೇತ್ರ: ಗಾಯತ್ರಿ ಕೃಷ್ಣಮೂರ್ತಿ, ಕೆ.ಎಸ್‌. ಶ್ರೀಧರ್‌ ಅಯ್ಯರ್‌, ಫ‌ಯಾಜ್‌ ಖಾನ್‌, ಆರ್‌. ಕೆ ಪದ್ಮನಾಭ, ಸಿ. ಚಲುವರಾಜು, ಎಸ್‌. ಗೋಪಾಲ್‌, ರಮಾ ಅರವಿಂದ್‌, ಅನಂತ, ಶ್ರೀನಿವಾಸ್‌, ಪಿ.ಸಿ. ಸುಬ್ರಮಣ್ಯ, ಟಿ. ವರದರಾಜು, ಎಸ್‌.ವಿ. ಗಿರಿಧರ್‌.

ರಂಗಭೂಮಿ: ಪಿ. ಮುನಿರೆಡ್ಡಿ, ರೇಖಾದಾಸ್‌, ಬ್ಯಾಂಕ್‌ ಜನಾರ್ದನ, ಕೆ.ವಿ. ನಾಗರಾಜಮೂರ್ತಿ, ಕೆ. ಲಕ್ಷ್ಮಯ್ಯ, ವೈಜನಾಥ ಬಿರಾದಾರ, ಮೈಸೂರು ರಮಾನಂದ್‌, ಆರ್‌. ರಂಗಸ್ವಾಮಿ.

ಪತ್ರಿಕೋದ್ಯಮ ವಿಭಾಗ: ಕನ್ನಡಪ್ರಭ ಸುದ್ದಿ ಸಂಪಾದಕ ಪ್ರತಾಪ ಸಿಂಹ, ವಿಜಯ ಕರ್ನಾಟಕ ಸಹ ಸಂಪಾದಕ ವಸಂತ ನಾಡಿಗೇರ, ವಿಜಯವಾಣಿ ಮುಖ್ಯ ವರದಿಗಾರ ರುದ್ರಣ್ಣ ಹರ್ತಿಕೋಟೆ, ಹಿರಿಯ ಪತ್ರಕರ್ತರಾದ ಭಾಸ್ಕರ್ ರಾವ್, ಗುಡಿಹಳ್ಳಿ ನಾಗರಾಜ್, ಉದಯ ಟಿವಿ ಮುಖ್ಯ ವರದಿಗಾರ ವೆಂಕಟೇಶ್‌ಪ್ರಸಾದ್, ಹೊಸದಿಗಂತ ಮುಖ್ಯ ವರದಿಗಾರ ರವಿಮಾಳೇನಹಳ್ಳಿ, ಸಂಯುಕ್ತ ಕರ್ನಾಟಕ ಹಿರಿಯ ವರದಿಗಾರ ರಾಜು ಮಳವಳ್ಳಿ, ಸಂಜೆವಾಣಿ ಹಿರಿಯ ವರದಿಗಾರ ದೊಡ್ಡ ಬೊಮ್ಮಯ್ಯ, ಈ ಸಂಜೆ ಹಿರಿಯ ವರದಿಗಾರ ರಮೇಶ್ ಎಂ ಪಾಳ್ಯ, ಕೆ.ಎಸ್. ಜನಾರ್ದನಚಾರಿ, ಬಾನುಲಿ ನಿರೂಪಕ, ಪತ್ರಕರ್ತ ವಿ. ನಂಜುಂಡಪ್ಪ, ಪತ್ರಿಕಾ ಛಾಯಾಗ್ರಾಹಕ ಎಸ್. ರಾಧಾಕೃಷ್ಣ, ಕಸ್ತೂರಿ ಚಾನಲ್ ವರದಿಗಾರ ಆನಂದ್, ನೇರಮಾತು ಪತ್ರಿಕೆ ಸಂಪಾದಕ ಗಣೇಶ್ ಮೊಕಾಶಿ, ಸುನೀಲ್ ಹೆಗ್ಗರವಳ್ಳಿ ಮತ್ತು ಸೋಮಶೇಖರ ಗಾಂಧಿ, ನಾಗಲಕ್ಷ್ಮೀ ಬಾಯಿ, ಉದಯವಾಣಿ ಪ್ರಧಾನ ವರದಿಗಾರ ಎಸ್. ಲಕ್ಷ್ಮೀನಾರಾಯಣ ಮತ್ತು ಲಿಂಗರಾಜು.

ಸಾಹಿತ್ಯ: ಗೊ.ರು. ಚನ್ನಬಸಪ್ಪ (ಜನಪದ ಸಾಹಿತ್ಯ), ಡಾ. ತುಳಸಿರಾಮ ನಾಯಕ್‌, ಮೊಹಮ್ಮದ್‌ ಅಜಮ್‌ ಶಾಹಿದ್‌.

ಕನ್ನಡ ಸೇವೆ: ಟಿ. ತಿಮ್ಮೇಶ್‌.

ಧಾರ್ಮಿಕ ಕ್ಷೇತ್ರ : ಪೂಜಾರಿ ಕೃಷ್ಣಪ್ಪ, ಡಾ. ಸೂತ್ರಂ ನಾಗರಾಜ ಶಾಸ್ತ್ರೀ, ಡಾ. ಮಹರ್ಷಿ ಆನಂದ ಗುರೂಜಿ, ಸುಬ್ರಮಣ್ಯ ಶಾಸ್ತ್ರಿ.

ಕಲೆ : ಕೆ. ನರಹರಿ ಶಾಸ್ತ್ರಿ, ಡಾ. ಟಿ.ಸಿ. ಸುಂದರಮೂರ್ತಿ, ಪಿ. ರಾಜಶೇಖರ್‌.

ವಿವಿಧ ಕ್ಷೇತ್ರ: ಫ್ಲೈಟ್‌ ಲೆಫ್ಟಿನೆಂಟ್‌ ಕೆ.ಪಿ. ನಾಗೇಶ್‌ (ಸೇನಾಧಿಕಾರಿ), ಜಗನ್ನಾಥ ವಿ. ಪೈ (ಹೋಟೆಲ್‌ ಉದ್ಯಮಿ), ರಾಮಚಂದ್ರ ಉಪಾಧ್ಯಾಯ.

ಯೋಗ: ಎಂ. ಜಯರಾಮ್‌ ಸುವರ್ಣ, ಡಾ. ಶ್ರೀನಿವಾಸರೆಡ್ಡಿ.

ವಿಜ್ಞಾನ ತಂತ್ರಜ್ಞಾನ : ನರಸಿಂಹ ರಾಜ್‌.

ಪೊಲೀಸ್‌: ಟಿ. ವೆಂಕಟೇಶ್‌.

ನೃತ್ಯ: ಸತ್ಯನಾರಾಯಣ ರಾಜು, ಸಿಲ್ಲಿ-ಲಲ್ಲಿ ನಮಿತಾ ರಾವ್‌., ಯಕ್ತಿಶ್ರೀ ಎನ್‌.

ಪರಿಸರ : ಎಸ್‌. ವೆಂಕಟ ಸುಬ್ಬಾರಾವ್‌, ಜಿ. ಶ್ರೀನಿವಾಸಮೂರ್ತಿ.

English summary
Bangalore BBMP Kempe Gowda award 2013 list announced. The first list of 100 persons chosen for the award include cricketer Venkatesh Prasad, writer Go Ru Chennabasappa, film actors Rekha Das and Bank Janardhan, theatre personality K V Nagarajamurthy. The lobbying has been pushing up the number of those chosen for the honour every minute and will continue to grow till the award ceremony at 5 pm on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X