ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಪ್ರಳಯ : ಸಾವಿನ ಸಂಖ್ಯೆ ಸಾವಿರದ ಹತ್ತಿರ

By Prasad
|
Google Oneindia Kannada News

ಗೌಚಾರ್, ಜೂ. 25 : ಜಲಪ್ರಳಯದಿಂದ ಸರ್ವನಾಶವಾಗಿರುವ ಕೇದಾರನಾಥ ಕ್ಷೇತ್ರದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕು ಸತ್ತವರ ಇನ್ನೂ 127 ದೇಹಗಳನ್ನು ಪತ್ತೆಹಚ್ಚಲಾಗಿತ್ತು, ಒಟ್ಟಾರೆ ಸಾವಿನ ಸಂಖ್ಯೆ ಅಧಿಕೃತವಾಗಿ 822ಕ್ಕೇರಿದೆ. ಹೂಳಿನಲ್ಲಿ ಇನ್ನೂ ಸಾವಿರಾರು ದೇಹಗಳು ಹುದುಗಿರಬಹುದು, ಪ್ರವಾಹದಲ್ಲಿ ಕೊಚ್ಚಿಹೋಗಿರಬಹುದೆಂದು ಅಂದಾಜಿಸಲಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಮಳೆ ಮತ್ತೆ ಆರಂಭವಾಗಿದ್ದು, ದಟ್ಟ ಮಂಜು ಕೂಡ ಕವಿದಿರುವುದರಿಂದ ಉತ್ತರಾಖಂಡ ರಾಜ್ಯದಲ್ಲಿ ಇನ್ನೂ ಸಿಲುಕಿಕೊಂಡಿರುವ 9 ಸಾವಿರಕ್ಕೂ ಹೆಚ್ಚಿನ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯ ವಿಳಂಬವಾದರೂ ಶುರುವಾಗಿದೆ. ಡೆಹ್ರಾಡೂನ್‌ನಲ್ಲಿ ದಟ್ಟ ಮಂಜು ಕವಿದಿದ್ದರಿಂದ ಹೆಲಿಕಾಪ್ಟರ್‌ಗಳು ಬೇಗನೆ ಉಡಾವಣೆಯಾಗಲಿಲ್ಲ. ವಾತಾವರಣ ತಿಳಿಯಾದ ನಂತರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಈ ನಡುವೆ, ತೆಹರಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿತ ಉಂಟಾಗಿ ಓರ್ವ ಮಹಿಳೆ ಮತ್ತು ಆಕೆಯ ಮಗು ಸಾವಿಗೀಡಾಗಿರುವ ವರದಿ ಬಂದಿದೆ. ಉತ್ತರ ಪ್ರದೇಶದಲ್ಲಿ ಪ್ರವಾಹದಲ್ಲಿ ಕೊಚ್ಚಿಹೋಗಿ ನದಿಯಲ್ಲಿ ತೇಲಾಡುತ್ತಿದ್ದ 15 ದೇಹಗಳನ್ನು ಹೊರತೆಗೆಯಲಾಗಿದೆ. ಬದರಿನಾಥದಲ್ಲಿ ಅತಂತ್ರರಾಗಿದ್ದ 60 ಸಂತ್ರಸ್ತರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಬದರಿನಾಥ ಮತ್ತು ಕೇದಾರನಾಥದಲ್ಲಿ ಒಟ್ಟು 37 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಬಂಧುಗಳನ್ನು ಕಂಡು ಕಣ್ಣೀರಾದ ದಾಸ್

ಬಂಧುಗಳನ್ನು ಕಂಡು ಕಣ್ಣೀರಾದ ದಾಸ್

ಗೌಹಾತಿಯ 62 ವರ್ಷದ ಸದಾರಿ ದಾಸ್ ತನ್ನ ಮನೆ, ಬಂಧುಗಳನ್ನು ಕಂಡತಕ್ಷಣ ಉತ್ತರಾಖಂಡದಲ್ಲಿ ನರಕ ದರ್ಶನ ಮಾಡಿಬಂದಿದ್ದನ್ನು ನೆನೆದು ಕಣ್ಣೀರಾದರು.

ಪಾರಾಗಿ ಬಂದಿದ್ದೇ ಪವಾಡ

ಪಾರಾಗಿ ಬಂದಿದ್ದೇ ಪವಾಡ

ಉತ್ತರಾಖಂಡದಲ್ಲಿ ಜಲಪ್ರಳಯದಲ್ಲಿ ಸಿಲುಕಿಕೊಂಡು ಕಡೆಗೂ ಪಾರಾಗಿ ಬಂದ ಮುಂಬೈನ ದಂಪತಿಗಳು ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಇಳಿದೊಡನೆ ಬಂಧುಗಳನ್ನು ಅಪ್ಪಿ ಕಂಬನಿ ಮಿಡಿದರು.

ಇನ್ನೂ ಬದುಕಿದ್ದೀನಿ ಕಣೇ

ಇನ್ನೂ ಬದುಕಿದ್ದೀನಿ ಕಣೇ

ಕೇದಾರನಾಥ ಯಾತ್ರೆಗೆ ತೆರಳಿದ್ದ ಹೈದರಾಬಾದಿನ ಯಾತ್ರಾರ್ಥಿಗಳು ಏರ್ಪೋರ್ಟಿನಲ್ಲಿ ಬಂದು ಇಳಿದಾಕ್ಷಣ ಕಂಡ ದೃಶ್ಯ

ಎಂದೂ ಮರೆಯಲಾಗದ ಆ ದಿನಗಳು

ಎಂದೂ ಮರೆಯಲಾಗದ ಆ ದಿನಗಳು

ಉತ್ತರಾಖಂಡದಲ್ಲಿ ಜಲಪ್ರಳಯವನ್ನು ಕಂಡವರು ಈ ಜನ್ಮದಲ್ಲೆಂದೂ ಆ ದಿನಗಳನ್ನು ಮರೆಯಲಾರರು. ಸಾವಿನ ಕದ ತಟ್ಟಿ ಬಂದು ಮುಂಬೈನಲ್ಲಿ ಇಳಿದಾಕ್ಷಣ ಅನುಭವಿಸಿದ ಆ ಸಂತಸವಿದೆಯಲ್ಲ ಅದನ್ನೂ ಮರೆಯಲಾಗದು.

ಮನೆ ಸೇರುವುದೊಂದೇ ಬಾಕಿ

ಮನೆ ಸೇರುವುದೊಂದೇ ಬಾಕಿ

ಮುಂಬೈಗೆ ಹೊರಡಲು ಸಿದ್ಧವಾಗಿರುವ ರೈಲನ್ನೇರಿ ಕುಳಿತಿರುವ ಯಾತ್ರಾರ್ಥಿಗಳು.

ಸಂತ್ರಸ್ತರನ್ನು ಸಂತೈಸುತ್ತಿರುವ ಯೋಧ

ಸಂತ್ರಸ್ತರನ್ನು ಸಂತೈಸುತ್ತಿರುವ ಯೋಧ

ಊಟ, ನಿದ್ದೆ, ವಿಶ್ರಾಂತಿಯಿಲ್ಲದೆ ಮಳೆ, ಗಾಳಿಯಲ್ಲಿ ಜೀವನದ ಅತ್ಯಂತ ಸಂಕಷ್ಟಕರ ದಿನಗಳನ್ನು ಕಳೆದು, ಕೊನೆಗೂ ಸೇನೆಯ ಸಹಾಯದಿಂದ ಪಾರದ ಯಾತ್ರಾರ್ಥಿಗಳನ್ನು ಸಂತೈಸುತ್ತಿರುವ ಯೋಧ. ಯೋಧರಿಗೊಂದು ಸಲಾಂ.

ಸಿಕ್ಕಿದ್ದೇ ಮೃಷ್ಟಾನ್ನ

ಸಿಕ್ಕಿದ್ದೇ ಮೃಷ್ಟಾನ್ನ

ಸೇನೆ ಮತ್ತು ಆಹಾರ ಬರುವವರೆಗೆ ಚಮೋಲಿಯಲ್ಲಿ ಜಲಪ್ರಳಯದಲ್ಲಿ ಸಿಲುಕಿದ್ದ ಯಾತ್ರಾರ್ಥಿಗಳಿಗೆ ಗಾಳಿಯೇ ಆಹಾರವಾಗಿತ್ತು. ಸರಕಾರ ಆಹಾರವನ್ನು ತಲುಪಿಸುತ್ತಿದ್ದಂತೆ ಜನ ಮುಗಿಬಿದ್ದು ಹಸಿವು ನೀಗಿಸಿಕೊಂಡರು.

ನಮ್ಮ ಪಾಳಿ ಎಂದು ಬರುವುದೋ?

ನಮ್ಮ ಪಾಳಿ ಎಂದು ಬರುವುದೋ?

ಜಲಪ್ರಳಯದಿಂದ ಪಾರಾಗಿ ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಉತ್ತರ ಕಾಶಿಯಲ್ಲಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಕಾದಿರುವುದು.

ಯೋಧರಿಗೆ ಒಂದು ಸಲಾಂ

ಯೋಧರಿಗೆ ಒಂದು ಸಲಾಂ

ಗೋವಿಂದ್ ಘಾಟ್ ದಲ್ಲಿ ವಿಷಮ ಪರಿಸ್ಥಿತಿಯಲ್ಲೂ ಗುಡ್ಡಗಾಡಿನಲ್ಲಿ ಸಿಲುಕಿದ್ದ ಜನರನ್ನು ಅತ್ಯಂತ ಸಾಹಸದಿಂದ ರಕ್ಷಿಸುತ್ತಿರುವ ಯೋಧರು.


ದೇಹಗಳು ಕೊಳೆತು ನಾರುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವುದನ್ನು ತಪ್ಪಿಸಲು ಸಾರ್ವತ್ರಿಕವಾಗಿ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆಗಳು ನಡೆದಿವೆ. ಇದಕ್ಕೆ ಧಾರ್ಮಿಕ ಮುಖಂಡರು ಕೂಡ ಅನುಮತಿ ನೀಡಿದ್ದಾರೆ. ದೇಹಗಳ ಗುರುತುಪತ್ತೆ, ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಮಾದರಿ ಸಂಗ್ರಹಣೆ ಆದ ನಂತರ ಅಂತಿಮಕ್ರಿಯೆ ನೆರವೇರಲಿದೆ. ಇದಕ್ಕಾಗಿ ಟ್ರಕ್ಕುಗಟ್ಟಲೆ ದೇವದಾರು ಕಟ್ಟಿಗೆ ಮತ್ತು ತುಪ್ಪಗಳನ್ನು ರವಾನಿಸಲಾಗಿದೆ. ಬದರಿನಾಥದಲ್ಲಿ ಕರ್ನಾಟಕದ ಇನ್ನೂ 200 ಯಾತ್ರಾರ್ಥಿಗಳು ಸಿಲುಕಿದ್ದು ಅವರನ್ನು ರಕ್ಷಿಸಲು ಸರ್ವಪ್ರಯತ್ನಗಳು ನಡೆದಿವೆ.

English summary
Another 127 bodies have been recovered in Uttarakhand since Monday in flood-hit area. The death toll mounted to 822 so far, as per official records. Totally 37 helicopters were deployed to rescue stranded pilgrims in Badrinath. Preparations are on to conduct mass ritual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X