ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಏರುಪೇರು: ಭಾರತಕ್ಕೆ ಕಾದಿದೆ ಗಂಡಾಂತರ

By Srinath
|
Google Oneindia Kannada News

ನವದೆಹಲಿ, ಜೂನ್ 20: ಉತ್ತರ ಭಾರತದಲ್ಲಿನ ವರುಣ ವೈಪರೀತ್ಯ ಕಂಡಿ ಇಡೀ ಭಾರತವೇ ಬೆಚ್ಚಿಬಿದ್ದಿದೆ. ಆದರೆ ಭಾರತಕ್ಕೆ ಕಾದಿದೆ ಇದಕ್ಕಿಂತಲೂ ಭಿನ್ನ ಗಂಡಾಂತರ. ಜಾಗತಿಕ ತಾಪಮಾನ ಏರಿಕೆ ಬಗ್ಗೆ ಬುಧವಾರ ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ವರದಿ ನಿಜಕ್ಕೂ ಭಯಯಾನಕವಾಗಿದೆ.

ಭಾರತ ಸೇರಿದಂತೆ ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಬಿಡುಗಡೆ ಮಾಡಿರುವ ವಿಶ್ವ ಬ್ಯಾಂಕ್, global warming ಪರಿಣಾಮವಾಗಿ ಬರಗಾಲ, ಕ್ಷಾಮಗಳು, ವಿಪರೀತ ಬೇಸಿಗೆ, ಅನಾವೃಷ್ಟಿ, ಅತೀವೃಷ್ಟಿ, ಆಹಾರ ಕೊರತೆ ಭಾರತವನ್ನು ಕಾಡಲಿದೆ. ಉತ್ತರ ಭಾರತ, ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ಕ್ಷಾಮ ಕಾಡಲಿದೆ. ಒಂದೆಡೆ ವಿಪರೀತ ಬೇಸಿಗೆ ಮತ್ತೊಂದೆಡೆ ಮುಂಗಾರು ಅತೀವೃಷ್ಟಿ ಕಾಡಲಿದೆ.

ವಿಶ್ವ ಬ್ಯಾಂಕ್ ವರದಿ ವಿವರ ಹೀಗಿದೆ:

ವಿಶ್ವ ಬ್ಯಾಂಕ್ ವರದಿ ವಿವರ ಹೀಗಿದೆ:

ಮುಂಬೈ ಮತ್ತು ಕೋಲ್ಕತ್ತಾ ಭಾಗದಲ್ಲಿ ಸಮುದ್ರದ ಮಟ್ಟ ಏರಲಿದೆ. ಚಂಡಮಾರುತಗಳು ಹೆಚ್ಚಾಗಲಿವೆ. ನದಿ ಪ್ರವಾಹಗಳು ಮೇರೆ ಮೀರಲಿವೆ. ಈ ಮಧ್ಯೆ, ಪಶ್ಚಿಮ ಘಟ್ಟಗಳಲ್ಲಿ ನೀರಿಗಾಗಿ ಆಹಾಕಾರ ಕಂಡುಬರಲಿದೆ.

ಮುಂಗಾರು ಅತೀವೃಷ್ಟಿ ದಶಕದಲ್ಲೊಮ್ಮೆ ಗ್ಯಾರಂಟಿ

ಮುಂಗಾರು ಅತೀವೃಷ್ಟಿ ದಶಕದಲ್ಲೊಮ್ಮೆ ಗ್ಯಾರಂಟಿ

ಮುಂಗಾರು ಅತೀವೃಷ್ಟಿ ಈಗ ಶತಮಾನಕ್ಕೊಮ್ಮೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ದಶಕದಲ್ಲಿ ಒಮ್ಮೆ ಗ್ಯಾರಂಟಿ ಎಂದು ವಿಶ್ವ ಬ್ಯಾಂಕ್ ವರದಿ ಎಚ್ಚರಿಸಿದೆ.

'ಹಿಮಾಲಯ ಸುನಾಮಿ'ಗೆ climate change ಕಾರಣವಲ್ಲ

'ಹಿಮಾಲಯ ಸುನಾಮಿ'ಗೆ climate change ಕಾರಣವಲ್ಲ

ಪ್ರಸ್ತುತ ಉತ್ತರಾಖಂಡದಲ್ಲಿ ಉಂಟಾಗಿರುವ 'ಹಿಮಾಲಯ ಸುನಾಮಿ'ಗೆ climate change ಕಾರಣ ಅಲ್ಲವಾದರೂ ಆದರೆ ಮುಂದಿನ ದಿನಗಳಲ್ಲಿ climate change ಪ್ರಭಾವದಿಂದ ಇಂತಹುದೇ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಮುಂದಿನ 25 ವರ್ಷಗಳಲ್ಲಿ ಅತಿವೃಷ್ಟಿ/ಅನಾವೃಷ್ಟಿಗಳು ಅಗಾಧವಾಗಲಿದೆ.

ಹವಾಮಾನ ವೈಪರೀತ್ಯಗಳಿಗೆ ಬಡವರೇ ತುತ್ತು

ಹವಾಮಾನ ವೈಪರೀತ್ಯಗಳಿಗೆ ಬಡವರೇ ತುತ್ತು

ಹವಾಮಾನ ವೈಪರೀತ್ಯಗಳಿಗೆ ಬಡವರೇ ಹೆಚ್ಚಾಗಿ ತುತ್ತಾಗುತ್ತಾರೆ. ಇದರಿಂದ ಹೊರಬರಲು ಭಾರತ ಸುಸ್ಥಿರ ಅಭಿವೃದ್ಧಿಗೆ ಮೊರೆಹೋಗಬೇಕು. ಮರುಬಳಕೆ ಇಂಧನಗಳಿಗೆ ಸ್ಥಾನ ನೀಡಬೇಕು. ನೀರಿನ ನಿರ್ವಹಣೆ ಉತ್ತಮಗೊಳ್ಳಬೇಕು.

ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ಮಹಾನದಿ ಪಾತ್ರಗಳು

ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ಮಹಾನದಿ ಪಾತ್ರಗಳು

2050ರ ವೇಳೆಗೆ ತಾಪಮಾನದಲ್ಲಿ 2 ರಿಂದ 2.5 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡುಬರಲಿದೆ. ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ಮಹಾನದಿಗಳಲ್ಲಿ ನೀರಿನ ಪ್ರಮಾಣ ಕುಸಿಯಲಿದೆ. ಜಾಗತಿಕ ತಾಪಮಾನ ಏರಿಕೆಯಿಂದ 2050ರ ವೇಳೆಗೆ ಬೆಳೆ ಉತ್ಪಾದನಾ ಪ್ರಮಾಣ ಕುಂಠಿತಗೊಳ್ಳಲಿದೆ ಎನ್ನುತ್ತಿದೆ World Bank ರಿಪೋರ್ಟ್.

English summary
North India Worst rains- Global warming World Bank report India. A World Bank report on Wednesday said that global warming could lead to more droughts, water scarcity, extreme summer conditions, severe flooding and worrying food production levels in south Asia, including India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X