ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘಟಾನುಘಟಿ ನಾಯಕರ ಚುನಾವಣಾ ವೆಚ್ಚ ಎಷ್ಟು?

|
Google Oneindia Kannada News

ಬೆಂಗಳೂರು, ಜು.16 : ರಾಜ್ಯದ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕೆಲವು ಶಾಸಕರು ಮತ್ತು ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚದ ಮಾಹಿತಿ ನೀಡಿಲ್ಲ. ಇಂತಹ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಪ್ರತಿ ಅಭ್ಯರ್ಥಿ 16 ಲಕ್ಷ ರೂ.ಗಳನ್ನು ಚುನಾವಣಾ ವೆಚ್ಚವಾಗಿ ಖರ್ಚು ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ಆದರೆ, ಚುನಾವಣೆಗೆ ಸ್ಪರ್ಧಿಸಿದ್ದ 479 ಅಭ್ಯರ್ಥಿಗಳು ಇದುವರೆಗೂ ಆಯೋಗಕ್ಕೆ ಚುನಾವಣಾ ವೆಚ್ಚದ ಲೆಕ್ಕ ಸಲ್ಲಿಸಿಲ್ಲ.

ಮೊಳಕಾಲ್ಮೂರು ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್‌ ಶಾಸಕ ತಿಪ್ಪೇಸ್ವಾಮಿ, ಹೊಸಕೋಟೆಯ ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ.ನಾಗರಾಜ್‌, ದೊಡ್ಡಬಳ್ಳಾಪುರದ ಕಾಂಗ್ರೆಸ್‌ ಶಾಸಕ ಟಿ.ವೆಂಕಟರಾಮಯ್ಯ, ಹುಣಸೂರಿನ ಕಾಂಗ್ರೆಸ್‌ ಶಾಸಕ ಎಚ್‌.ಪಿ.ಮಂಜುನಾಥ್‌ ಅವರು ಶಾಸಕರಾಗಿ ಆಯ್ಕೆಯಾದರೂ ಇದುವರೆಗೂ ಚುನಾವಣಾ ವೆಚ್ಚದ ಪ್ರಮಾಣ ಪತ್ರ ನೀಡಿಲ್ಲ.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಒಂದು ತಿಂಗಳಿನಲ್ಲಿ ಶಾಸಕರು ಖರ್ಚು ವೆಚ್ಚದ ವಿವರಗಳನ್ನು ನೀಡಬೇಕು. ಇಲ್ಲದಿದ್ದರೆ, ಪ್ರಜಾಪ್ರತಿನಿಧಿ ಕಾಯ್ದೆ (ಸೆಕ್ಷನ್‌ 10 ಎ) ಪ್ರಕಾರ ಚುನಾವಣಾ ಆಯೋಗ, ಅಂತಹವರನ್ನು ಸದಸ್ಯತ್ವದಿಂದ ಅನರ್ಹ ಮಾಡುವ ಅವಕಾಶವಿದೆ. ಪ್ರಮುಖ ನಾಯಕರ ಖರ್ಚು ಎಷ್ಟು ನೋಡೋಣ.

ಸಿಎಂ ಖರ್ಚು 10 ಲಕ್ಷ

ಸಿಎಂ ಖರ್ಚು 10 ಲಕ್ಷ

ಸಿಎಂ ಸಿದ್ದರಾಮಯ್ಯ ಒಟ್ಟು 10,34,358 ರೂ.ವೆಚ್ಚ ಮಾಡಿರುವುದಾಗಿ ಲೆಕ್ಕ ನೀಡಿದ್ದಾರೆ. ಆದರೆ, ಅವರಿಗೆ ಆಯೋಗ ನೋಟಿಸ್ ಜಾರಿಗೊಳಿಸಿ, ಏಪ್ರಿಲ್‌ 28 ರಂದು ರಾಹುಲ್‌ ಗಾಂಧಿ ಮೈಸೂರಿನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು, ಅದರ 65,650 ರೂ. ಖರ್ಚು ಏಕೆ ತೋರಿಸಿಲ್ಲ? ಎಂದು ಪ್ರಶ್ನಿಸಿದೆ.

ಕುಮಾರಸ್ವಾಮಿ ಖರ್ಚು 4 ಲಕ್ಷ

ಕುಮಾರಸ್ವಾಮಿ ಖರ್ಚು 4 ಲಕ್ಷ

ರಾಮನಗರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 4.82 ಲಕ್ಷ ಖರ್ಚು ಮಾಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ, ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಮಾಯಿಸಿದ್ದ ಸುಮಾರು 4 ಸಾವಿರ ಜನರ ಬಗ್ಗೆಯೂ ಆಯೋಗ ವಿವರಣೆ ಕೇಳಿದೆ. ಪ್ರತಿಯೊಬ್ಬರಿಗೂ 175 ರೂ. 6.96 ಲಕ್ಷ ರೂ. ವೆಚ್ಚದಲ್ಲಿ ಯಾಕೆ ತೋರಿಸಿಲ್ಲ ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದೆ.

ಯಡಿಯೂರಪ್ಪ ಖರ್ಚು 7 ಲಕ್ಷ

ಯಡಿಯೂರಪ್ಪ ಖರ್ಚು 7 ಲಕ್ಷ

ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಲ್ಲಿ 7.79 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಜಗದೀಶ್ ಶೆಟ್ಟರ್ 9.08 ಲಕ್ಷ ಖರ್ಚು ಮಾಡಿ ಚುನಾವಣೆ ಗೆದ್ದಿದ್ದಾರೆ. ಕೆ.ಎಸ್.ಈಶ್ವರಪ್ಪ 6.72 ಲಕ್ಷ ಖರ್ಚು ಮಾಡಿದರೂ ಚುನಾವಣೆಯಲ್ಲಿ ಸೋತಿದ್ದಾರೆ.

ಯಾರ ಖರ್ಚು ಎಷ್ಟು?

ಯಾರ ಖರ್ಚು ಎಷ್ಟು?

ಡಿ.ಕೆ.ಶಿವಕುಮಾರ್ 6.40 ಲಕ್ಷ ವೆಚ್ಚಮಾಡಿ ಚುನಾವಣೆ ಗೆದ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ 7.14 ಲಕ್ಷ ಖರ್ಚು ಮಾಡಿದ್ದಾರೆ. ಆದರೆ, ಚುನಾವಣೆ ಸೋತಿದ್ದಾರೆ. ರಾಜ್ಯದ ಏಕೈಕ ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ 5.37 ಲಕ್ಷ ಖರ್ಚು ಮಾಡಿದ್ದಾರೆ.

ಎಷ್ಟು ಜನ ಸಲ್ಲಿಸಬೇಕು

ಎಷ್ಟು ಜನ ಸಲ್ಲಿಸಬೇಕು

2013ರ ವಿಧಾನಸಭೆ ಚುನಾವಣೆಗೆ ಒಟ್ಟು 2948 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ, ಇದುವರೆಗೆ 2469 ಅಭ್ಯರ್ಥಿಗಳು ಮಾತ್ರ ಖರ್ಚು ವೆಚ್ಚದ ವಿವರ ನೀಡಿದ್ದಾರೆ. ಫ‌ಲಿತಾಂಶ ಪ್ರಕಟಗೊಂಡ ಒಂದು ತಿಂಗಳಿನಲ್ಲಿ ಖರ್ಚು ವೆಚ್ಚ ಸಲ್ಲಿಸಲು, 479 ಅಭ್ಯರ್ಥಿಗಳು ವಿಫಲರಾಗಿದ್ದಾರೆ.

English summary
479 candidates does not submit assembly elections expenses to Election Commission. totally 2948 candidates contest for Karnataka assembly election 2103. in this 479 candidates till not submit their elections expenses. After one month of election result announced, every candidate should submit elections expenses to Election Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X