ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಂ ಪ್ರಥಮ:ಕಾಂಗ್ರೆಸ್ಸಿನತ್ತ ಹಾರಿದ ಸ್ವತಂತ್ರ ಶಾಸಕ

By Srinath
|
Google Oneindia Kannada News

mulbagal-ind-mla-kottur-manjunath-returns-to-congress
ಬೆಂಗಳೂರು, ಜೂನ್ 4- ಸಿದ್ದರಾಮಯ್ಯನವರ ಶರವೇವನ್ನು ಕಂಡು ಎಲ್ಲೋ ತಮ್ಮ ಬುಡಕ್ಕೂ ಕೊಡಲಿ ಇಕ್ಕುತ್ತಾರೆ ಎಂದೇ ಭ್ರಮಿಸಿದ್ದ ಕುಮಾರಸ್ವಾಮಿಗೆ ಇದು ಆತಂಕದ ಸುದ್ದಿಯೇ. ಆದರೆ ಹಾಗೆ ಹಾರಿರುವ ಶಾಸಕ ಸ್ವತಂತ್ರನಾಗಿದ್ದರಿಂದ ಕುಮಾರಸ್ವಾಮಿ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಆದರೂ ಕಾಂಗ್ರೆಸ್ ಇದರಿಂದ ಉತ್ತೇಜನಗೊಂಡರೆ ಎಚ್ಡಿಕೆ ನೆತ್ತಿನ ಮೇಲಿನ ತೂಗುಕತ್ತಿ ಯಾವಾಗ ಏನೋ ಎಂಬಂತ ಸ್ಥಿತಿ.

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಂಜುನಾಥ್ ಜಾತಿ ಪ್ರಮಾಣಪತ್ರವನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಈಗಾಗಲೇ ಕೋರ್ಟ್ ಮೆಟ್ಟಿಲು ಹತ್ತಿರುವುದು ಇಲ್ಲಿ ಗಮನಾರ್ಹ. ಮೊನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲವೆಂದು ಮಂಜುನಾಥ್ ಸ್ವತಂತ್ರರಾಗಿ ಗೆದ್ದು, ಈಗ ಮತ್ತೆ ಕಾಂಗ್ರೆಸ್ ಪಾಲಾಗಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಪಕ್ಷದ ನಾಯಕರು ಅವರಿಗೆ ತುಂಬು ತೋಳಿನ ಸ್ವಾಗತ ಕೋರಿದರು. ಕೆಎಚ್ ಮುನಿಯಪ್ಪ ಅವರ ಮಧ್ಯಸ್ಥಿಕೆಯಿಂದಾಗಿ ತಾವು ಮಾತೃಪಕ್ಷಕ್ಕೆ ಮರಳಿರುವುದಾಗಿ ಮಂಜುನಾಥ್ ಇದೇ ವೇಳೆ ತಿಳಿಸಿದರು. ಕೋಲಾರದಲ್ಲಿ ಜಿಲ್ಲೆಯಲ್ಲಿ ತಮ್ಮ ಮೇಲುಗೈ ಕಳೆದುಕೊಳ್ಳುತ್ತಿರುವ ಮುನಿಯಪ್ಪಗೆ ಇದು ಕೊಂಚ ರಿಲೀಫ್ ನೀಡಿದೆ.

ಹಿರಿಯ ಶಾಸಕ ರಮೇಶ್ ಕುಮಾರ್, ಪರಿಷತ್ ಸದಸ್ಯ ನಜೀರ್ ಅಹಮದ್, ಶಾಸಕ ಎಸ್ಎನ್ ನಾರಾಯಣ ಸ್ವಾಮಿ. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎನ್ಎಸ್ ಬಿಸೇಗೌಡ ಮತ್ತಿತತರು ಮಂಜುನಾಥ್ ಜತೆಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರು ಮಂಜುನಾಥಗೆ ಸ್ವಾಗತ ಕೋರಿದರು.

English summary
Mulbagal Independent MLA Kottur G Manjunath returns to Congress. Manjunath, who is presently caught in a controversy over his caste certificate, had entered the election fray as an independent candidate after having been denied a ticket by the Congress from this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X