ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮ್ಮನೇ ಹಾಗೇ, ನೈಟಿ ಬಗ್ಗೆ ನಾಲ್ಕಕ್ಷರ, ನಾಲ್ಕು ಮಾತು

By Srinath
|
Google Oneindia Kannada News

ನೈಟಿ -ಇದು ಮಹಿಳೆಯರ ಪಾಲಿನ ಶ್ರೀಕೃಷ್ಣ ವಸ್ತ್ರ. ಅಂದರೆ ಮಹಿಳೆಗೆ ವರವಾಗಿ ಬಂದಿರುವ ಉಡುಪು. ಮಹಿಳೆಯರಿಗೆ ಈ ವಸ್ತ್ರದ ಬಗ್ಗೆ ಎಲ್ಲಿಲ್ಲದ ಆಪ್ಯಾಯಮಾನ. ಶೇ. 99ರಷ್ಟು ಮಹಿಳೆಯರು ನೈಟಿಗೆ ಜೈ ಎನ್ನುತ್ತಾರೆ. ಆದರೆ ಅದನ್ನು ಇಷ್ಟಪಡದವರೂ ಇದ್ದಾರೆ.

ಅವರು ಮಡಿವಂತಿಕೆ ಮಹಿಳೆಯರು ಅಂತಲ್ಲ. ಆಧುನಿಕ ಮಹಿಳೆಯರ ಪೈಕಿ ಕೆಲವರಿಗೆ ಇದು ಪಸಂದಾಗುವುದಿಲ್ಲ. ನೈಟಿ ಅಂದರೆ ಯಕ್ಕು, ಥೂ ಅಂತಾರೆ. ಆದರೂ ನೈಟಿಯನ್ನು ಇಷ್ಟ ಪಡುವ ಮಹಿಳಾ ವರ್ಗ ಹೆಚ್ಚಾಗಿರುವುದರಿಂದ ಸುಮ್ಮನೇ ಹಾಗೇ, ನೈಟಿ ಬಗ್ಗೆ ತೋಚಿದ್ದನ್ನು ಇಲ್ಲಿ ಗೀಚಲಾಗಿದೆ.

ಇದು ಹೆಸರಿಗಷ್ಟೇ ನೈಟಿ. ಆದರೆ ಹೆಸರಿಗೆ ವಿರುದ್ಧವಾಗಿ ಮಹಿಳೆಯರು ಬೆಳಗ್ಗೆಯಿಂದ ಆರಂಭಿಸಿ ನೈಟ್ ನಂತರವೂ ಧರಿಸಲು ಇಷ್ಟಪಡುತ್ತಾರೆ. ಹಾಗಾಗಿ ಇದನ್ನು ನೈಟಿ ಅನ್ನುವ ಬದಲು ಮಾರ್ನಿಂಗಿ, ಆಫ್ಟರ್ ನೂನಿ, ಇವೆನೈನಿ, ಕೊನೆಗೆ ಆಲ್ ಡೇಯಿ ಆಗಿ ಸರ್ವ ಕಾಲದಲ್ಲೂ ಧರಿಸಬಹುದಾದ ಏಕೈಕ ವಸ್ತ್ರ ಎಂದು ಅದಾಗಲೇ ನಮ್ಮ ಸಮಾಜ ಸ್ವೀಕರಿಸಿಯಾಗಿದೆ. ಒಂದು ಡಜನ್ ನೈಟಿಗಳನ್ನು ಇಲ್ಲಿ ಹರಡಲಾಗಿದೆ.

ಸಾಮಾಜಿಕ ಸಮವಸ್ತ್ರ:

ಸಾಮಾಜಿಕ ಸಮವಸ್ತ್ರ:

ನಮ್ಮ ಭಾರತೀಯ ಮಹಿಳೆಯರಂತೂ ಬಳಸಿಕೊಂಡೆವು ಅದನೆ ಅದಕು ಇದಕು ಎಲ್ಲದಕು ಎನ್ನುತ್ತಾರೆ. ಬಹುಶಃ ನೈಟಿ ಮಹಿಳೆಯರು ಸುಳಿಯದ/ ಕಾಣಿಸಿಕೊಳ್ಳದ ಏಕೈಕ ಸ್ಥಳವೆಂದರೆ ದೇವಸ್ಥಾನ/ಪೂಜಾ ಮಂದಿರ. ಅದೊಂದನ್ನು ಬಿಟ್ಟು ಎಲ್ಲೆಂದರಲ್ಲಿ ಢಾಳಾಗಿ ಯಾವುದೇ ಎಗ್ಗುಸಿಗ್ಗು ಇಲ್ಲದೆ ಯಾವುದೇ ಮಡಿವಂತಿಕೆಯಿಲ್ಲದೆ ನೈಟಿ ಮಹಿಳೆಯರು ಧಾರಾಳವಾಗಿ ಕಾಣಸಿಗುತ್ತಾರೆ. ಆದರೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೊಮ್ಮೆ ಗಂಗಾ ನದಿಯಲ್ಲಿ ಮುಳುಗು ಹಾಕುವಾಗ ನೀವು ಯಾವ ವಸ್ತ್ರವನ್ನು ಧರಿಸಲು ಇಚ್ಚಿಸುತ್ತೀರಿ ಎಂದು ಕೇಳಲಾಗಿ ಆಕೆ ಥಟ್ಟಂತ ನೈಟಿ ಎಂದಿದ್ದರು.

Comfort Personified ಡ್ರೆಸ್:

Comfort Personified ಡ್ರೆಸ್:

ನೈಟಿಯಲ್ಲಿ ಮಹಿಳೆಯರು ಏನು ಬೇಕಾದರೂ ಮಾಡಲು ಇಚ್ಚಿಸುತ್ತಾರೆ ಎನ್ನಬಹುದು. ಮನೆಯಂಗಳ, ಕಾಂಪೌಂಡಿಗೆ ಒರಗಿಕೊಂಡು ಮಾತನಾಡುವುದು, ತಳ್ಳುಗಾಡಿಯಲ್ಲಿ ಬರುವ ತರಕಾರಿಯವನೆದುರು, ಮಕ್ಕಳನ್ನು ಸ್ಕೂಲಿಗೆ ಬಿಡಲು, ಹಾಲು ತರಲು, ಶೆಟ್ರ ಅಂಗಡಿಗೆ ಹೋಗಿ ರೇಷನ್ ತರಲು, ಕಾಂಪೌಂಡ್ ಕಾನ್ಫರೆನ್ಸಿಗೂ ಇದೇ ಡ್ರೆಸ್ ಕೋಡ್ ಅನ್ನು ಅಲಂಕರಿಸುತ್ತಾರೆ.

ನಿಮಗ್ಯಾಕ್ರೀ ನೈಟಿ ಮೇಲೆ ಕಣ್ಣು!

ನಿಮಗ್ಯಾಕ್ರೀ ನೈಟಿ ಮೇಲೆ ಕಣ್ಣು!

ಹಾಗಂತ ನೀವು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ನೈಟಿ ಮಹಿಳೆಯರು ಗುರ್ರೆನ್ನದೆ ಇರುವುದಿಲ್ಲ. 'ನಿಮಗ್ಯಾಕ್ರೀ ನಮ್ಮ ನೈಟಿ ಮೇಲೆ ಕಣ್ಣು! ಕೆಲ್ಸ ಆಗ್ತಾ ಇದೆಯಾ ಅಷ್ಟು ನೋಡಿಕೊಳ್ಳಿ ಸಾಕು' ಎಂದು ಗುರಾಯಿಸುತ್ತಾರೆ. ಇರಲಿ ಅದು ಅವರ ಸೌಖ್ಯಕ್ಕೆ, ಸರಳತೆಗೆ, ಸುಲಾಲಿತ್ಯಕ್ಕೆ ಬೇಕೆನಿಸುವ ಡ್ರೆಸ್. ಇದನ್ನು ನೈಟ್ ಗೌನ್, ನೈಟ್ ಡ್ರೆಸ್, ಎಂದೂ ಕರೆಯುತ್ತಾರೆ.

ಅಲ್ಲೆಲ್ಲೂ ನೈಟಿ ಬಗ್ಗೆ ಪ್ರಸ್ತಾಪವಿಲ್ಲ:

ಅಲ್ಲೆಲ್ಲೂ ನೈಟಿ ಬಗ್ಗೆ ಪ್ರಸ್ತಾಪವಿಲ್ಲ:

ಹಾಗಂತ ನಮ್ಮ ಮಹಿಳೆಯರು ಧರಿಸುವ ವಸ್ತ್ರ ಉಡುಪುಗಳ ಬಗ್ಗೆ ಹೊಸದೇನೂ ಸಂಶೋಧನೆ ಮಾಡುವ ಅಗತ್ಯವಿಲ್ಲ. ಈಗಿನ ಯಾವುದೇ ಡ್ರೆಸ್ ಅನ್ನು ನೋಡಿ ಅತ್ಯಾಧುನಿಕ ಡ್ರೆಸ್ ಎಂದು ಉದ್ಘರಿಸುವ ಅಗತ್ಯವಿಲ್ಲ. ಏಕೆಂದರೆ ಅವುಗಳ ಬಣ್ಣದಿಂದ ಹಿಡಿದು ಎಲ್ಲವನ್ನೂ ಪುರಾತನ ಕಾಲದಲ್ಲಿಯೇ ಚಿತ್ರಿಸಲಾಗಿದೆ. ಇದು ಕೆಲ ಹಳೆಯ ದೇಗುಲಗಳಿಗೆ ಭೇಟಿ ನೀಡಿದರೆ ಕಂಡುಬರುತ್ತದೆ.
ಅದರಲ್ಲೂ ಮುಂಬೈ ಗೇಟ್ ವೇ ಮೂಲಕ ಸಾಗಿಹೋದರೆ ಗುಹಾಂತರ ದೇಗುಲ/ ಬೆಟ್ಟ ಕಾಣಿಸುತ್ತದೆ. ಅಲ್ಲಿ ಗೋಡೆ/ಛಾವಣಿಗಳ ಮೇಲೆ ಸುಂದರವಾಗಿ ಚಿತ್ರ ರೂಪದಲ್ಲಿ ಬಿಡಿಸಿಟ್ಟಿದ್ದಾರೆ ಅಂದಿನ ಕಾಲದ ವಿನ್ಯಾಸಕಾರರು. ಇರಲಿ ವಿಷಯಾಂತರ ಆಗುವುದು ಬೇಡ. ಆದರೂ ಇದು ಏಕೆ ಹೇಳುತ್ತಿರುವೆನೆಂದರೆ ಅಲ್ಲೆಲ್ಲೂ ನೈಟಿ ಬಗ್ಗೆ ಪ್ರಸ್ತಾಪವೂ ಇಲ್ಲ/ವಿನ್ಯಾಸ ಚಿತ್ರವೂ ಇಲ್ಲ. ಇನ್ನು ಪುರಾಣಗಳಲ್ಲೂ ಇದರ ಉಲ್ಲೇಖವಿಲ್ಲ.

ಸದಾ ಕಾಲ ಮೈಗೆ ನೈಟಿ ಅಂಟಿಕೊಂಡಿರುತ್ತದೆ:

ಸದಾ ಕಾಲ ಮೈಗೆ ನೈಟಿ ಅಂಟಿಕೊಂಡಿರುತ್ತದೆ:

ಹಾಗಂತ ಇದು ಭಾರತಕ್ಕೆ ಯಾವಾಗ ಧಾಂಗುಡಿಯಿಟ್ಟಿತು ಅಂದರೆ ನಮಗೇ ಬೇಡದ ಅನೇಕಾನೇಕ ಕೊಡುಗೆಗಳನ್ನು ಕೊಟ್ಟಿರುವ ಅದೇ ಬ್ರಿಟೀಶರ ಕಾಲದಲ್ಲಿ ಎನ್ನಬಹುದು. ಅವರು ಬಿಟ್ಟು ಹೋದ ನೈಟ್ ಗೌನೇ ಇದು. ಮಹಿಳೆಯರು ಇಂದಿಗೂ ಅಪ್ಯಾಪಮಾನದಿಂದ ಇದನ್ನು ಧರಿಸುತ್ತಿದ್ದಾರೆ. ಆರಂಭದಲ್ಲಿ ಮಹಿಳೆಯರು ಬೆಳಗಾನೆದ್ದು ನೈಟಿಯನ್ನು ಕಳಚಿ ಲಕ್ಷಣವಾಗಿ ಸೀರೆಯುಡುತ್ತಿದ್ದರು. ಆದರೆ ಈಗ ನೈಟಿ ಕಳಚುವುದನ್ನೇ ಮರೆತುಹೋಗಿದ್ದಾರೆ. ಸದಾ ಕಾಲ ಅವರ ಮೈಮೇಲೆ ಅದೇ ನೈಟಿ ವಿರಾಜಮಾನವಾಗಿರುತ್ತದೆ.

ನೈಟಿ ಮೇಲೆ ಗಂಭೀರ ಆರೋಪ:

ನೈಟಿ ಮೇಲೆ ಗಂಭೀರ ಆರೋಪ:

ಹಾಗಂತ ದೇಹ ಸೌಂದರ್ಯವನ್ನು ಇಂಚಿಂಚೂ ತೆರೆದಿಡುವ/ಹರವಿಡುವ ನೈಟಿಯನ್ನು ರಾತ್ರಿಯಿರಲಿ ಬೆಳಗಾನೆದ್ದು ನೋಡಿದರೆ ಕೆಟ್ಟ ಭಾವನೆಗಳಿಗೆ ಜಾಗ ಮಾಡಿಕೊಡುತ್ತದೆ ಎಂಬ ಗಂಭೀರ ಆರೋಪ ಈ ನೈಟಿ ಮೇಲಿದೆ. ಅದು ಅವರವರ ಭಾವಕ್ಕೆ ಬಿಟ್ಟ ವಿಷಯ. ಅದರ ಬಗ್ಗೆ ಇಲ್ಲಿ ಒಣ ಚರ್ಚೆ ಬೇಡ.

ಬೇರೇದಕ್ಕಿಂತ ನೈಟಿಯೇ ವಾಸಿ:

ಬೇರೇದಕ್ಕಿಂತ ನೈಟಿಯೇ ವಾಸಿ:

ಎಕರೆಗಟ್ಟಲೆ ದೇಹವನ್ನು ಹರಿವಿಡುವ ಸೀರೆಗಿಂತ/ ದೇಹದ ಅಂಕುಡೊಂಕುಗಳನ್ನು ಇದ್ದದ್ದು ಇದ್ಹಂಗೆ ಎತ್ತಿತೋರಿಸುವ ಸಲ್ವಾರ್ ಕಮೀಜ್ ಡ್ರೆಸ್ ಗಿಂತ/ ನೈಟಿಯೇ ವಾಸಿ ಎಂಬುದು ನೈಟಿ-ಪರ ಮಹಿಳೆಯರ ಸ್ಪಷ್ಟ/ದಿಟ್ಟ ಅನಿಸಿಕೆ.

ಮಹಿಳೆಯರ ಸ್ವಾತಂತ್ರ್ಯ ನೈಟಿಯಲ್ಲಿದೆ:

ಮಹಿಳೆಯರ ಸ್ವಾತಂತ್ರ್ಯ ನೈಟಿಯಲ್ಲಿದೆ:

ಆರಂಭದಲ್ಲಿ ಸೊಸೆ ನೈಟಿ ಧರಿಸಿದರೆ ಅತ್ತೆ ಕೆಂಗಣ್ಣು ಬೀರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅತ್ತೆಯೇ ನೈಟಿ ಹಾಕಿಕೊಂಡು ಅದೇ ಸೊಸೆಯೆದುರು ಮೆರೆಯುವ ಕಾಲ ಬಂದಿದೆ. ಹೇಳಬೇಕೆಂದರೆ ಮಹಿಳೆಯರ ಸ್ವಾತಂತ್ರ್ಯ ನೈಟಿಯಲ್ಲಿದೆ.

ನೈಟಿ ಧರಿಸಿ ಸೋಫಾ ಮೇಲೆ

ನೈಟಿ ಧರಿಸಿ ಸೋಫಾ ಮೇಲೆ

ಉದ್ಯೋಗಸ್ಥ ಮಹಿಳೆಯರಂತೂ ನೈಟಿಗಾಗಿ ತಹತಹಿಸುತ್ತಿರುತ್ತಾರೆ. ಕಚೇರಿಯಿಂದ ಹೊರಟು ಗೂಡು ಸೇರಿಕೊಂಡರೆ ಸಾಕು ಆಫೀಸ್ ಬಟ್ಟೆ ಕಿತ್ತು ಬಿಸಾಕಿ, ಸಾಧ್ಯವಾದರೆ ಒಂದು ಲಘು ಜಳಕವಾಡಿ, ನೈಟಿ ಧರಿಸಿ ಸೋಫಾ ಮೇಲೆ ಉಸ್ಸಪ್ಪಾ ಅಂತ ಬಿದ್ದರೆ... ಅವರದೇ ಆದ ಖಾಸಗಿಲೋಕಕ್ಕೆ ಜಾರಿಕೊಳ್ಳುತ್ತಾರೆ.

ಸಾಮಾಜಿಕ ಸಮಾನತೆ ಕಾಪಾಡುವ ನೈಟಿ:

ಸಾಮಾಜಿಕ ಸಮಾನತೆ ಕಾಪಾಡುವ ನೈಟಿ:

ಮನೆಯ ಯಜಮಾನಿ, ಜವಾನಿಯ ಜವಾನಿ ಅಂತ ವ್ಯತ್ಯಾಸವೇನೂ ಇಲ್ಲ. ಬಡವ ಬಲ್ಲಿದ ವ್ಯತ್ಯಾಸ ಮಾಯವಾಗಿದೆ. ಮಾಲೀಕಳೂ ನೈಟಿಯನ್ನುಡುತ್ತಾಳೆ- ಮನೆಯ ಕೆಲಸದಾಳೂ ನೈಟಿಯನ್ನೇ ಉಡುತ್ತಾಳೆ. ಸಾಮಾಜಿಕ ಸಮಾನತೆ ಕಾಪಾಡುವಲ್ಲಿ ನೈಟಿ ಪಾತ್ರ ಅತ್ಯದ್ಭುತ. ಆದರೆ ಮನೆಯ ಯಜಮಾನ confuse ಆಗಿ ಯಡವಟ್ಟು ಮಾಡದಿದ್ದರೆ ಸಾಕು.

ಅವರವರ ಕುಲ-ಗಾತ್ರಕ್ಕೆ ತಕ್ಕಂತೆಯೂ ಇದೆ:

ಅವರವರ ಕುಲ-ಗಾತ್ರಕ್ಕೆ ತಕ್ಕಂತೆಯೂ ಇದೆ:

ಬಣ್ಣ ಬಣ್ಣದ ನಮೂನೆ ನಮೂನೆಯ ಉಡುಪು ಇದು. ಹಾಗಂತ ಇದು ಚೀಪ್ ಡ್ರೆಸ್ ಅಲ್ಲ. ಮನೆ ಯಜಮಾನನ ಜೇಬಿಗೆ ತಕ್ಕಂತೆ/ ಆತನ ಟೇಸ್ಟಿಗೆ ತಕ್ಕಂತೆ/ ಅದನ್ನು ಧರಿಸುವ ಮನೆ ಯಜಮಾನಿಯ ಒನಪು ವಯ್ಯಾರಕ್ಕೆ ತಕ್ಕಂತೆ ಚಿತ್ರಾಕರ್ಷಕ, ಸೂಕ್ಷ್ಮ ಕೆತ್ತನೆಯ, ದುಬಾರಿ satin ಮತ್ತು silk ನೈಟಿಗಳೂ ಇವೆ.

ಎಲ್ಲ ವರ್ಗ/ ವಯೋಮಾನಕ್ಕೂ ಸಲ್ಲುತ್ತದೆ:

ಎಲ್ಲ ವರ್ಗ/ ವಯೋಮಾನಕ್ಕೂ ಸಲ್ಲುತ್ತದೆ:

ಎಷ್ಟೇ ಧರಿಸಿದರೂ ಹರಿದುಹೋಗದ, ದುಬಾರಿಯಲ್ಲದ ಕಾಟನ್ ನೈಟಿಗಳು, ಎಲ್ಲ ವಯೋಮಾನ ಎಲ್ಲ ವರ್ಗಕ್ಕೂ ಸಲ್ಲುವ ನೈಟಿಗಳೂ ಮಾರುಕಟ್ಟೆಯಲ್ಲಿವೆ.

English summary
Nightie -Neo Indian women dress - comfort personified. Indians are not embarrassed to do ANYTHING in a nightie. They wear them while leaning on the front gate and chatting with the neighour. They show up at the grocery store in them. The nightie is a great social leveller. In India, the nightie has a new post-colonial reincarnation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X