ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪ್ರದಾಯ ಮುರಿದು ಜಯ ದಕ್ಕಿಸಿಕೊಂಡ ವರ್ತೂರು

By Srinath
|
Google Oneindia Kannada News

kolar-mla-varthur-prakash-may-not-become-minister
ಬೆಂಗಳೂರು, ಮೇ 9: ಪಕ್ಷೇತರರ ಶಾಸಕರಾಗಿ ಈ ಬಾರಿಯೂ ಆರಿಸಿ ಬಂದ ಸಾಧನೆ ಮಾಡಿರುವವರು ಕೋಲಾರದ ವರ್ತೂರು ಪ್ರಕಾಶ್. ಗಮನಾರ್ಹವೆಂದರೆ ಅಮಾವಾಸ್ಯೆಯ ದಿನವೇ ಮೊದಲಿಗರಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಿ, ವರ್ತೂರು ಪ್ರಕಾಶ್ ಸಂಪ್ರದಾಯ ಮುರಿದಿದ್ದರು.

ಹಾಗಂತ ಅಂದು ಅವರಂತೆಯೇ ನಾಮಪತ್ರ ಸಲ್ಲಿಸಿದ ಎಲ್ಲರೂ ಗೆದ್ದು ಬಂದರಾ ಎಂದು ಕೇಳಿಕೊಂಡರೆ ಇಲ್ಲ ಎಂಬುದೇ ಉತ್ತರ. ಹಾಗಾಗಿ, ಇಲ್ಲಿ ವರ್ತೂರು ಅಮಾವಾಸ್ಯೆ ಸಂಪ್ರದಾಯವನ್ನು ಮುರಿದು ಗೆದ್ದರು ಎಂಬುದಕ್ಕಿಂದ ವೈಯಕ್ತಿಕವಾಗಿ ಅವರು ಗೆದ್ದು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ಕೆ ಶ್ರೀನಿವಾಸಗೌಡರಿಗೆ ವನವಾಸ ಮುಂದುವರಿಯುವಂತೆ ಮಾಡಿದ್ದಾರೆ. ಅವರನ್ನು 12 ಸಾವಿರಕ್ಕಿಂತ ಹೆಚ್ಚು ಮತಗಳಿಂದ ಕಳೆದ ಬಾರಿಯಂತೆ ನಿರಾಯಾಸವಾಗಿ ಮಣಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷಕ್ಕೂ ದೊಡ್ಡ ಹೊಡೆತವನ್ನೇ ಕೊಟ್ಟಿದ್ದಾರೆ. ಕೋಲಾರ ಕಾಂಗ್ರೆಸ್ಸಿಗ, ಕೇಂದ್ರ ಸಚಿವ ಕೆಎಚ್ ಮುನಿಯಪ್ಪಗೂ ವರ್ತೂರು ಮತ್ತೆ ಸೋಲುಣಿಸಿದ್ದಾರೆ. ಜಿಲ್ಲಾ ಸಚಿವರಾಗಿದ್ದರಿಂದ ಬಿಜೆಪಿಯೂ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸದೇ ಹೋಯಿತು. ಹಾಗಾಗಿ ಬೆಂಗಳೂರು ಗ್ರಾಮಾಂತರ ಭಾಗದ ವರ್ತೂರು ಗ್ರಾಮದ ಪ್ರಕಾಶಗೆ ಗೆಲುವು ದಕ್ಕಿತು.

ಆದರೆ ಹೀಗೆ, ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿ, ಗೆದ್ರೂ ವರ್ತೂರು ಪ್ರಕಾಶ್ ಗೆ ಈ ಬಾರಿ ಏನೂ ಗಿಟ್ಟುಪಾಟು ಆಗುವುದಿಲ್ಲ ಎನಿಸುತ್ತಿದೆ. ಏಕೆಂದರೆ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪಕ್ಷಕ್ಕೆ ಪಕ್ಷೇತರರ 'ಹಂಗು' ಬೇಡವಾಗಿದೆ. ಹಾಗಾಗಿ 'ಪಕ್ಷೇತರ ವರ್ತೂರು ಪ್ರಕಾಶ್' ಆಟವೇನೂ ಈ ಬಾರಿ ನಡೆಯದು.

ಆದರೆ ಒಂದು ವೇಳೆ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾದರೆ ಅಹಿಂದ ಬಾಂಧವ್ಯದ ಹಿನ್ನೆಲೆಯೆಲ್ಲಿ ಜಾತಿಬಾಂಧವ ಸಿದ್ದರಾಮಯ್ಯನವರು 'ಪಕ್ಷೇತರ ವರ್ತೂರುರನ್ನು ಒಳಗೆ ಬಿಟ್ಟುಕೊಳ್ಳಬಹುದು. ಆದರೂ ಆ ಖಾತ್ರಿಯೂ ಇಲ್ಲ. ಏಕೆಂದರೆ ಹಾಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಕಿತ್ತುಕೊಂಡೇ ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿಸುತ್ತದೆ. ಸೋ, ವರ್ತೂರು ಗೆದ್ರೂ ಈ ಬಾರಿ ಅಧಿಕಾರ ಅನುಭವಿಸುವುದು ಅಷ್ಟರಲ್ಲೇ ಇದೆ.

English summary
Karnataka Assembly Election 2013 Results, Kolar Independent MLA Varthur Prakash may not become Minister this time. As the victorious Congress is not in the need of any Independent MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X