ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ : ಅರಳದ ಕಮಲ, ಸೋತ ಈಶ್ವರಪ್ಪ

|
Google Oneindia Kannada News

Shimoga
ಶಿವಮೊಗ್ಗ, ಮೇ 8 : ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಜಿಲ್ಲೆಯ ಒಂದು ಕ್ಷೇತ್ರದಲ್ಲೂ ಬಿಜೆಪಿ ಜಯಗಳಿಸದೇ ಭಾರೀ ಹಿನ್ನಡೆ ಅನುಭವಿಸಿದೆ. ಸ್ವತಃ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮೂರನೇ ಸ್ಥಾನ ಪಡೆದು ಸೋಲು ಅನುಭವಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಪ್ರಾಬಲ್ಯವಿದ್ದರೂ ಏಳು ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಯಡಿಯೂರಪ್ಪ ಕೆಜೆಪಿ ಕಟ್ಟಿ ಅವರು ಗೆದ್ದರು, ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ರುದ್ರೇಗೌಡ ಎಂಬ ಪ್ರಭಾವಿ ಅಭ್ಯರ್ಥಿ ನಿಲ್ಲಿಸಿ ಈಶ್ವರಪ್ಪಗೆ ಸೋಲಿನ ರುಚಿ ತೋರಿಸಿದರು.

ಮೊದಲ ಕೆಲವು ಸುತ್ತುಗಳಲ್ಲಿ ಈಶ್ವರಪ್ಪ ಮುನ್ನಡೆ ಸಾಧಿಸಿದ್ದರು. ನಂತರ ಬಿರುಗಾಳಿಯಂತೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಮತ್ತು ಕೆಜೆಪಿ ಅಭ್ಯರ್ಥಿ ರುದ್ರೇಗೌಡ ಈಶ್ವರಪ್ಪ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ಕೊನೆಯ ಸುತ್ತಿನ ಎಣಿಕೆ ಮುಗಿಯುವ ವರೆಗೆ ಈಶ್ವರಪ್ಪ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶಿವಮೊಗ್ಗ ನಗರ ಕಾಂಗ್ರೆಸ್ ಕೈ ಸೇರಿತು.

ಯಡಿಯೂರಪ್ಪ ಅವರ ಪ್ರಮುಖ ಅಜೆಂಡಾಗಳು ಎರಡಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರಬಾರದು ಮತ್ತು ಈಶ್ವರಪ್ಪ ಗೆಲುವು ಸಾಧಿಸಬಾರದು ಎಂಬದು ಎರಡು ಕಸಸುಗಳು ಈಡೇರಿವೆ. ಆದರೆ, ಕೆಜೆಪಿ ಕಿಂಗ್ ಮೇಕರ್ ಆಗಲಿಗೆ ಎಂಬ ಅವರ ವಿಶ್ವಾಸ ಹುಸಿಯಾಗಿದ್ದು, ಕೇವಲ 6 ಸ್ಥಾನಗಳು ಮಾತ್ರ ಕೆಜೆಪಿ ಮಡಿಲು ಸೇರಿವೆ.

ಶಿವಮೊಗ್ಗ ಜಿಲ್ಲೆಯಲ್ಲಿಯೂ ಬಿಜೆಪಿ ಒಂದು ಸ್ಥಾನ ಗಳಿಸುವಲ್ಲಿ ಬಿಜೆಪಿ ವಿಫಲವಾಗಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ ಎರಡನೇ ಬಾರಿ ಗೆಲುವು ಸಾಧಿಸಿದ್ದರೆ, ಸಾಗರ ಕ್ಷೇತ್ರದಲ್ಲಿ ಅಳಿಯನಿಗೆ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಸೋಲುಣಿಸಿದ್ದಾರೆ.

ಜೆಡಿಎಸ್ ಸೊರಬ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಮೂರು ಸ್ಥಾನಗಳನ್ನು ಪಡೆದು ಬಲ ಹೆಚ್ಚಿಸಿಕೊಂಡಿದೆ.

ಶಿವಮೊಗ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಶಿವಮೊಗ್ಗ ನಗರ
ಕೆ.ಬಿ.ಪ್ರಸನ್ನ ಕುಮಾರ್
ಕಾಂಗ್ರೆಸ್
39355 ರುದ್ರೇಗೌಡ
ಕೆಜೆಪಿ
39077
ಶಿವಮೊಗ್ಗ ಗ್ರಾಮಾಂತರ
ಶಾರದಾ ಪೂರಾನಾಯ್ಕ್ ಜೆಡಿಎಸ್ 48639 ಜಿ.ಬಸವಣ್ಯಪ್ಪ ಕೆಜೆಪಿ 38530
ತೀರ್ಥಹಳ್ಳಿ
ಕಿಮ್ಮನೆ ರತ್ನಾಕರ ಕಾಂಗ್ರೆಸ್ 37160 ಆರ್.ಎಂ.ಮಂಜುನಾಥ ಗೌಡ ಕೆಜೆಪಿ 35817
ಸಾಗರ
ಕಾಗೋಡು ತಿಮ್ಮಪ್ಪ ಕಾಂಗ್ರೆಸ್ 71960 ಬಿ.ಜಯಂತ್ ಕೆಜೆಪಿ 30712
ಶಿಕಾರಿಪುರ
ಬಿ.ಎಸ್.ಯಡಿಯೂರಪ್ಪ ಕೆಜೆಪಿ 69126 ಶಾಂತವೀರಪ್ಪ ಗೌಡ ಕಾಂಗ್ರೆಸ್ 44701
ಸೊರಬ ಮಧು ಬಂಗಾರಪ್ಪ ಜೆಡಿಎಸ್ 58541 ಹಾಲಪ್ಪ ಕೆಜೆಪಿ 37316
ಭದ್ರಾವತಿ ಅಪ್ಪಾಜಿ ಗೌಡ ಜೆಡಿಎಸ್ 78370 ಬಿ.ಕೆ.ಸಂಗಮೇಶ್
ಪಕ್ಷೇತರ 34271

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

English summary
Karnataka assembly Election 2013 Shimoga district Results. Here is complete information about winners and losers with their constituencies and party. BJP could not get single seat in district. DCM K.S.Eshwarappa also lost Shimoga city constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X