ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖಂಡರ ಜೊತೆ ಯುವ ಜನತೆ ಮುಖಾ ಮುಖಿ

By Mahesh
|
Google Oneindia Kannada News

ಬೆಂಗಳೂರು, ಮೇ.1: ಭಾರತದ ಭವಿತವ್ಯ ಯುವಕರ ಕೈಲಿದೆ ಎಂಬ ಮಾತು ಕ್ಲೀಷೆಯಾಗಿದೆ. ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮೇ 5 ರಂದು ಮತದಾನ ಮುಂದಿಟ್ಟುಕೊಂಡು ಯುವ ಸಮುದಾಯವನ್ನು ಸಕ್ರಿಯ ರಾಜಕಾರಣಿಗಳ ಜೊತೆ ಬೆರೆಯುವಂತೆ ಮಾಡುವ ಅಪೂರ್ವ ಕಾರ್ಯಕ್ರಮ ಮಂಗಳವಾರ ನಡೆದಿದೆ.

Youth Connect ಎಂಬ ವೇದಿಕೆ ಮೂಲಕ ಬೆಂಗಳೂರಿನ ಯುವ ಸಮುದಾಯ ರಾಜಕೀಯ ನಾಯಕರ ಜೊತೆ ನೇರ ಸಂವಾದ ನಡೆಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಬೆಂಗಳೂರಿಗಾಗಿ ಪ್ರತ್ಯೇಕ ಕಾರ್ಯಸೂಚಿ, ನಿಯಮಾವಳಿ ಹಾಗೂ ಕಾರ್ಯಕ್ರಮ ರೂಪಿಸುವ ಉದ್ದೇಶ ಹೊಂದಲಾಗಿತ್ತು.

ಪ್ರಶಸ್ತಿ ವಿಜೇತ ನಿರ್ದೇಶಕ ಕೆಎಂ ಚೈತನ್ಯ, ರೇಡಿಯೋ ಹಾಗೂ ಟಿವಿ ನಿರೂಪಕಿ ವಾಸಂತಿ ಹರಿಪ್ರಕಾಶ್, ಒಲಿಂಪಿಯನ್ ಹಾಗೂ ಕ್ರೀಡಾ ಸಲಹೆಗಾರ ಹಕಿಮುದ್ದೀನ್ ಹಬಿಬುಲ್ಲಾ ಅವರು ಬೆಂಗಳೂರಿನ ಯುವ ಸಮೂಹದ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು.

ರಾಜಕೀಯ ಮುಖಂಡರ ಪೈಕಿ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರೀಸ್, ಹೆಬ್ಬಾಳದ ಅಭ್ಯರ್ಥಿ ರೆಹಮಾನ್ ಶರೀಫ್ ಅವರಿದ್ದರು. ಇವರಿಬ್ಬರ ನಡುವೆ ಸಂಪರ್ಕವಾಗಿ ಕಾರ್ಯಕ್ರಮವನ್ನು ಐಐಎಂಬಿ ಪ್ರೊ ರಾಜೀವ್ ಗೌಡ (@rajeevgowda) ಅವರು ನಡೆಸಿಕೊಟ್ಟರು.

ವಾಸಂತಿ ಅವರು ಬೆಂಗಳೂರಿನ ಇಂದಿನ ಬಹುದೊಡ್ಡ ಸಮಸ್ಯೆಯಾದ ಕಸ ವಿಲೇವಾರಿ ಬಗ್ಗೆ ಪ್ರಶ್ನಿಸಿದರು. ತ್ಯಾಜ್ಯ ವಿಲೇವಾರಿ ಅಷ್ಟೇ ಅಲ್ಲದೆ, ತ್ಯಾಜ್ಯ ನಿರ್ವಹಣೆ, ತೆರಿಗೆ ಹಾಗೂ ಜನರಿಗೆ ಎಷ್ಟರ ಮಟ್ಟಿಗೆ ಜನಪ್ರತಿನಿಧಿಗಳು ಅರಿವು ನೀಡಿದ್ದಾರೆ ಎಂಬುದರ ಬಗ್ಗೆ ಪ್ರಶ್ನಿಸಿದರು.

ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಯನ್ನು ಎಲ್ಲಾ ಮುಖಂಡರು ಕಡೆಗಣಿಸುತ್ತಿರುವುದರ ಬಗ್ಗೆ ಹಕಿಮುದ್ದೀನ್ ಬೇಸರ ವ್ಯಕ್ತಪಡಿಸಿದರು. ಯುವ ಸಮುದಾಯ ಹಾಗೂ ಕ್ರೀಡಾಪಟುಗಳೊಂದಿಗೆ ಜನಪ್ರತಿನಿಧಿಗಳು ಸದಾ ಸಂಪರ್ಕದಲ್ಲಿರಬೇಕು ಎಂದು ಬಯಸಿದರು.

ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತ್ಯೇಕ ನೀಲಿನಕ್ಷೆಯನ್ನು ತಯಾರಿಸಿದೆ. ಮೂಲ ಸೌಕರ್ಯ ಹಾಗೂ ಸೇವೆ ಒದಗಿಸಲು ಕಾಂಗ್ರೆಸ್ ನಾಯಕರು ಸದಾ ಸಿದ್ಧ ಬೆಂಗಳೂರಿನ ಜನ ಜೀವನದ ಗುಣಮಟ್ಟವನ್ನು ಸುಧಾರಣೆ ನಾವು ಬದ್ಧ ಎಂದು ಕಾಂಗ್ರೆಸ್ ಮುಖಂಡ ಹ್ಯಾರೀಸ್ ಹೇಳಿದರು.

ನಂತರ ಮಾತನಾಡಿದ ರೆಹಮಾನ್, ಕ್ರೀಡಾ ಸೌಕರ್ಯ ಒದಗಿಸಲು ನಮ್ಮಲ್ಲಿ ತಜ್ಞರ ಕೊರತೆಯಿದೆ. ಸ್ಥಳೀಯರು ಕೋಚ್ ಅಥವಾ ಸಲಹೆಗಾರರಾಗಲು ಒಪ್ಪುತ್ತಿಲ್ಲ ಹೀಗಾಗಿ ಪ್ರತಿಭಾವಂತರ ನಡುವೆ ನಮ್ಮ ಸಂಪರ್ಕ ಸಾಧ್ಯವಾಗುತ್ತಿಲ್ಲ. ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಪ್ರತಿಭೆ ಮಾತ್ರ ಮಣೆ ಹಾಕುವ ಭರವಸೆ ನೀಡಿದರು.

ಮಾಜಿ ಕಾಪ್ ಬಿಕೆ ಶಿವರಾಮ್ ಹಾಗೂ ಗಾಂಧಿನಗರ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಅವರು ಯೂಥ್ ಜೊತೆ ಕನೆಕ್ಟ್ ಆಗಲು ಬಂದಿರಲಿಲ್ಲ. ಬಂದಿದ್ದ ಯುವಕರಿಗೆ ನಾಯಕ ಮಾತುಗಳಲ್ಲಿ ಒಂದಿಷ್ಟು ಭರವಸೆ ಮೂಡಿದರೂ ಅನೇಕ ಪ್ರಶ್ನೆಗಳನ್ನು ಹೊತ್ತುಕೊಂಡು ಸಾಗಿದರು ಆದರೆ, ಇಂಥದ್ದನ್ನು ವೇದಿಕೆ ರೂಪಿಸಿದ ಆಯೋಜಕರ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

English summary
With young voters out to make a difference in India, the May 5 elections in Karnataka have become crucial to involve the youth in poll process. A ‘Youth Connect' platform was created yesterday to facilitate the youth in Bangalore to connect with the political leaders and set an agenda in policy and programmes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X