ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣದಲ್ಲಿ ಗಳಗಳನೆ ಅತ್ತ ದೊಡ್ಡಗೌಡ್ರ ಸೊಸೆ

By Srinath
|
Google Oneindia Kannada News

jds-channapatna-anitha-kumarswamy-weeps-during-campaign
ಚನ್ನಪಟ್ಟಣ, ಏ.30: ಹಾಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಣ್ಣಿರು ಹರಿದಿದೆ. ಈ ಬಾರಿ ದೊಡ್ಡಗೌಡ್ರ ಕುಟುಂಬದ ಸೊಸೆ ಅನಿತಾ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಮಾವ ಮತ್ತು ಪತಿ ಹಗಲಿರುಳೆನ್ನದೆ ದುಡಿಯುತ್ತಿರುವುದನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.

ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯೂ ಆದ ಅನಿತಾ ಅವರು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಇಳಿವಯಸ್ಸಿನಲ್ಲಿರುವ ತಮ್ಮ ಮಾವ, ಪತಿ ಹಗಲಿರುಳು ನಿದ್ದೆ, ಊಟ ಇಲ್ಲದೆ ಹೋರಾಡುತ್ತಿದ್ದಾರೆ. ಉರಿಬಿಸಿಲ ನಡುವೆಯೂ ಅವರು ಪಡುತ್ತಿರುವ ಕಷ್ಟ ನೋಡಲಾಗುತ್ತಿಲ್ಲ ಎಂದು ಗದ್ಗದಿತರಾದರು.

'ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಪ್ರಚಾರ ಸಂದರ್ಭದಲ್ಲಿ ಕಣ್ಣೀರು ಹಾಕಿದ ದೊಡ್ಡಗೌಡ್ರ ಸೊಸೆ ಅನಿತಾ, ವಯಸ್ಸಾದ ಮಾವನ ಸೇವೆ ಮಾಡಬೇಕಾದ ನಾನು ಅವರಿಂದ ನನ್ನ ಪರ ಮತಯಾಚನೆ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ರಾಜಕಾಕೀಯಕ್ಕೆ ಬಂದು ಏನೂ ಸಾಧನೆ ಮಾಡಬೇಕಿಲ್ಲ.

ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಹತ್ವಾಕಾಂಕ್ಷೆಯಿಂದ ಅವರೊಂದಿಗೆ ಹೆಜ್ಜೆಹಾಕುತ್ತಿದ್ದೇನೆ' ಎಂದು ಗಳಗಳನೆ ಕಣ್ಣಿರು ಸುರಿಸುತ್ತಲೇ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅನಿತಾ ಮಾತನಾಡಿದರು.

ವರ್ಷದಿಂದ ಮನೆಯನ್ನೇ ಸೇರಿಲ್ಲ: ಮಾವ ಹಾಗೂ ಪತಿ ಹಗಲಿರುಳೆನ್ನದೆ ಪ್ರಚಾರ ಮಾಡುತ್ತಿದ್ದಾರೆ. 1 ವರ್ಷದಿಂದ ಸರಿಯಾಗಿ ಮನೆಯನ್ನೇ ಸೇರಿಲ್ಲ. ಊಟ, ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡುತ್ತಿಲ್ಲ. ಜನತೆ ಹಾಗೂ ರೈತರ ಕ್ಷೇಮಕ್ಕೋಸ್ಕರ ದುಡಿಯುತ್ತಿದ್ದಾರೆ. ಅವರ ಹೋರಾಟ ಸಾರ್ಥಕವಾಗಬೇಕಾದರೆ ಮತದಾರರು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದೂ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.

English summary
Karnataka Assembly Election- JDS Channapatna candidate Anitha Kumaraswamy weeps during campaign. She was telling to voters how his father-in-law HD deve Gowda and Husband HD Kumaraswamy are working to strengthen the party of late.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X