ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜರಾಜೇಶ್ವರಿ ನಗರ : ಪ್ರಚಾರದಿಂದ ಮುನಿರತ್ನ ದೂರ

|
Google Oneindia Kannada News

Munirathna
ಬೆಂಗಳೂರು, ಏ. 24 : ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಹೆಚ್ಚಾಗಿದ್ದ ಚುನಾವಣಾ ಪ್ರಚಾರದ ಕಾವು ಇದ್ದಕ್ಕಿಂದ್ದಂತೆ ಕಡಿಮೆ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ, ಚಿತ್ರ ನಿರ್ಮಾಪಕ ಮುನಿರತ್ನ ಎರಡು ದಿನಗಳಿಂದ ಪ್ರಚಾರ ಕಾರ್ಯದಿಂದ ದೂರ ಉಳಿದು ಸ್ವಯಂ ಗೃಹ ಬಂಧನ ವಿಧಿಸಿಕೊಂಡಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯಾಸ ಪಟ್ಟು ಟಿಕೆಟ್ ಪಡೆದ ಮುನಿರತ್ನ ಶುಕ್ರವಾರದ ನಂತರ ಬಹಿರಂಗ ಪ್ರಚಾರ ಕಾರ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಮಂಗಳವಾರ ಕ್ಷೇತ್ರ ಸುತ್ತುವ ಉದ್ದೇಶದಿಂದ ತಂದಿದ್ದ ಪ್ರಚಾರ ವಾಹನ ಬೆಳಗಿನಿಂದ ಸಂಜೆ ವರೆಗೆ ಮುನಿರತ್ನ ಮನೆಯ ಬಾಗಿಲು ಕಾದು ಹಿಂದಿರುಗಿದೆ.

ಮುನಿರತ್ನ ಅವರ ಆಪ್ತ ಮೂಲಗಳ ಪ್ರಕಾರ, ಅವರು ಸದ್ಯ ಪ್ರಚಾರ ಮಾಡುವ ಉತ್ಸಾಹದಲ್ಲಿಲ್ಲ. ಚುನಾವಣಾಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿ, ಬೇಲ್ ಪಡೆದು ಬಿಡುಗಡೆಗೊಂಡ ಬಳಿಕ ಮುನಿರತ್ನ ಮೌನಕ್ಕೆ ಶರಣಾಗಿದ್ದಾರೆ.

ಯೋಜನೆಯಂತೆ ಭಾನುವಾರದಿಂದ ಅವರು ಮೆನೆ-ಮನೆಯ ಪ್ರಚಾರ ಕಾರ್ಯ ಕೈಗೊಳ್ಳಬೇಕಾಗಿತ್ತು. ಆದರೆ, ಮುನಿರತ್ನ ಇದುವರೆಗೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿಲ್ಲ. ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸೋಮವಾರ ಘರ್ಷಣೆ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಅಲ್ಲಿ ಮುನಿರತ್ನ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಕ್ಷೇತ್ರದಲ್ಲಿನ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹನುಮಂತರಾಯಪ್ಪ ಈಗಾಗಲೇ ನಾಮಪತ್ರ ಹಿಂಪಡೆದಿದ್ದು, ಮುನಿರತ್ನ ಅವರ ಹಾದಿ ಸುಗಮವಾಗಿದೆ. ಆದರೂ, ಟಿಕೆಟ್ ಹಂಚಿಕೆ ಬಗ್ಗೆ ಉಂಟಾದ ಗೊಂದಲ, ಬಂಧನ, ಬಂಡಾಯ ಮುಂತಾದ ಬೆಳವಣಿಗೆಗಳಿಂದ ಮುನಿರತ್ನ ತುಂಬಾ ನೊಂದಿದ್ದಾರೆ. ಆದ್ದರಿಂದ ಪ್ರಚಾರದಿಂದ ದೂರ ಉಳಿದಿದ್ದಾರೆ.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಲಗ್ಗೆರೆ ವಾರ್ಡ್ ನ ಕಾರ್ಪೊರೇಟರ್ ಶಿವಣ್ಣ ಅವರನ್ನು ಭೇಟಿ ಮಾಡಿ ಮುನಿರತ್ನ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಬೆಂಬಲಿಗರು, ಕಾರ್ಯಕರ್ತರು ಮುನಿರತ್ನ ಪರವಾಗಿ ಪ್ರಚಾರ ಕೈಗೊಂಡಿದ್ದರೂ, ಅಭ್ಯರ್ಥಿ ಮುನಿರತ್ನ ಮಾತ್ರ ಕಾಣಸಿಗುತ್ತಿಲ್ಲ.

ಮುನಿರತ್ನ ಬೆಂಬಲಿಗರು ಬಂಡಾಯ ಅಭ್ಯರ್ಥಿಯಾಗಿದ್ದ ಹನುಮಂತರಾಯಪ್ಪ ಅವರನ್ನು ಭೇಟಿಯಾಗಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಒಟ್ಟಾರೆ ಕ್ಷೇತ್ರದ ಕಾಂಗ್ರೆಸ್ ನಾಯಕರು ಇದುವರೆಗೂ ತುಟಿ ಬಿಚ್ಚದೆ ಕುಳಿತಿರುವುದು ಮುನಿರತ್ನ ಅವರನ್ನು ಮತ್ತಷ್ಟು ಕಂಗೆಡಿಸಿದೆ.

ಬಿಜೆಪಿ ಮುಂದೆ : ಹಾಲಿ ಬಿಜೆಪಿ ಶಾಸಕ ಎಂ.ಶ್ರೀನಿವಾಸ್ ಕ್ಷೇತ್ರದ ತುಂಬಾ ಪಾದಯಾತ್ರೆ ನಡೆಸುತ್ತಾ ಮತ ಕೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಮಾತ್ರ ಮೌನದ ಮೊರೆ ಹೋಗಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಹೀಗೆ ಉತ್ಸಾಹ ಕಳೆದುಕೊಂಡರೆ ಪ್ರತಿಸ್ಪರ್ಧಿಗಳು ಅದನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಾರೆ.

ಕ್ಷೇತ್ರದ ಅಭ್ಯರ್ಥಿಗಳು
ಕಾಂಗ್ರೆಸ್ - ಆರ್ . ಮುನಿರತ್ನ
ಬಿಜೆಪಿ - ಎಂ.ಶ್ರೀನಿವಾಸ್
ಜೆಡಿಎಸ್ - ಕೆ.ಎಲ್.ತಿಮ್ಮನಂಜಯ್ಯ
ಕೆಜೆಪಿ - ವೆಂಕಟೇಶ ಗೌಡ
ಬಿಎಸ್ಆರ್ ಕಾಂಗ್ರೆಸ್ - ಡಾ.ಸಂಗಮೇಶ್

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Rajarajeshwari Nagar constituency Congress candidate Munirathna Naidu stay away from election campaign. From Friday Munirathna preferred to stay indoors. His close Sources said he was in no mood to campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X