ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆಪಿ ಜತೆ ಒಂದಾಗುವ ಮಾತನಾಡಿದ ಸಿಟಿ ರವಿ

By Srinath
|
Google Oneindia Kannada News

Karnataka Urban Local Body elections Live Results
ಬೆಂಗಳೂರು, ಮಾ. 11: ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಇಂತಿದೆ: ಆಡಳಿತ ವಿರೋಧಿ ಅಲೆ ಜೋರಾಗಿದೆ. ಕಾಂಗ್ರೆಸ್ ಇದರ ಲಾಭ ಪಡೆಯುತ್ತಿದೆ. ಕೆಜೆಪಿಗೆ ನಿರಾಶೆ, ಬಿಎಸ್ಆರ್ ಕಾಂಗ್ರೆಸ್ ಗೆ ಬಳ್ಳಾರಿಯಲ್ಲೇ ಸೋಲು.

ಒಟ್ಟಾರೆ ವಿರೋಧಿ ಅಲೆ, ಎಲ್ಲೆಡೆ ಕಾಂಗ್ರೆಸ್ಸೋ ಕಾಂಗ್ರೆಸ್ಸು... ವಿರೋಧಿ ಅಲೆ ವಿರೋಧ ಪಕ್ಷದ ಅಲೆ, ಜತೆಗೆ ಆಡಳಿತ ವಿರೋಧಿ ಅಲೆ. 4 ಮಹಾಪಾಲಿಕೆಗಳು ಕಾಂಗ್ರೆಸ್ ಮಡಿಲಿಗೆ. ಮೈಸೂರು ಅತಂತ್ರದತ್ತ. ಬೆಳಗಾವಿ ಮರಾಠಿ ಮಡಿಲಿಗೆ. ಸಿಎಂ ಶೆಟ್ಟರ್ ಅವರಿಂದಾಗಿ ಹು-ಧಾ ಒಂದೇ ಆಡಳಿತಾರೂಢ ಬಿಜೆಪಿ ಮಾನ ಉಳಿಸಿರುವುದು. ಅದರೆ ಅಲ್ಲೂ ಸರಳ ಬಹುಮತಕ್ಕೆ ಬಿಜೆಪಿ ಪರದಾಡುವಂತಾಗಿದೆ.

* ಬಳ್ಳಾರಿ ಫಲಿತಾಂಶ ಬಹುದೊಡ್ಡ ಹೊಡೆತ, ಜೀರ್ಣಿಸಿಕೊಳ್ಳಲಾಗದಂತಹುದು- ಬಿಜೆಪಿ ಅಧ್ಯಕ್ಷ ಗಾದಿಗೇರಲು ಮೂರೇ ಗೇಣು ಬಾಕಿ ಎನ್ನುತ್ತಿರುವ ಸದಾನಂದ ಗೌಡರ ವ್ಯಾಖ್ಯಾನ.
ಒಟ್ಟು ವಾರ್ಡ್: ಕಾಂಗ್ರೆಸ್ (1960), ಜೆಡಿಎಸ್ (906), ಬಿಜೆಪಿ( 906), ಕೆಜೆಪಿ (274), ಬಿಎಸ್ಆರ್ (84), ಪಕ್ಷೇತರರು (776)

* ಕೆಜೆಪಿ ಜತೆ ಒಂದಾಗುವ ಮಾತನಾಡಿದ ರವಿ: ಬಿಜೆಪಿ ವಿಭಜನೆಯಿಂದ ಸೋಲು. ಕೆಜೆಪಿ, ಬಿಜೆಪಿ ಒಂದಾಗಿದ್ದರೆ ಜಯ ನಮ್ಮದೇ ಎಂದ ಸಿಟಿ ರವಿ.

* ಮಹಾನಗರ ಪಾಲಿಕೆ ಫಲಿತಾಂಶ
ಮೈಸೂರು 60
- 12 BJP, 22 Cong, JDS 20, KJP 1, BSR 1, Ind 9
ಮಂಗಳೂರು 60- 20 BJP, 35 Cong, 2 JDS,
ಹುಬ್ಬಳ್ಳಿ ಧಾರವಾಡ 67- BJP 22, Cong 14, JDS 7, Ind 1
ಬೆಳಗಾವಿ 58- 50 ಪಕ್ಷೇತರರು- 20 ಕನ್ನಡದವರಾಗಿದ್ದರೆ, 30 ಮರಾಠಿಗರೇ.
ಗುಲ್ಬರ್ಗ 55- 7 BJP, 23 Cong, 10 JDS, 7 KJP, Ind 6
ದಾವಣಗೆರೆ 41 - BJP 1, 36 Cong, BSR 1,
ಬಳ್ಳಾರಿ 35 - BJP 0, 26 Cong, BSR 6, JDS 1, Ind 2

* ಕಾಂಗ್ರೆಸ್ಸಿನ ರಮೇಶ್ ಜಾರಕಿಹೊಳಿ ಬೆಂಬಲಿತ ಪಕ್ಷೇತರರದ್ದೇ ಬೆಳಗಾವಿಯಲ್ಲಿ ಕೈಮೇಲಾಗಿರುವುದು.
* ಹೀನಾಯ ಸೋಲು: ಬಿಎಸ್ಸಾರಿಗಿಂತ ಕೆಜೆಪಿ ತುಸು ಮೇಲು
* ಮಾಗಡಿ ಪುರಸಭೆ 23: ಬಿಜೆಪಿ 0, ಕಾಂಗ್ರೆಸ್ 14, ಜೆಡಿಎಸ್ 8, ಇತರ 1
* ಬೀದರ್ ನಗರ ಸಭೆ 35ರಲ್ಲಿ ಕಾಂಗ್ರೆಸ್ 12, ಜೆಡಿಎಸ್ 12, ಬಿಜೆಪಿ 5, ಕೆಜೆಪಿ 5, ಪಕ್ಷೇತರರು 3
* ಕೊಪ್ಪಳದಲ್ಲಿ ಕಾಂಗ್ರೆಸ್ 13, ಬಿಜೆಪಿ 11, ಜೆಡಿಎಸ್ 3, ಕೆಜೆಪಿ 0 ಬಿಎಸ್‌ಆರ್ 1, ಇತರರು 3
* ಗಂಗಾವತಿ ನಗರಸಭೆ 31ರಲ್ಲಿ ಬಿಜೆಪಿ 4, 9 ಕಾಂಗ್ರೆಸ್, 16 ಜೆಡಿಎಸ್, ಕೆಜೆಪಿ 0, ಬಿಎಸ್ಆರ್ 1, ಇತರರು 1
* ಕುಷ್ಟಗಿ ಪುರಸಭೆ 23ರಲ್ಲಿ 8 ಬಿಜೆಪಿ, 7 ಕಾಂಗ್ರೆಸ್, 5 ಜೆಡಿಎಸ್

* ಗಂಗಾವತಿ ನಗರಸಭೆ ಜೆಡಿಎಸ್ ತೆಕ್ಕೆಗೆ
* ಬಿಜಾಪುರ ನಗರಸಭೆ ಅತಂತ್ರ
* ಬೀದರ್ ನಗರಸಭೆಯಲ್ಲಿ ಅತಂತ್ರ ಫಲಿತಾಂಶ
* ಶಹಾಬಾದ್ ನಗರ ಸಭೆ ಅತಂತ್ರ
* ಸಾಗರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ
* ಹೊಳೆನರಸೀಪುರದಲ್ಲಿ ಮುಂದುವರಿದ ಜೆಡಿಎಸ್ ಹವಾ

* ಬಳ್ಳಾರಿ ಫಲಿತಾಂಶ ಬಹುದೊಡ್ಡ ಹೊಡೆತ- ಸದಾನಂದ ಗೌಡ
* ಮತ್ತೆ ಕಾಂಗೈ ಮಡಿಲಿಗೆ ಬಳ್ಳಾರಿ; ಬಜೆಪಿಗೆ ದೊಡ್ಡ ಸೊನ್ನೆ
* ಚಿತ್ರದುರ್ಗ ಜೆಡಿ ಎಸ್; ಹೊಳಲ್ಕೆರೆ ಕಾಂಗ್ರೆಸ್
* ಭದ್ರಾವತಿ ಜೆಡಿಎಸ್ ಮುನ್ನಡೆ
* ನೆಲಮಂಗಲ ಜೆಡಿಎಸ್ ಮುನ್ನಡೆ
* ಹೊಸಕೋಟೆ ಕಾಂಗ್ರೆಸ್ ಮುನ್ನಡೆ
*ಬೆಂಗಳೂರು ಗ್ರಾಮಾಂತರ ಜೆಡಿಎಸ್ ಅಲೆ
* ರಾಮನಗರ ಕಾಂ 16, ಜೆಡಿಎಸ್ 12
* ಕಾರವಾರ ನಗರಸಭೆ- ಬಿಜೆಪಿ ಕಾಂಗ್ರೆಸ್ ಸಮಸಮ
* ಕನಕಪುರ ಕಾಂಗ್ರೆಸ್ ಜಯಭೇರಿ
* ಬೆಳಗಾವಿ 31 ಸ್ವತಂತ್ರರು, ಅದರಲ್ಲಿ ಮರಾಠಿ ಸ್ವತಂತ್ರರದ್ದೇ ಪಾರುಪತ್ಯ
* ಹೊಸಪೇಟೆಯಲ್ಲೂ ಬಿಎಸ್ಆರ್ ಗೆ ಸೋಲು- ಕಾಂಗ್ರೆಸಿಗೇ ಗೆಲುವು
* ಕಾಗೇರಿ ಶಿರಸಿ ಕಾಂಗೈಗೆ
* ರಾಮನಗರ ಕಾಂಗ್ರೆಸ್ ಪಕ್ಷಕ್ಕೆ

* ತುಮಕೂರು ಕಾಂಗ್ರೆಸ್ 73, ಬಿಜೆಪಿ 17, ಜೆಡಿಎಸ್ 85, ಕೆಜೆಪಿ 19
* ಕೊಪ್ಪಳ: ಬಿಜೆಪಿ ಕಾಂಗ್ರೆಸ್ ಸಮಬಲ
* ಚಿಂತಾಮಣಿ ಬಂಡಾಯ ಕಾಂಗೈ ಸುಧಾಕರ್ -13 ಕಡೆ ಗೆಲುವು
* ಚಿತ್ರದುರ್ಗ ನಗರಸಭೆ ಜೆಡಿಎಸ್ ಮುನ್ನಡೆ
* ಹರಿಹರದಲ್ಲಿ ಕೆಜೆಪಿಗೆ ನಾಲ್ಕೇ ಸ್ಥಾನ. ಕಾಂಗ್ರೆಸ್, ಜೆಡಿಎಸ್ ಸಮಸಮ
* ಮುಖ್ಯಮಂತ್ರಿ ಮಾನ ಉಳಿಸಿದ ಹುಬ್ಬಳ್ಳಿ-ಧಾರವಾಡ
* ಮಂಗಳಮುಖಿ ಕಾಂಗ್ರೆಸ್ ನ ಪರ್ವೀನ್ ಬಾನು ಜಯಭೇರಿ
* ರಾಣೆಬೆನ್ನೂರು ಕೆಜೆಪಿ ಮುನ್ನಡೆ
* ಕೋಲಾರ, ಚಿಂತಾಮಣಿ ನಗರಸಭೆ JDS ಪಾಲು,
* ಶಿವಮೊಗ್ಗ ನಗರಸಭೆಯಲ್ಲಿ ಕಾಂಗ್ರೆಸ್ ಮುನ್ನಡೆ
* ಚಾಮರಾಜನಗರ ಕೆಜೆಪಿಗೆ ನಾಲ್ಕೇ ಸ್ಥಾನ
* ಬೆಳಗಾವಿ ಪಾಲಿಕೆ: 16 ಸ್ವತಂತ್ರರು ಜಯಭೇರಿ
* ಶಿಕಾರಿಪುರ ಕೆಜೆಪಿ ತೆಕ್ಕೆಗೆ
* ಶ್ರೀನಿವಾಸಪುರ ಕಾಂಗ್ರೆಸ್ ಪಾಲು
* ಮಂಡ್ಯ ನಗರಸಭೆ ಕಾಂಗೈ, ಜೆಡಿಎಸ್ ಮೇಲುಗೈ, ಕೆಜೆಪಿ, ಬಿಜೆಪಿ 0
* ಸಂಕೇಶ್ವರ ಪುರಸಭೆ ಬಿಜೆಪಿ ತೆಕ್ಕಗೆ
* ಮಳವಳ್ಳಿ ಜೆಡಿಎಸ್ ಪಾಲಿಗೆ
* ಚಿಕ್ಕಮಗಳೂರು ಬಿಜೆಪಿ ಪಾಲು
* ಉಡುಪಿ ಆಡಳಿತವಿರೋಧಿ ಅಲೆ, ಕಾಂಗ್ರೆಸಿಗೆ ಜಯ
* ಶಿಡ್ಲಘಟ್ಟ ಪುರಸಭೆ ಕಾಂಗ್ರೆಸ್ ಪಾಲು
* ಅಫ್ಜಲ್ ಪುರ ಪಟ್ಟಣ ಪಂಚಾಯತ್ ಕೆಜೆಪಿ ತೆಕ್ಕೆಗೆ
* ಸವದತ್ತಿ ಪುರಸಭೆ ಬಿಜೆಪಿ ಪಾಲು
* ಚಿಕ್ಕನಾಯಕನಹಳ್ಳಿ ಪುರಸಭೆ ಜೆಡಿಎಸ್ ಪಾಲು
* ಶೃಂಗೇರಿ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
* ಹಾನಗಲ್, ಬ್ಯಾಡಗಿ ಪುರಸಭೆ ಕೆಜೆಪಿ ಗೆಲುವು
* ಮೈಸೂರು: ಸ್ನೇಕ್ ಶ್ಯಾಂ ಗೆ ವಾರ್ಡ್ ನಂ.17ರಲ್ಲಿ ಗೆಲುವು
* ವಿರಾಜಪೇಟೆ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ
* ಕೆಆರ್ ಪೇಟೆ ಪುರಸಭೆ ಕಾಂಗ್ರೆಸ್ ಪಕ್ಷಕ್ಕೆ
* ಶ್ರೀರಂಗಪಟ್ಟಣ ಪುರಸಭೆ ಅತಂತ್ರ

ರಾಜಕೀಯ ಪಕ್ಷಗಳಿಗೆ ಚಳಿ ಬಿಡಿಸಿ, ವಿಧಾನಸಭೆ ಚುನಾವಣೆಗೂ ಮುನ್ನವೇ ಅಗ್ನಿಪರೀಕ್ಷೆ ಎದುರಿಸುವಂತೆ ಮಾಡಿದ್ದ ರಾಜ್ಯ ಚುನಾವಣೆ ಆಯೋಗ ಇಂದು ಸೋಮವಾರ ಸ್ಥಳೀಯ ಸಂಸ್ಥೆ ಚುನಾವಣೆಗಳ ಮತದಾನದ ಫಲಿತಾಂಶವನ್ನು ಬಹಿರಂಗಪಡಿಸಲಿದೆ.

ಸುಮಾರು 86 ಲಕ್ಷ ಮಂದಿ ಮತದಾರರು ಮತ್ತು ಸುಮಾರು 22 ಸಾವಿರ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಒಲ್ಲದ ಮನಸ್ಸಿನಿಂದಲೇ ಚುನಾವಣೆ ಅಖಾಡಕ್ಕಿಳಿದಿದ್ದ ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ಸಾಲಿನಲ್ಲಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ತಮ್ಮ ನೂತನ ಪಕ್ಷಗಳನ್ನು ಕಣಕ್ಕಿಳಿಸಿ ಮತದಾರನ ನಾಡಿಮಿಡಿತ ಅರಿತುಕೊಳ್ಳಲು ಯತ್ನಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಕೆಜೆಪಿ), ಮಾಜಿ ಸಚಿವ ಬಿ ಶ್ರೀರಾಮುಲು (ಬಿಎಸ್‌ಆರ್ ಕಾಂಗ್ರೆಸ್) ಪಾಲಿಗೆ ಇಂದಿನ ಫಲಿತಾಂಶ ಮಹತ್ವದ್ದಾಗಲಿದೆ.

ಆದರೆ ಇದು ಕೇವಲ 86 ಲಕ್ಷ ಮಂದಿ ಮತದಾರರ ಹಕ್ಕು ಚಲಾವಣೆಯಾಗಿದ್ದು, ಇಡೀ ರಾಜ್ಯದ ಜನತೆಯ ಒಟ್ಟಾಭಿಪ್ರಾಯ ಆಗಲಾರದು. ಹಾಗಾಗಿ ರಾಜಕೀಯ ನೇತಾರರು ಫಲಿತಾಶವನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿ, ಅರ್ಥೈಸಿಕೊಳ್ಳಬಹುದು. ಈ ಸಂದರ್ಭದಲ್ಲಿ 'ಒನ್ಇಂಡಿಯಾಕನ್ನಡ' ಕ್ಷಣಕ್ಷಣದ ಫಲಿತಾಂಶವನ್ನು ಎಂದಿನಂತೆ ತನ್ನ ಓದುಗರಿಗೆ ಒದಗಿಸಲು ಸಜ್ಜಾಗಿದೆ.

ಬೆಳಗ್ಗೆ 8 ಗಂಟೆಯಿಂದ ತಾಜಾ ಫಲಿತಾಂಶಕ್ಕಾಗಿ ನೋಡುತ್ತಿರಿ, ಒನ್ಇಂಡಿಯಾಕನ್ನಡ. ಜತೆಗೆ ಟ್ವಿಟ್ಟರ್ ಅಪ್ ಡೇಟ್ ಇದೆ.

2007ರ ಮೀಸಲಾತಿ ಪಟ್ಟಿಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತು ಪಡಿಸಿ, ಉಳಿದ 7 ಮಹಾನಗರ ಪಾಲಿಕೆಗಳಿಗೆ ( ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಗುಲ್ಬರ್ಗ, ದಾವಣಗೆರೆ, ಬಳ್ಳಾರಿ) ಚುನಾವಣೆ ನಡೆದಿದೆ.

208 ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಮಾರ್ಚ್ 7ರಂದು ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ 4,492, ಬಿಜೆಪಿಯ 3,954, ಜೆಡಿಎಸ್‌ನ 3,651, ಕೆಜೆಪಿಯ 1,966 ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ನ 1,496 ಅಭ್ಯರ್ಥಿಗಳಲ್ಲದೇ ಉಳಿದ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 21, 974 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 85 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರೆ, 24 ವಾರ್ಡ್‌ಗಳಲ್ಲಿ ನಾಮಪತ್ರಗಳೇ ಸಲ್ಲಿಕೆ ಆಗಿರಲಿಲ್ಲ.

ಈ ಅಂಕಿ ಅಂಶವನ್ನೊಮ್ಮೆ ನೋಡಿ.
ಕಣದಲ್ಲಿರುವ ಅಭ್ಯರ್ಥಿಗಳು 21974
ಒಟ್ಟು ವಾರ್ಡ್‌ಗಳು 4867
ಮಹಾನಗರ ಪಾಲಿಕೆ 7
ನಗರಸಭೆ 43
ಪುರಸಭೆ 65
ಪಟ್ಟಣ ಪಂಚಾಯಿತಿ 93
ಅವಿರೋಧ ಆಯ್ಕೆ 85

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka Urban Local Body elections Live Results- The counting of votes polled in the urban local body (ULB) elections held on March 7 will be held in various centres today, Mar 11.The announcements of the results can be obtained by logging into oneindiakannada from 8 am. Also follow https://twitter.com/oneindiakannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X