ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ನೇಹಾ ಐನ್‌ಸ್ಟಿನ್‌ ಗಿಂತ ಬುದ್ಧಿವಂತೆ

By Mahesh
|
Google Oneindia Kannada News

ಬೆಂಗಳೂರು, ಮಾ.6: ವಿಜ್ಞಾನಿ ಐನ್‌ಸ್ಟಿನ್‌, ಸ್ಟೀಫನ್ ಹಾಕಿಂಗ್ಸ್ ಜಗತ್ತಿನ ಅಪ್ರತಿಮ ವಿಜ್ಞಾನಿಗಳ ಬುದ್ಧಿಮತ್ತೆಯನ್ನು ಬೆಂಗಳೂರು ಮೂಲದ 12 ವರ್ಷದ ಬಾಲಕಿ ಮೀರಿಸಿದ್ದಾರೆ. ನೇಹಾ ರಾಮು ಕಡೆಗೆ ಇಡೀ ಜಗತ್ತೇ ತಿರುಗಿ ನೋಡುತ್ತಿದೆ. ಐಕ್ಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿನ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನು ನೇಹಾ ಮೀರಿಸಿದ್ದಾಳೆ.

ಐದು ವರ್ಷದ ಹಿಂದೆ ತನ್ನ ಪೋಷಕರ ಜೊತೆ ಬ್ರಿಟನ್‌ ಗೆ ವಲಸೆ ಹೋಗಿ ಅಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ನಡೆದ ಬುದ್ಧಿಮತ್ತೆ (ಐಕ್ಯೂ) ಪರೀಕ್ಷೆಯಲ್ಲಿ 162 ಅಂಕಕ್ಕೆ 162 (ಗರಿಷ್ಠ) ಅಂಕ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾಳೆ. ಐನ್‌ಸ್ಟಿನ್‌, ಬಿಲ್‌ ಗೇಟ್ಸ್‌, ಹಾಕಿನ್ಸ್,ಅವರ ಬುದ್ಧಿಮತ್ತೆಯ ಅಂದಾಜು 162ಕ್ಕೆ 160 ಮಾತ್ರ ಎಂಬುದು ಕುತೂಹಲಕಾರಿ.

ನೇತ್ರ ತಜ್ಞ ದಂಪತಿ ಜಯಶ್ರೀ ಮತ್ತು ರಾಮು ಮುನಿರಾಜು ಅವರ ಪುತ್ರಿ ನೇಹಾ. ಮೆನ್ಸಾ ಐ ಕ್ಯು ಪರೀಕ್ಷೆಯಲ್ಲಿ ಈ ಅಂಕ ಪಡೆಯುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾಳೆ. ಪುತ್ರಿಯ ಈ ಸಾಧನೆ ಜಯಶ್ರೀ ಮತ್ತು ರಾಮು ಮುನಿರಾಜು ದಂಪತಿಯನ್ನು ಸಂತಸದ ಕಡಲಲ್ಲಿ ತೇಲಿಸಿದೆ.

ಭಾರತದಿಂದ ಬ್ರಿಟನ್‌ಗೆ ಹೋದಾಗ ನೇಹಾಗೆ ಅಲ್ಲಿನ ಶಿಕ್ಷಣ ಪದ್ಧತಿಗೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತಂತೆ. ಮೆನ್ಸಾ ಪರೀಕ್ಷೆಯಂತೂ ಕಠಿಣವಾಗಿತ್ತು ಎಂದು ಎಲ್ಲಾ ಬಾಲಕಿಯರಂತೆ ಹ್ಯಾರಿ ಪಾಟರ್ ಮೇಲೆ ಆಣೆ ಮಾಡುತ್ತಾಳೆ. ಆದರೆ,ಪರೀಕ್ಷೆಯಲ್ಲಿ ಆಕೆ ಗಳಿಸಿದ ಅಂಕಗಳನ್ನು ನೋಡಿ ತಾಯಿ ಜಯಂತಿಗೆ ಮೊದಲಿಗೆ ನಂಬಿಕೆ ಹುಟ್ಟಲಿಲ್ಲವಂತೆ. ಶಾಲೆ ಹೋಗಲು ಎಲ್ಲಾ ಮಕ್ಕಳಂತೆ ಹಠ ಮಾಡುತ್ತಿದ್ದಳು.

ಆದರೆ, ಗ್ರ್ಯಾಮರ್‌ ಸೇರಿದಂತೆ ವಿವಿಧ ಪಠ್ಯೇತರ ಶೈಕ್ಷಣಿಕ ಚಟುವಟಿಕೆಗಳಲ್ಲೂ ನೇಹಾ ಉತ್ತಮ ಸಾಧನೆಯನ್ನೇ ಮಾಡಿದ್ದಳು. ಆದರೆ ಆಕೆ ಈ ಮಟ್ಟಿನ ಬುದ್ಧಿವಂತೆ ಎನ್ನುವುದು ನಮಗೇ ಗೊತ್ತಿರಲಿಲ್ಲ. ಆಕೆಯ ಸಾಧನೆ ನಮ್ಮ ಬಗ್ಗೆ ನಾವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ನೇಹಾ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ರಜಾ ದಿನಗಳಲ್ಲಿ ನೇಹಾ ಬ್ರಿಟನ್‌ನಿಂದ ಅಮೆರಿಕಕ್ಕೆ ತೆರಳಿ ಅಲ್ಲಿ ಮನುಷ್ಯನ ಮೆದುಳು ಮತ್ತು ನರವ್ಯವಸ್ಥೆಯ ಬಗ್ಗೆ ನೀಡಲಾಗುವ ತರಬೇತಿ ಶಿಬಿರಕ್ಕೆ ಹಾಜರಾಗಿದ್ದಳಂತೆ. ಹೀಗೆ ಬಾಲ್ಯದಿಂದಲೂ ವಿಶೇಷ ಚಟುವಟಿಕೆಗಳ ಮೂಲಕ ಪೋಷಕರ ಗಮನ ಸೆಳೆದಿದ್ದ ನೇಹಾ ಇದೀಗ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ್ದಾಳೆ.

ಇಷ್ಟು ಮಾತ್ರವಲ್ಲ ಪ್ರಸಿದ್ಧ ಹಾರ್ವಡ್‌ ವಿವಿಯ ಪ್ರವೇಶ ಪಡೆಯಲು 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಇರುವ ಪ್ರವೇಶ ಪರೀಕ್ಷೆಯಲ್ಲಿಯೂ ಆಕೆ 800 ಅಂಕಗಳ ಪೈಕಿ 740 ಅಂಕ ಪಡೆದ ಸಾಧನೆ ಮಾಡಿದ್ದಾಳೆ. ಪೋಷಕರಂತೆ ವೈದ್ಯಕೀಯ ಶಿಕ್ಷಣ ಪಡೆದು ಹಾರ್ವಡ್ ವಿವಿಯಲ್ಲಿ ಓದುವ ಆಸೆ ನೇಹಾಗೆ ಇದೆಯಂತೆ.

ಇಂಗ್ಲೆಂಡ್ ನಲ್ಲಿ 1946ರಲ್ಲಿ ಬ್ಯಾರಿಸ್ಟರ್ ರೋಲ್ಯಾಂಡ್ ಬೆರ್ರಿಲ್ ಹಾಗೂ ವಿಜ್ಞಾನಿ ಕಮ್ ವಕೀಲ ಡಾ ಲ್ಯಾನ್ಸ್ ವೇರ್ ಅವರು Mensa ಸಂಸ್ಥೆ ಆರಂಭಿಸಿದರು. ಬುದ್ಧಿವಂತರ ಒಕ್ಕೂಟ ಸ್ಥಾಪಿಸುವ ಉದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆಯಲ್ಲಿ IQ(what is IQ) ಮಟ್ಟ ಅಧಿಕವಾಗಿರುವವರನ್ನು ಒಗ್ಗೂಡಿಸಲಾಗುತ್ತಿತ್ತು.ಈಗ ನೇಹಾಳಂತೆ ಸುಮಾರು 110,000 Mensans ಸುಮಾರು 100 ದೇಶಗಳಲ್ಲಿದ್ದಾರೆ.

ಆಸ್ಕರ್ ವಿಜೇತೆ ನಟಿ ಜೀನಾ ಡೇವಿಸ್, ಫೋರ್ಡ್ ಮಾಜಿ ಚೇರ್ಮನ್ ಡೋನಾಲ್ಡ್ ಪೀಟರ್ಸನ್, ಬಾಬಿ ಸಿಜ್ಜ್ ಕೂಡಾ Mensans ಗುಂಪಿನಲ್ಲಿದ್ದಾರೆ.

English summary
Neha Ramu, A 12-year-old Bangalore girl has recorded an incredible score in one of the world's toughest IQ tests that makes her smarter than scientist Albert Einstein and physicist Stephen Hawking. Neha migrated to the UK along with her doctor parents five years ago,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X