ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್-ಕೆಜೆಪಿ ಸಮಝೋತಾ: ಯಡಿಯೂರಪ್ಪ ಸ್ಪಷ್ಟನೆ

By Srinath
|
Google Oneindia Kannada News

ಸಾಗರ, ಮಾ.5: ಕರ್ನಾಟಕದ ಸಮಸ್ತ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 'ತಾನು ಇದುವರೆಗೂ ಕಾಂಗ್ರೆಸ್‌ ಜತೆ ಕೈಜೋಡಿಸಿಲ್ಲ; ಮುಂದೆಯೂ ಇಲ್ಲ' ಎಂದು ಪ್ರಮಾಣ ಪೂರ್ವಕ ಧಾಟಿಯಲ್ಲಿ ಹೇಳಿದ್ದಾರೆ.

'ಕಾಂಗ್ರೆಸ್ ಜತೆ ಕೆಜೆಪಿ ಸಮಝೋತಾ ಆಗಿದೆ. ಯಡಿಯೂರಪ್ಪಗೆ ಸಿಬಿಐ ಭೀತಿವಾದ ಎಂಬುದೆಲ್ಲ ಸುಳ್ಳೇ ಸುಳ್ಳು' ಎಂದಿರುವ ಯಡಿಯೂರಪ್ಪ 'ಕಾಂಗ್ರೆಸ್‌ ಜತೆ ಕೈಜೋಡಿಸಿ ನನಗೆ ಆಗಬೇಕಾಗಿದ್ದು ಏನೂ ಇಲ್ಲ. ನಾನು ಕಾಂಗ್ರೆಸ್‌ ಕೈಗೊಂಬೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

BS Yeddyurappa clarifies on Congress KJP partnership in Karnataka elections

ಸಾಗರದಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಎಸ್ ವೈ, ಮುಖ್ಯಮಂತ್ರಿ ಶೆಟ್ಟರ್‌ ನಾನು ಕಾಂಗ್ರೆಸ್‌ ಕೈಗೊಂಬೆ ಎಂದು ಟೀಕಿಸಿ, ಸಿಬಿಐ ತನಿಖೆಯಿಂದ ಬಚಾವಾಗಲು ಕಾಂಗ್ರೆಸ್‌ ಜೊತೆ ಗುಪ್ತ ಸಂಬಂಧ ಇರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಈಗಾಗಲೇ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ನಾನು ದೋಷಮುಕ್ತನಾಗಿ ಹೊರಗೆ ಬರುವ ಎಲ್ಲಾ ವಿಶ್ವಾಸವಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ನನಗೇನು ಆಗಬೇಕಾಗಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವು ಅಭಿವೃದ್ಧಿಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ನಂತರ ಸದಾನಂದ ಗೌಡ ಹಾಗೂ ಜಗದೀಶ್‌ ಶೆಟ್ಟರ್‌ ಅವಧಿಯಲ್ಲಿ ರಾಜ್ಯ 12ನೇ ಸ್ಥಾನಕ್ಕೆ ಕುಸಿದಿದೆ. ಬಿಜೆಪಿಯ ಸಹವಾಸವೇ ಬೇಡ ಎಂದು ಪಕ್ಷದಿಂದ ಹೊರಗೆ ಬಂದರೂ ಈ ತನಕ ನನ್ನ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟಿಲ್ಲ ಎಂದು ಬಿಎಸ್ ವೈ ತೀವ್ರ ಾಕ್ರೊಶ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಯೋಜನೆಗಳನ್ನು ಘೋಷಿಸುವಲ್ಲಿ ವಿಫಲವಾಗಿದ್ದು, ತಮ್ಮ ನೇತೃತ್ವದ ಶ್ರೀಗಂಧ ಸಂಸ್ಥೆಗೆ ಒಂದು ಕೋಟಿ ರೂ ಪಡೆದಿರುವುದೇ ಅವರ ದೊಡ್ಡ ಸಾಧನೆಯಾಗಿದೆ ಎಂದು ಯಡಿಯೂರಪ್ಪ ಇದೇ ವೇಳೆ ಲೇವಡಿ ಮಾಡಿದರು.

ಶೆಟ್ಟರ್‌ ಹಾಗೂ ಈಶ್ವರಪ್ಪ ಕರ್ನಾಟಕ ಜನತಾ ಪಕ್ಷವನ್ನು ಬೋರ್ಡ್‌ ಇಲ್ಲದ ಪಕ್ಷ ಎಂದು ಟೀಕಿಸುತ್ತಿದ್ದಾರೆ. ಮಾರ್ಚ್ 11ರ ನಂತರ ರಾಜ್ಯದ ಮತದಾರರು ಅಡ್ರೆಸ್‌, ಬೋರ್ಡ್‌ ಯಾರಿಗೆ ಇಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ ಸ್ಥಿತಿ ರಾಜ್ಯದಲ್ಲಿ ಏನು? ಎನ್ನುವುದನ್ನು ತೋರಿಸಿಕೊಡುತ್ತಾರೆ ಎಂದು ಭಾರಿ ಕರತಾಡನದ ಮಧ್ಯೆ ಗುಡುಗಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Former Karnataka chief minister, president of Karnataka Janata Party (KJP) BS Yeddyurappa clarified on Congress and KJP partnership in Karnataka elections in Sagar yesterday (Mar 4).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X