ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಚಾರ್ಯ ಹಬ್ಬ 2013ಕ್ಕೆ ಬೆಂಗಳೂರು ಸಜ್ಜು

By Mahesh
|
Google Oneindia Kannada News

ಬೆಂಗಳೂರು, ಮಾ.5: ಆಚಾರ್ಯ ಹಬ್ಬ ಮತ್ತೆ ಬಂದಿದೆ. ಬೆಂಗಳೂರಿನ ಬಹುನಿರೀಕ್ಷಿತ ಅತಿದೊಡ್ಡ ಕಾಲೇಜು ಹಬ್ಬ ಟೆಕ್ನೋ ಸಾಂಸ್ಕೃತಿಕ ಹಬ್ಬ-ಆಚಾರ್ಯ ಹಬ್ಬವಾಗಿ ವರ್ಣಮಯ ಚಾಲನೆ ಪಡೆಯಲಿದೆ. ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬೃಹತ್ ಹಬ್ಬದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮಾ.22 ಹಾಗೂ 23ರಂದು 'ಆಚಾರ್ಯ ಹಬ್ಬ 2013' ನಡೆಯಲಿದ್ದು, ಎರಡು ದಿನ ವಿವಿಧ ಸಂಸ್ಕೃತಿ ಹಾಗೂ ಪ್ರಾದೇಶಿಕ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ಸಂವಹನ ವೇದಿಕೆ ಒದಗಿಸಲಿದೆ.

ಅಂತಿಮ ವರ್ಷದ ವ್ಯಾಸಂಗದ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದಕ್ಕಿಂತ ಉತ್ತಮ ಸಾಂಸ್ಕೃತಿಕ ಹಬ್ಬ ಮತ್ತೆಲ್ಲೂ ಸಿಗದು ಎಂದು ವಿದ್ಯಾರ್ಥಿನಿ ಅರ್ಚನಾ ಅವರು ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು. ತಾಂಜಾನಿಯಾ, ಇರಾಕ್, ಭೂತಾನ್, ಯುನೈಟೆಡ್ ಕಿಂಗ್ ಡಮ್, ಅಫ್ಘಾನಿಸ್ತಾನ, ದಕ್ಷಿಣ ಕೊರಿಯಾದ ವಿದ್ಯಾರ್ಥಿಗಳು ತಮ್ಮ ದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಿಚಯಿಸಲಿದ್ದಾರೆ.

ಎಂದಿನಂತೆ ಡ್ಯಾನ್ಸ್ ಸ್ಪರ್ಧೆ, ರಾಕ್ ಬ್ಯಾಂಡ್ ಶೋ, ಫ್ಯಾಶನ್ ಶೋ, ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಕ್ರೀಡೆ ಮನರಂಜನೆಯುಕ್ತ ಕಾರ್ಯಕ್ರಮಗಳ ಪಟ್ಟಿಯೇ ತಯಾರಾಗಿದೆ. ರಸಪ್ರಶ್ನೆ, ಪೋಸ್ಟರ್ ಪೇಟಿಂಗ್, ಫೇಸ್ ಪೇಂಟಿಂಗ್ ಅಲ್ಲದೆ ಹೊಟ್ಟೆ ಪೂಜೆ ಮಾಡಿಕೊಳ್ಳಲು ಫುಡ್ ಸ್ಟಾಲ್ ಗಳು ಕಾದಿರುತ್ತದೆ.

ಬೆಂಗಳೂರಿನ ಅತಿ ದೊಡ್ಡ ಕಾಲೇಜು ಹಬ್ಬದಲ್ಲಿ ಪಾಲ್ಗೊಂಡು ಸಂತಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.. ಮಾರ್ಚ್ ಎರಡನೇ ವಾರ ನಡೆಯುವ ಮಾಧ್ಯಮ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಒನ್ ಇಂಡಿಯಾ, ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಸೇರಿದಂತೆ ವಿವಿಧ ಮಾಧ್ಯಮ ತಂಡದ ಆಟ ನೋಡಿ ಆನಂದಿಸಿ. ಈ ಹಬ್ಬದಲ್ಲಿ ಸಂಗ್ರಹಿತವಾಗುವ ಮೊತ್ತವನ್ನು ವಿದ್ಯಾರ್ಥಿಗಳ ಅಭಿವೃದ್ಧಿ ನಿಧಿಗೆ ಅರ್ಪಿಸಲಾಗುತ್ತಿದೆ.

ಆಚಾರ್ಯ ಕ್ಯಾಂಪಸ್ ನ ನಾಗರತ್ನಮ್ಮ ಸ್ಟೇಡಿಯಂನಲ್ಲಿ ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನ 120 ಎಕರೆ ವಿಶಾಲ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಟ್ಟಿಗೆ ಕಲೆತು ಹಾಡಿ ನಲಿದು ಕುಣಿದಾಡುವ ದೃಶ್ಯ ಸದಾ ಸ್ಮರಣೀಯ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Acharya Habba 2013, the annual fest of Acharya Institutes, Bangalore, is being held on March 22 and 23. Like every year, this time as well, there are a number of events and programmes at the cultural extravaganza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X