ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ!

By Srinath
|
Google Oneindia Kannada News

Yes Narendra Modi will address Wharton India Economic Forum Mar 23
ಅಹಮದಾಬಾದ್, ಮಾ.01‌: ಅಮೆರಿಕ ವೀಸಾ ಕೊಡದಿದ್ದರೆ ಕತ್ತೆ ಬಾಲ ಹೋಯ್ತು! ಇದೇ ತಿಂಗಳು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಫಿಲಡಲ್ಫಿಯಾದಲ್ಲಿ ಭಾಷಣ ಮಾಡಲಿದ್ದಾರೆ. ಅದೂ ಪ್ರತಿಷ್ಠಿತ Wharton India Economic Forum ವೇದಿಕೆಯನ್ನುದ್ದೇಶಿಸಿ ಈ ಭಾಷಣ ಮಾಡಲಿದ್ದಾರೆ.

ಏನು ಹಾಗಾದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಅಮೆರಿಕ ವೀಸಾ ಕೊಡ್ಬಿಡ್ತಾ, ಅವರಿಗೆ ವಿಧಿಸಿದ್ದ ದಿಗ್ಬಂಧನ ತೆರವುಗೊಳಿಸಿತಾ? ಎಂದು ಆಶ್ಚರ್ಯಚಿಕಿತರಾಗಬೇಡಿ.

ಇದು ಹೇಳಿ ಕೇಳಿ ಡಿಜಿಟಲ್/ಮಾಹಿತಿ ತಂತ್ರಜ್ಞಾನ ಯುಗ. ಪ್ರಪಂಚದ ಯಾವ ಮೂಲೆಯಿಂದ ಬೇಕಾದರೂ ಮತ್ತೊಂದು ಮೂಲೆಗೆ ಕನೆಕ್ಟ್ ಆಗಬಹುದು. ಮೋದಿ ಸಾಹೇಬರು ಹಾಗೆ ಇದೇ ಮಾರ್ಚ್ 23 ರಂದು Wharton India Economic ವೇದಿಕೆಯಲ್ಲಿ ಮಾತನಾಡಲಿದ್ದಾರೆ, through video conference! (ಮೊನ್ನೆ ವಿಧಾನಸಭೆ ಚುನಾವಣೆಯಲ್ಲೂ ಇದೇ ತಂತ್ರ ಅಳವಡಿಸಿಕೊಂಡು ಒಮ್ಮಗೇ ನಾಲ್ಕಾರು ಭಾಷಣ ಮಾಡಿದ ಅನುಭವ ಮೋದಿಗೆ ಇದೆ.)

ವೇದಿಕೆಯಲ್ಲಿ ಮೋದಿ ಪ್ರಮುಖ ಭಾಷಣಕಾರರು. ಅವರ ಜತೆಗೆ, ಯೋಜನಾ ಆಯೋಗದ ಉಪಾಧ್ಯಕ್ಷ, ಆಯೋಗದ ಅಧ್ಯಕ್ಷ ಮನಮೋಹನ್ ಸಿಂಗ್ ಅವರ ನಿಕಟವರ್ತಿ, ಆರ್ಥಿಕ ತಜ್ಞ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೂ ಸಹ ಈ 2-ದಿನಗಳ ಸಮಾವೇಶದಲ್ಲಿ ಮಾತನಾಡಲಿದ್ದಾರೆ.

ಎಲ್ಲಿಯ 'ನರಹಂತಕ/ಕೋಮುವಾದಿ' ಹಣೆಪಟ್ಟಿ ಹೊತ್ತ ಬಿಜೆಪಿ ನಾಯಕ ಮೋದಿ, ಎಲ್ಲಿಯ ಅಹ್ಲುವಾಲಿಯಾ, ಎಲ್ಲಿಯ ಫಿಲಡಪ್ಫಿಯಾ ಆರ್ಥಿಕ ವೇದಿಕೆ... ಮೋದಿ ಮಹಾತ್ಮೆ ಅಂದರೆ ಇದೇನಾ?

English summary
Gujarat Chief Minister Narendra Modi is to address Wharton India Economic Forum on Mar 23, through video conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X