ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಲ್ಲ, ಎರಡಲ್ಲ 680 ಪಂದ್ಯಗಳು ಮ್ಯಾಚ್ ಫಿಕ್ಸ್

By Mahesh
|
Google Oneindia Kannada News

Investigators Expose Global Football Fixing Scam
ಹೇಗ್, ಫೆ.5: ಕ್ರೀಡಾಲೋಕದ ಅತಿ ದೊಡ್ಡ ಹಗರಣವನ್ನು ಯುರೋಪಿನ ಅಪರಾಧ ನಿಗ್ರಹ ಸಂಸ್ಥೆ ಬಯಲಿಗೆಳೆದಿದೆ. ಸರಿ ಸುಮಾರು 680 ಫುಟ್ಬಾಲ್ ಪಂದ್ಯಗಳಲ್ಲಿ ಕಳ್ಳಾಟ ನಡೆದಿರುವ ಬಗ್ಗೆ ಸಾಕ್ಷಿ ಕಲೆ ಹಾಕಿರುವುದು ಕ್ರೀಡಾಭಿಮಾನಿಗಳಿಗೆ ದಿಗ್ಬ್ರಮೆ ಉಂಟು ಮಾಡಿದೆ.

ಯುರೋಪಿನ ಪೊಲೀಸರು, ಅಪರಾಧ ನಿಗ್ರಹ ಸಂಸ್ಥೆ ಮತ್ತು ನ್ಯಾಶನಲ್ ಪ್ರಾಸಿಕ್ಯೂಟರ್ಸ್‌ ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ವಿಶ್ವಕಪ್ ಫುಟ್ಬಾಲ್ ಮತ್ತು ಚಾಂಪಿಯನ್ಸ್ ಲೀಗ್ ಅರ್ಹತಾ ಪಂದ್ಯಾವಳಿಯಲ್ಲಿ ನಡೆಯುತ್ತಿರುವ ಬೃಹತ್ ಮ್ಯಾಚ್ ಫಿಕ್ಸಿಂಗ್ ಹಗರಣವೊಂದು ಬೆಳಕಿಗೆ ಬಂದಿದೆ. ವಿಶ್ವಕಪ್, ಯುರೋಪಿಯನ್ ಚಾಂಪಿಯನ್ಸ್‌ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಅರ್ಹತಾ ಪಂದ್ಯಗಳು ಸೇರಿದಂತೆ 680 ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದು ಪತ್ತೆಯಾಗಿದೆ.

ಜಾಗತಿಕ ಫಿಕ್ಸಿಂಗ್ ಜಾಲವೊಂದು ಸಿಂಗಾಪುರವನ್ನು ಕೇಂದ್ರವನ್ನಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವುದು ತನಿಖೆಯ ಮೂಲಕ ಬಹಿರಂಗಗೊಂಡಿದ್ದು, 2008 ಮತ್ತು 2011ರ ಅವಧಿಯಲ್ಲಿ ಯುರೋಪ್‌ನಲ್ಲಿ ಆಡಲಾಗಿರುವ 380 ಪಂದ್ಯಗಳಲ್ಲಿ ಹಾಗೂ ಇದೇ ಅವಧಿಯಲ್ಲಿ ಅಫ್ರಿಕಾ, ಏಷ್ಯಾ, ದಕ್ಷಿಣ ಮತ್ತು ಕೇಂದ್ರ ಅಮೆರಿಕದಲ್ಲಿ ನಡೆದ 300 ಫುಟ್ಬಾಲ್ ಪಂದ್ಯಗಳಲ್ಲಿ ಫಿಕ್ಸಿಂಗ್‌ನಡೆದಿದೆ ಎಂದು ಯುರೋಪೊಲ್ ಮುಖ್ಯಸ್ಥ ರಾಬ್ ವೆಯ್ನಿರೈಟ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದಾರೆ.

ಭಾರಿ ಮೊತ್ತದ ಬೆಟ್ಟಿಂಗ್: ಕಳೆದ ವರ್ಷ ಭ್ರಷ್ಟಾಚಾರ ನಿಗ್ರಹ ಕಾವಲು ಪಡೆಯು ನಡೆಸಿರುವ ತನಿಖೆಯಲ್ಲಿ ಪ್ರತಿವರ್ಷ ಒಂದು ಟ್ರಿಲಿಯನ್ ಡಾಲರ್ ಹಣ ಫುಟ್ಬಾಲ್‌ನ ಬೆಟ್ಟಿಂಗ್‌ಗಾಗಿ ಬಳಕೆಯಾಗುತ್ತಿದೆ. ಈ ಪೈಕಿ ಬಹುತೇಕ ಹಣ ಏಷ್ಯಾದ ರಾಷ್ಟ್ರಗಳಿಂದ ಹರಿದು ಬರುತ್ತಿರುವುದು ಗೊತ್ತಾಗಿದೆ.

ಜರ್ಮನಿಯ ತನಿಖಾಧಿಕಾರಿಗಳ ಅಭಿಪ್ರಾಯದಂತೆ ಫುಟ್ಬಾಲ್‌ನ ಫಿಕ್ಸಿಂಗ್ ಜಾಲ ಜಾಗತಿಕ ಮಟ್ಟದಲ್ಲಿ ಹರಡಿಕೊಂಡಿದೆ. ಫುಟ್ಬಾಲ್ ಆಡುತ್ತಿರುವ ಜಗತ್ತಿನ ಬಹುತೇಕ ದೇಶಗಳಲ್ಲಿ ಆಟಗಾರರು, ರೆಫರಿಗಳು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. 15 ದೇಶಗಳಲ್ಲಿ ಕಳ್ಳಾಟ ತೀವ್ರವಾಗಿದ್ದು, 425 ಅಧಿಕಾರಿಗಳು, ರೆಫರಿಗಳು ಹಾಗೂ ಆಟಗಾರರು ಬೆಟ್ಟಿಂಗ್ ಜಾಲದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

150 ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿರುವುದಕ್ಕೆ ಸಾಕ್ಷಾಧಾರಗಳು ಲಭಿಸಿವೆ. ಸಿಂಗಾಪುರದಲ್ಲಿ ಫಿಕ್ಸಿಂಗ್ ಜಾಲ ಕಾರ್ಯಾಚರಿಸುತ್ತಿದ್ದು, ಫಿಕ್ಸಿಂಗ್ ನಡೆಸಲು ಪ್ರತಿಯೊಂದು ಪಂದ್ಯಗಳಿಗೆ 100,000 ಯುರೋ ಲಂಚ ನೀಡಲಾಗುತ್ತಿದೆ ಎಂದು ಜರ್ಮನಿ ನಗರ ಬೊಕುಮ್‌ನಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸ್ ತಂಡದ ಮುಖ್ಯಸ್ಥ ಫ್ರೆಡ್‌ಹೆಲ್ಮ್ ಅಥೆನ್ಸ್ ತಿಳಿಸಿದ್ದಾರೆ.

ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಕ್ಲಬ್ ಅಥವಾ ಅಟಗಾರರ ಹೆಸರನ್ನು ಈ ವರೆಗೆ ಬಹಿರಂಗಪಡಿಸಿಲ್ಲ. ಯುರೋಪ್‌ನ ದೇಶಗಳಲ್ಲಿ ನಡೆಯುವ ನ್ಯಾಶನಲ್ ಲೀಗ್ ಪಂದ್ಯಗಳು, ಬ್ರಿಟನ್‌ನಲ್ಲಿ ಆಡಿರುವ ಪಂದ್ಯ ಸೇರಿದಂತೆ ಎರಡು ಚಾಂಪಿಯನ್ಸ್ ಲೀಗ್ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

English summary
Hundreds of soccer matches(as many as 680) have been fixed in a global betting scam run from Singapore, police said on Monday, in a blow to the image of the world's most popular sport and a multi-billion dollar industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X