ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆಪಿಯಿಂದ ಯಡಿಯೂರಪ್ಪ ಉಚ್ಚಾಟನೆ

By Mahesh
|
Google Oneindia Kannada News

ಬೆಂಗಳೂರು, ಜ.29: ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಕಲ್ಯಾಣ ಕರ್ನಾಟಕ ಕನಸು ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಶಾಸೌಧ ಮಂಗಳವಾರ (ಜ.29) ಒಮ್ಮೆಗೆ ಕುಸಿದು ಬಿದ್ದಿದೆ.

ಕರ್ನಾಟಕ ಜನತಾ ಪಕ್ಷದಿಂದ ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರವನ್ನು ಮಂಗಳವಾರ ನಡೆದ ಕರ್ನಾಟಕ ಜನತಾ ಪಕ್ಷದ ತುರ್ತು ಕಾರ್ಯಕಾರಿಣಿ ಸಭೆಯಲ್ಲಿ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪದ್ಮನಾಭ ಪ್ರಸನ್ನ ಅವರು ಪತ್ರ ಬರೆದಿದ್ದಾರೆ. ಕೆಜೆಪಿ ಅಧ್ಯಕ್ಷರಾಗಿ ಪದ್ಮನಾಭ ಪ್ರಸನ್ನ ಅವರೇ ಮುಂದುವರೆಯಲಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಅವರ ಉಚ್ಚಾಟನೆ ಬಗ್ಗೆ ಡಿ.20 ರಂದು ನಿರ್ಧಾರ ಕೈಗೊಳ್ಳಲಾಗಿದೆ. ಈ ಬೆಳವಣಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಧನಂಜಯ್ ಕುಮಾರ್ ಅವರಿಗೆ ಅಂದೇ ತಿಳಿದಿತ್ತು ಹಾಗೂ ಅವರು ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ. ವರದಿ ಅಪೂರ್ಣ.. ಇನ್ನಷ್ಟು ನಿರೀಕ್ಷಿಸಿ

KJP ಅಧ್ಯಕ್ಷರ ಗೊಂದಲ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು KJP ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಪ್ರಕ್ರಿಯೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತಕರಾರು ತೆಗೆದಿತ್ತು. ಕರ್ನಾಟಕ ಜನತಾ ಪಕ್ಷದ ನಿಜವಾದ ಅಧ್ಯಕ್ಷ ಯಾರು ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿತ್ತು.

ಡಿ.9ರಂದು ಹಾವೇರಿಯಲ್ಲಿ ಕರ್ನಾಟಕ ಜನತಾ ಪಕ್ಷ ಹೊಸ ಪ್ರಾದೇಶಿಕ ಪಕ್ಷವಾಗಿ ಘೋಷಣೆಯಾಗುವುದಕ್ಕೂ ಮುನ್ನ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು. ನಂತರ ಯಡಿಯೂರಪ್ಪ ಅಧ್ಯಕ್ಷರಾಗುವ ಮುನ್ನ ವೇಣೂರು ಧನಂಜಯ ಕುಮಾರ್ ಆಳ್ವಾ ಕೆಲಕಾಲ ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದರು.

ಪಕ್ಷದ ಅಧ್ಯಕ್ಷರ ಬದಲಾವಣೆಯ ಬಗ್ಗೆ ಈವರೆಗೂ ನಮಗೆ ಮಾಹಿತಿ ಬಂದಿಲ್ಲ. ಅಧ್ಯಕ್ಷರ ಬದಲಾವಣೆ ಸಂಬಂಧ ನಡೆದ ಸಭೆಯ ವಿವರ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿತ್ತು.

ಕೆಜೆಪಿಯಿಂದ ಯಡಿಯೂರಪ್ಪ ಉಚ್ಚಾಟನೆ

ಕೆಜೆಪಿಯಿಂದ ಯಡಿಯೂರಪ್ಪ ಉಚ್ಚಾಟನೆ

ಡಿ.9ರಂದು ಹಾವೇರಿಯಲ್ಲಿ ಕರ್ನಾಟಕ ಜನತಾ ಪಕ್ಷ ಹೊಸ ಪ್ರಾದೇಶಿಕ ಪಕ್ಷವಾಗಿ ಘೋಷಣೆಯಾಗುವುದಕ್ಕೂ ಮುನ್ನ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು. ನಂತರ ಯಡಿಯೂರಪ್ಪ ಅಧ್ಯಕ್ಷರಾಗುವ ಮುನ್ನ ವೇಣೂರು ಧನಂಜಯ ಕುಮಾರ್ ಆಳ್ವಾ ಕೆಲಕಾಲ ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದರು.

ಪಕ್ಷದ ಅಧ್ಯಕ್ಷರ ಬದಲಾವಣೆಯ ಬಗ್ಗೆ ಈವರೆಗೂ ನಮಗೆ ಮಾಹಿತಿ ಬಂದಿಲ್ಲ. ಅಧ್ಯಕ್ಷರ ಬದಲಾವಣೆ ಸಂಬಂಧ ನಡೆದ ಸಭೆಯ ವಿವರ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿತ್ತು.
ಧನಂಜಯ್ ಕುಮಾರ್ ಪ್ರತಿಕ್ರಿಯೆ

ಧನಂಜಯ್ ಕುಮಾರ್ ಪ್ರತಿಕ್ರಿಯೆ

ಪದ್ಮನಾಭ ಪ್ರಸನ್ನ ಒಬ್ಬ ಹುಚ್ಚ. ಯಡಿಯೂರಪ್ಪ ಅವರ ಉಚ್ಚಾಟನೆ ಬಗ್ಗೆ ತಕ್ಷಣಕ್ಕೆ ಉತ್ತರಿಸಲಾರೆ ಎಂದು ಕೆಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದೇನು ಮಾಡುವುದು

ಮುಂದೇನು ಮಾಡುವುದು

ಇತ್ತ ಯಡಿಯೂರಪ್ಪ ಅವರ ಆಪ್ತೆ ಶೋಭಾ ಕರಂದ್ಲಾಜೆ ಸೇರಿದಂತೆ 5 ಶಾಸಕರು ಮತ್ತೊಮ್ಮೆ ಹೊಸದಾಗಿ ರಾಜೀನಾಮೆ ಪತ್ರವನ್ನು ಸ್ಪೀಕರ್ ಬೋಪಯ್ಯ ಅವರಿಗೆ ಸಲ್ಲಿಸಿದ್ದಾರೆ. ಕೆಜೆಪಿಯಿಂದ ಯಡಿಯೂರಪ್ಪ ಉಚ್ಚಾಟನೆಯಾಗಿರುವ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.

ಯಡಿಯೂರಪ್ಪ ಈಗ ಅಲ್ಲೂ ಇಲ್ಲ..ಇಲ್ಲೂ ಇಲ್ಲ

ಯಡಿಯೂರಪ್ಪ ಈಗ ಅಲ್ಲೂ ಇಲ್ಲ..ಇಲ್ಲೂ ಇಲ್ಲ

13 ಶಾಸಕರನ್ನು ಛೂ ಬಿಟ್ಟು ನಾಟಕ ಆರಂಭಿಸಿದ್ದ ಯಡಿಯೂರಪ್ಪ ಅವರಿಗೆ ಕೆಜೆಪಿಯಿಂದ ಗೇಟ್ ಪಾಸ್ ಸಿಗಲು ಮುಖ್ಯ ಕಾರಣ, ಸಂಸ್ಥಾಪಕ ಪದ್ಮನಾಭ ಪ್ರಸನ್ನ ಜೊತೆಗಿನ ಹಣಕಾಸು ವ್ಯವಹಾರದಲ್ಲಿ ವ್ಯತ್ಯಾಸ ಎನ್ನಲಾಗಿದೆ.

ನೊಂದವರ ನುಡಿ

ನೊಂದವರ ನುಡಿ

ನಮಗೆ ಆದ ಅನುಭವ ಅವರಿಗೂ ಆಗಲಿ. ಯಡಿಯೂರಪ್ಪ ಅವರು ಆರೇಳು ತಿಂಗಳು ರಾಜಕೀಯ ಇಲ್ಲದೆ ಬದುಕಲಿ ನೋಡೋಣ.. ಸುಪ್ರೀಂಕೋರ್ಟ್ ಮೆಟ್ಟಿಲೇರಿ ನಾವು ಪಟ್ಟ ಪಾಡು ಏನು ಎಂಬುದು ನಮಗೆ ಗೊತ್ತು. ಮಾಡಿದ್ದುಣ್ಣೋ ಮಾರಾಯ: ಶಾಸಕ ಬಾಲಚಂದ್ರ ಜಾರಕಿಹೊಳಿ

ಕೆಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಶೋಭಾ ಅವರ ಹುಕುಂ ಅಷ್ಟೇ ನಡೆಯುತ್ತದೆ. ಟಿಕೆಟ್ ಹಂಚಿಕೆ ಇರಲಿ, ಕೆಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಕೆಜೆಪಿ ತೊರೆದು ಬಿಎಸ್ ಆರ್ ಕಾಂಗ್ರೆಸ್ ಸೇರಿದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಹೇಳಿಕೆ

English summary
The founder and title holder of Karnataka Janath Party (KJP) Padmanabha Prasanna Kumar expels BS Yeddyurappa from the party. Writes letter to CEC to this effect. The founder's application to CEC for transfer of title and allotment of election symbol (Farmer or Bicycle) was pending for disburse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X