ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿಗೆ ಹೊರಟ್ರಾ, ಹತ್ತಿ ಸ್ಪೈಸ್ ಜೆಟ್

By Mahesh
|
Google Oneindia Kannada News

SpiceJet to connect Mysore and Pondicherry with Mumbai, Delhi
ಮೈಸೂರು, ಜ.14: ಕಡಿಮೆ ದರದ ವಿಮಾನಯಾನ ಕ್ಷೇತ್ರದಲ್ಲಿ ಎರಡನೇ ಅತಿದೊಡ್ಡ ಸಂಸ್ಥೆ ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗೆ ಸಂಕ್ರಾಂತಿ ಕೊಡುಗೆ ನೀಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಉಕ್ಕಿನ್ಮ ಹಕ್ಕಿಗಳು ಹಾರಾಟ ಆರಂಭಿಸಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಕಳೆದ ನ.22ರಿಂದ ಮೊದಲ ವಿಮಾನ ಹಾರಾಟ ಆರಂಭ ಮಾಡಿದ್ದ ಸ್ಪೈಸ್ ಜೆಟ್ ಈಗ ಮೈಸೂರಿನಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ನಿಂದ ತೆರವಾಗಿದ್ದ ಜಾಗದಲ್ಲಿ ಬಂದು ನೆಲೆಸಿದೆ.

ಬಜೆಟ್ ಏರ್ ಲೈನ್ಸ್ ಸ್ಪೈಸ್ ಜೆಟ್ ಮೈಸೂರು ಹಾಗೂ ಪುದುಚೇರಿ(ಪಾಂಡಿಚೇರಿ) ಜೊತೆ ದೆಹಲಿ, ಮುಂಬೈ ಹಾಗೂ ಬೆಂಗಳೂರು ನಗರವನ್ನು ಸಂಪರ್ಕಿಸುವ ವಿಮಾನಯಾನ ಆರಂಭಿಸುತ್ತಿದೆ.
ಬೆಳಗಾವಿ ಮಾರ್ಗದಲ್ಲಿ ಬಳಸಿದ Bombardier Dash Q400 ಏರ್ ಕ್ರಾಫ್ಟ್ ಗಳನ್ನು ಮೈಸೂರು ಮಾರ್ಗದಲ್ಲೂ ಬಿಡಲಾಗಿದೆ.

ಬೆಂಗಳೂರು ಮೈಸೂರು ನಡುವೆ ವಾರದಲ್ಲಿ ಮೂರು ಸರ್ತಿ ವಿಮಾನ ಹಾರಾಟ ನಡೆಸಲಿದೆ ವೇಳಾಪಟ್ಟಿ ಹೀಗಿದೆ:
SG3305 BLR - MYQ ~ 1220 - 1310 ~ Q400 135
SG3306 MYQ- BLR ~ 1330 - 1420 ~ Q400 135

BLR: ಬೆಂಗಳೂರು
MYQ: ಮೈಸೂರು

ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈ ಹಾಗೂ ಪುದುಚೇರಿಯಿಂದ ಬೆಂಗಳೂರಿಗೆ ನೇರ ವಿಮಾನಯಾನವನ್ನು ಸ್ಪೈಸ್ ಜೆಟ್ ಸಾಧ್ಯಗೊಳಿಸಿದೆ. ಇದಲ್ಲದೆ ಮೈಸೂರಿನಿಂದ ಮುಂಬೈ ಹಾಗೂ ದೆಹಲಿ ಮತ್ತು ಪುದುಚೇರಿಯಿಂದ ಮುಂಬೈ, ದೆಹಲಿ, ಹೈದರಾಬಾದ್ ಹಾಗೂ ಕೊಲ್ಕತ್ತಾಗೆ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ.

ಈ ವಿಮಾನಯಾನಕ್ಕೆ ಬುಕ್ಕಿಂಗ್ ಆರಂಭಗೊಂಡಿದ್ದು, ವಾಣಿಜ್ಯ ಹಾರಾಟ ಮೈಸೂರಿನಿಂದ ಜ.14ರಿಂದ ಆರಂಭಗೊಳ್ಳಲಿದೆ. ಪುದುಚೇರಿಯಿಂದ ಜ.17 ರಂದು ಆರಂಭವಾಗಲಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿ ನಡುವೆ ಸೆಪ್ಟೆಂಬರ್ 27,2012 ರಿಂದ ವಿಮಾನ ಹಾರಾಟ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆ ಹೇಳಿದೆ.

ಸೆಪ್ಟೆಂಬರ್ 30, 2011ರಿಂದ ಮಂಗಳೂರು ಮತ್ತು ಹೈದರಾಬಾದ್ ನಡುವೆ ಸ್ಪೈಸ್ ಜೆಟ್ ಏರ್ ಲೈನ್ಸ್ ದೈನಂದಿನ ಹಾರಾಟವನ್ನು ಆರಂಭವಾದ ಬೆನ್ನಲ್ಲೇ ಹುಬ್ಬಳ್ಳಿ-ಬೆಂಗಳೂರು ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಕರ್ನಾಟಕದಲ್ಲಿ ತನ್ನ ಐದನೇ ವಿಮಾನ ನೆಲೆಯನ್ನು ಸ್ಪೈಸ್ ಜೆಟ್ ಕಂಡುಕೊಂಡಿದೆ.ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ನಂತರ ಮೈಸೂರಿನಲ್ಲಿ ಸ್ಪೈಸ್ ಜೆಟ್ ಹಾರಾಟ ಆರಂಭಗೊಂಡಿದೆ.

ಬೆಂಗಳೂರು ಬೆಳಗಾವಿ ದೈನಂದಿನ ವಿಮಾನ SG3301 ಬೆಂಗಳೂರು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಳಗ್ಗೆ 7.40 ಗಂಟೆಗೆ ಬಿಟ್ಟು ಬೆಳಗಾವಿಯನ್ನು 8. 30 ಗಂಟೆಗೆ ತಲುಪಲಿದೆ.

ಬೆಳಗಾವಿಯನ್ನು 8.50 ಕ್ಕೆ ಬಿಡುವ ಇನ್ನೊಂದು ವಿಮಾನ ಬೆಂಗಳೂರನ್ನು ಬೆಳಗ್ಗೆ 9.35 ಕ್ಕೆ ತಲುಪಲಿದೆ ಎಂದು ಸಂಸ್ಥೆ ಹೇಳಿದೆ. ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ Bombardier Q400 ಏರ್ ಕ್ರಾಫ್ಟ್ ಗಳನ್ನು ಈ ಮಾರ್ಗದಲ್ಲಿ ಬಳಸಲಿದೆ.

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಏರ್ ಕ್ರಾಫ್ಟ್ ಸುಮಾರು 78 ಪ್ರಯಾಣಿಕರನ್ನು ಒಮ್ಮೆಗೆ ಕರೆದೊಯ್ಯಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ. (ಪಿಟಿಐ)

English summary
Budget carrier SpiceJet will connect Mysore and Pondicherry with Delhi, Mumbai and Bangalore from mid of this month(Jan, 2013). thrice weekly Bangalore - Mysore services using Bombardier Dash 8 Q400 turboprops
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X