ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಕೈ ಜೋಡಿಸಿದರೆ ಚಪ್ಪಾಳೆ, ರೇಪ್ ಬಗ್ಗೆ ಬಾಪು

By Mahesh
|
Google Oneindia Kannada News

Asaram Bapu shocker on Delhi victim,
ನವದೆಹಲಿ, ಜ.7: ದೆಹಲಿಯ ಸಾಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟ ಯುವತಿಗೆ ನ್ಯಾಯ ದೊರಕಿಸಿಕೊಡಲು ಇಡೀ ದೇಶ ಹೋರಾಟಕ್ಕಿಳಿದಿದೆ. ಇನ್ನೊಂದು ಕಡೆ, ಹಿಂದೂವಾದಿಗಳು, ರಾಜಕಾರಣಿಗಳು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಾ ಸುದ್ದಿಗ್ರಾಸವಾಗುತ್ತಿದ್ದಾರೆ.

ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು ಮದುವೆ ಕಾಂಟ್ರ್ಯಾಕ್ಟ್ ಬಗ್ಗೆ ಪ್ರವಚನ ನೀಡಿದ ಮೇಲೆ ಸ್ವಯಂಸ್ವಯಂ ಘೋಷಿತ ದೇವಮಾನವ ಅಸಾರಮ್ ಬಾಪು ಅವರು ದೆಹಲಿ ಅತ್ಯಾಚಾರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಖಾಸಗಿ ಬಸ್ ನಲ್ಲಿ 23 ವರ್ಷದ ಯುವತಿ ಅತ್ಯಾಚಾರಕ್ಕೊಳಗಾದ ಘಟನೆ ದೇಶದೆಲ್ಲೆಡೆ ಸುದ್ದಿ ಮಾಡಿದೆ. ನನ್ನ ಪ್ರಕಾರ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪುರುಷರಷ್ಟೇ ಅತ್ಯಾಚಾರಕ್ಕೊಳಗಾದ ಯುವತಿಯ ಪಾತ್ರವೂ ಇದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಆಸರಮ್ ಬಾಪು ನೀಡಿದ್ದಾರೆ.

ಆಕೆ ಅವರನ್ನು ಅಣ್ಣಾ ಎಂದು ಕರೆಯಬಹುದಿತ್ತು. ಅತ್ಯಾಚಾರ ಎಸಗದಂತೆ ತಡೆಯಬಹುದಿತ್ತು. ಅವರ ಮನಸ್ಸು ಕೆರಳುವಂತೆ ಮಾಡಿದ್ದರಿಂದಲೇ ಅತ್ಯಾಚಾರ ನಡೆದಿದೆ. ಇದ್ದಕ್ಕಿದ್ದಂತೆ ಯುವತಿ ಮೇಲೆ ಏಕೆ ಮುಗಿಬೀಳುತ್ತಾರೆ ಎಂದು ಬಾಪು ಪ್ರಶ್ನಿಸಿದ್ದಾರೆ.

ಸರಸ್ವತಿ ಮಂತ್ರ ಜಪಿಸಬೇಕಿತ್ತು. ಬಾಯ್ ಫ್ರೆಂಡ್ ಜೊತೆ ಮೂವಿ ನೋಡೋಕೆ ಏಕೆ ಹೋಗಬೇಕಿತ್ತು. ಖಾಸಗಿ ಬಸ್ ನಲ್ಲಿ ಏಕೆ ಹತ್ತಿದರು ಎಂದು ಬಾಪು ಪ್ರಶ್ನಿಸಿದ್ದಾರೆ.

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಸಾಕೇತ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಈ ರೀತಿ ಬಾಪು ಹೇಳಿಕೆ ನೀಡಿರುವುದು ನ್ಯಾಯಾಂಗ ನಿಂದನೆ ಆಗುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಬಾಪು ವಿರುದ್ಧ ತಿರುಗಿ ಬಿದ್ದ ಟ್ವೀಟ್ ಗಳು:
Chetan Bhagat ‏@chetan_bhagat : According to Asaram Bapu logic, there can be no underworld crimes in Mumbai. After all, here everybody calls them bhai.

Sagarika Ghose ‏@sagarikaghose : So in a 21st cent democracy, a woman (equal in eyes of law as men) who boards a bus at 9.30pm is guilty of risking rape? #Asaram Bapu

Rituparna Chatterjee (‏@MasalaBai) : "Victim should have called culprits brothers and begged before them to stop. Can one hand clap?"- Asaram Bapu | It can slap. Shall I show u?

Archana Sharma ‏(@archie229) : We are ashamed to have such Babas.

RadhikaBudhwar ‏(@RadhikaBudhwar) : Asaramji,if you step out of your gilded pampered unreal life you might stop sounding like you need a BIG doseof reality.

Gappistan Radio ‏(@GappistanRadio) : Asaram bapu proving that your spiritual leaders are dumber than your politicians.

Ramesh Srivats ‏@rameshsrivats :Am clasping my hands together and begging Asaram Bapu - "Brother. Please stop."

Mr. Tippler ‏(@MrTippler) : Bapu's (Mahatma Gandhi) third monkey removed hands from his mouth, evolved into a man, and became a religious preacher- Asaram Bapu !!

Riitu Chugh ‏(@junoesque) : Asaram Bapu's Wikipedia page hijacked by chamchas. Being edited to remove any links to his statement. Any suggestions ?

ಬಿಜೆಪಿ ಖಂಡನೆ: ಕ್ಷಮಿಸಿ! ಬಾಪು ಅವರ ಹೇಳಿಕೆ ಖಂಡನೀಯ ಎಂದಿಗೂ ಸ್ವೀಕರಿಸಲು ಸಾಧ್ಯವಿಲ್ಲ. ತಮ್ಮ ಹೇಳಿಕೆಯನ್ನು ಅವರು ಹಿಂಪಡೆದರೆ ಒಳ್ಳೆಯದು ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

English summary
Spiritual Guru Asaram Bapu has landed himself in a controversy over his remark that the December 16 Delhi gang rape victim is as guilty as those responsible for the barbaric sexual assault on her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X