ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಸ್ಟ್ ಹೌಸ್ ಬಂದ್ ಮಾಡಲು ಅರಣ್ಯ ಸಚಿವ ಆದೇಶ

By Mahesh
|
Google Oneindia Kannada News

CP Yogeshwar
ಬೆಂಗಳೂರು, ಅ.22: ಸೋಮವಾರ ಅ.22, 2012 ಅರಣ್ಯ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಜೈ ಎನ್ನುವ ದಿನ. ಪ್ರಪ್ರಥಮ ಬಾರಿಗೆ ಯೋಗೇಶ್ವರ್ ಅವರು ಪ್ರಾಣಿ ಪರ, ರೈತ ಪರ ನಿರ್ಧಾರಗಳನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. ಸುಪ್ರೀಂಕೋರ್ಟ್ ಓಕೆ ಎಂದಿದ್ದ ಟೈಗರ್ ಸಫಾರಿಗೆ ಬ್ರೇಕ್ ಹಾಕಿದ್ದಾರೆ. ಇನ್ನೊಂದೆಡೆ ಮಂಡ್ಯ ರೈತರ ಹಿತ ಕಾಯದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದಾರೆ.

ರಾಜ್ಯದ ಅಭಯಾರಣ್ಯಗಳಲ್ಲಿರುವ ಸರ್ಕಾರಿ ಅತಿಥಿಗೃಹಗಳನ್ನು ಮುಚ್ಚಲು ಅರಣ್ಯ ಸಚಿವ ಆದೇಶಿಸಿದ್ದಾರೆ. ಅತಿಥಿಗೃಹಗಳಿದ್ದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಯೋಗೇಶ್ವರ್ ಹೇಳಿದ್ದಾರೆ.

ಅರಣ್ಯ ಇಲಾಖೆ ನಿರ್ಮಿಸಿರುವ ಎಲ್ಲಾ ಅತಿಥಿಗೃಹಗಳನ್ನು ಮುಚ್ಚಲಾಗುವುದು. ಸಿಬ್ಬಂದಿ ಮತ್ತು ಅಧಿಕಾರಿಗಳ ಅನುಕೂಲಕ್ಕಾಗಿ ಅರಣ್ಯದ ಹೊರಗಡೆ ಕಟ್ಟಡಗಳನ್ನು ನಿರ್ಮಿಸಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅನಧಿಕೃತ ರೆಸಾರ್ಟ್ ಎತ್ತಂಗಡಿ: ಸುಪ್ರೀಂಕೋರ್ಟ್ ಆದೇಶದಂತೆ ರಕ್ಷಿತಾರಣ್ಯಗಳಲ್ಲಿ ಯಾವುದೇ ಖಾಸಗಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲ. ಅರಣ್ಯ ಪ್ರದೇಶದ ಸುತ್ತಮುತ್ತ ಕೂಡಾ ಅನಧಿಕೃತ ರೆಸಾರ್ಟ್ ಗಳು ತಲೆ ಎತ್ತಿದೆ. ಇದರಿಂದ ವನ್ಯಜೀವಿಗಳ ಸ್ವತಂತ್ರ ಬದುಕಿಗೆ ಅಡ್ಡಿಯಾಗುತ್ತಿದೆ. ಎಲ್ಲಾ ರೆಸಾರ್ಟ್ ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯೋಗೇಶ್ವರ್ ಹೇಳಿದರು.

ಜಂಗಲ್ ಲಾಡ್ಜಸ್ ಮತ್ತಿತರ ಖಾಸಗಿ ಸಂಸ್ಥೆಗಳು ಅರಣ್ಯ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿ ಆದಾಯಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸೂಚಿಸಲಾಗುವುದು ಎಂದಿದ್ದಾರೆ.

ವಿದೇಶಿ ಪ್ರವಾಸಿಗರನ್ನೇ ಮೂಲ ಬಂಡವಾಳವನ್ನಾಗಿಸಿಕೊಂಡಿದ್ದ ಅರಣ್ಯ ಪ್ರದೇಶ ಬಳಿಯ ರೆಸಾರ್ಟ್ ಗಳು ಸಚಿವರ ಆದೇಶದಿಂದ ಚಿಂತೆಗೀಡಾಗಿದೆ. ಥಾಮಸ್ ಕುಕ್ ಸಂಸ್ಥೆ ಈಗಾಗಲೇ ಟೈಗರ್ ಸಫಾರಿ ತಡವಾಗಿರುವುದರಿಂದ ಶೇ 10 ರಷ್ಟು ಆದಾಯ ಖೋತಾ ಆಗಿದೆ ಎಂದಿದೆ.

ಭಾರತದಲ್ಲಿ ಹುಲಿ ಯೋಜನೆ ಕಠಿಣ ಕ್ರಮದ ಪರಿಣಾಮ ಶ್ರೀಲಂಕಾದ ಯಾಲಾ ನ್ಯಾಷನಲ್ ಪಾರ್ಕ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ ಅಭಯಾರಣ್ಯ, ದಾಂಡೇಲಿ, ಬಿಳಿಗಿರಿ ರಂಗನಾಥ ಬೆಟ್ಟ, ಕೊಳ್ಳೇಗಾಲ ಅರಣ್ಯ ಪ್ರದೇಶದಲ್ಲಿ ಹುಲಿ ಸಂರಕ್ಷಣೆ ಮಾಡಲಾಗುತ್ತಿದೆ. ಸುಮಾರು 200 ಕ್ಕೂ ಅಧಿಕ ಹುಲಿಗಳನ್ನು ಅದೃಷ್ಟವಿದ್ದವರು ಕಾಣಬಹುದಾಗಿದೆ.

ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ ಕೋಟಿಗಟ್ಟಲೆ ಹಣ ತಂದು ಕೊಡುವ ಅರಣ್ಯ ಪ್ರವಾಸೋದ್ಯಮಕ್ಕೆ ಬ್ರೇಕ್ ಹಾಕಿದರೆ ಪ್ರಾಣಿಗಳಿಗೆ ಒಳಿತಾದರೂ ಪ್ರವಾಸೋದ್ಯಮಕ್ಕೆ ನಷ್ಟ ಎನ್ನಲಾಗಿದೆ.

English summary
Forest Minister CP Yogeshwar has ordred to close all government guest houses in National parks in Karnataka. Supreme Court recently allowed Tiger Safari but, booking stopped in Bandipura, Nagarahole, Bhadra reserve Forests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X