ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಮೌಲ್ಯ ಇಲ್ದಿರುವುದೇ ಸಮಸ್ಯೆಗೆ ಕಾರಣ: ಶೋಭಾ

By Srinath
|
Google Oneindia Kannada News

lack-of-values-in-education-creating-problems-shobha
ಮಂಗಳೂರು, ಸೆ. 27: 'ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮತ್ತು ಮಹಾತ್ಮ ಗಾಂಧಿಯಂತಹ ಮಹಾನುಭಾವರ ಬೊಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಮತಾಂಧತೆ/ ಭಯೋತ್ಪಾದನೆಗೆ ಜಾಗವೇ ಇರುತ್ತಿರಲಿಲ್ಲ' ಎಂದು ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಇಲ್ಲಿನ ರಾಮಕೃಷ್ಣ ಮಠದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 'ದರ್ಶನ' ಎಂಬ ವಿಚಾರಗೋಷ್ಠಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಮೂಹ ಅಪಾರವಾಗಿ ಬುದ್ಧಿವಂತರಾಗಿರಬೇಕು. ಧರ್ಮ ಮತ್ತು ರಾಷ್ಟ್ರಗಳನ್ನು ಮೀರಿ ಸ್ವಾಮಿ ವಿವೇಕಾನಂದರ ಬೋಧನೆ, ಜೀವನಗಾಥೆಯನ್ನು ಅಳವಡಿಸಿಕೊಳ್ಳಬೇಕು.

'ಇತ್ತೀಚೆಗೆ ಭಯೋತ್ಪಾದನೆಯಂತಹ ಕುಕೃತ್ಯದಲ್ಲಿ ಭಾಗಿಯಾದ ಆರೋಪಗಳ ಮೇಲೆ ಸುಶಿಕ್ಷಿತ ಯುವಕರು ಬಂಧನಕ್ಕೊಳಗಾಗುತ್ತಿರುವುದು ಆತಂಕದ ವಿಚಾರ. ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗುತ್ತಾನೆ ಅಂದರೆ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ನೋಡಿ.

ಇವರಲ್ಲಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಕಳಕಳಿ ಇಲ್ಲದಿರುವುದೇ ಇದಕ್ಕೆಲ್ಲ ಕಾರಣವಾಗಿದೆ ಅನಿಸುತ್ತಿದೆ. ಇವರನ್ನು ವೋಟ್ ಬ್ಯಾಂಕ್ ಗಾಗಿ ರಾಜಕಾರಣಿಗಳು ಆಶ್ರಿಯಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ' ಎಂದು ಸಚಿವೆ ಶೋಭಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೊನ್ನೆ ನಾನು ಮಾನಸ ಸರೋವರ ಯಾತ್ರೆ ಮಾಡಿದ್ದೆ. ಆಗ ಗೊತ್ತಾಯ್ತು ಕೈಲಾಸ ಮತ್ತು ಮಾನಸ ಸರೋವರ ನಮ್ಮ ಕೈತಪ್ಪಿವೆ ಅಂತ. ಅದೀಗ ಚೀನಾದ ಆಡಳಿತಲ್ಲಿದೆ. ನಾನೇ ಚೀನಾ ಸರಕಾರಕ್ಕೆ 55 ಸಾವಿರ ರೂಪಾಯಿ ನೀಡಿ ತೀರ್ಥಯಾತ್ರೆ ಮುಗಿಸಿಬಂದೆ. ಮುಂದೆ ಕಾಶ್ಮೀರ, ಆನಂತರ ಅಸ್ಸಾಂ ಹೀಗೆ ಒಂದೊಂದೇ ನಮ್ಮ ಕೈತಪ್ಪಲಿವೆ ಎಂದು ಅವರು ವಿಷಾದಿಸಿದರು.

English summary
Energy minister Shobha Karandlaje has rued that lack of Values in Education creating problems today. Fanaticism and terrorism would not have prevailed if preaching of Swami Vivekananda, Ramakrishna Paramahamsa and Mahatma Gandhi has been strictly adopted in contemporary education said Shobha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X