ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ IFS ಅಧಿಕಾರಿ: ಪದವೀಧರೆಯಿಂದ ದೂರು

By Srinath
|
Google Oneindia Kannada News

ifs-man-dumps-hotel-mngt-graduate-after-wedding-chennai
ಚೆನ್ನೈ, ಸೆ.22: ನಿನ್ನೆ ಬಹುಪತ್ನೀವಲ್ಲಭ IRS ಅಧಿಕಾರಿ ಮಾಡಿಕೊಂಡ ಭಾನಗಡಿ ಓದಿದಿರಿ. ಇಂದು IFS ಅಧಿಕಾರಿ ಭಾನಗಡಿ ಕೇಳಿ. 'ನನ್ನನ್ನು ಮದುವೆಯಾದ ಕೆಲವೇ ಗಂಟೆಗಳಲ್ಲಿ ಈ IFS ಅಂದರೆ ಭಾರತೀಯ ವಿದೇಶಾಂಗ ಸೇವೆಯ ಯುವ ಅಧಿಕಾರಿ ನನ್ನ ಕೈಬಿಟ್ಟಿದ್ದಾನೆ' ಎಂದು ಮೋಸಹೋದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಹೀಗೆ ವಂಚನೆಯ ದೂರು ನೀಡಿರುವ ನವ ವಧು ಹೋಟೆಲ್ ಮ್ಯಾನೇಜ್ ಮೆಂಟ್ ಪದವೀಧರೆ. ಬುಧವಾರ ನಮ್ಮಿಬ್ಬರ ಮದುವೆಯಾದ ಎರಡು ಗಂಟೆಗಳಲ್ಲೇ ಆತ ಪರಾರಿಯಾಗಿದ್ದಾನೆ ಎಂದು ಬಾಧಿತ ಮಹಿಳೆ ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ವರ IRS ಅಧಿಕಾರಿಯ ಮನೆಯವರು ಮದುವೆಗೆ ಮುಂಚೆ ಸಾಕಷ್ಟು ಚಿನ್ನಾಭರಣ ಮತ್ತು 7 ಲಕ್ಷ ರೂ. ವರದಕ್ಷಿಣೆ ಪಡೆದಿದ್ದರು. ಆದರೆ, ವಿಮಾನ ಟಿಕೆಟ್‌ಗೆ ಮತ್ತೆ 4 ಲಕ್ಷ ರೂ. ನೀಡಬೇಕೆಂದು ಮದುವೆ ಮನೆಯಲ್ಲೇ ಬೇಡಿಕೆಯಿಟ್ಟರು. ಇದನ್ನು ತನ್ನ ಕುಟುಂಬ ತಿರಸ್ಕರಿಸಿದಾಗ ವರನ ಕುಟುಂಬದವರು ಮದುವೆ ಮನೆಯಿಂದ ಹೊರನಡೆದರು ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ.

ಮ್ಯಾರೇಜ್ ಬ್ಯೂರೋ ವೆಬ್ ಸೈಟ್ ಮೂಲಕ ಐಎಫ್‌ಎಸ್ ಅಧಿಕಾರಿಯ ತಂದೆ ನಮ್ಮನ್ನು ಸಂಪರ್ಕಿಸಿದ್ದರು. ತನ್ನ ಮಗ ಭಾರತೀಯ ರಾಯಭಾರ ಕಚೇರಿಯೊಂದರಲ್ಲಿ ಅಧಿಕಾರಿಯಾಗಿದ್ದಾನೆ ಎಂದೂ ಹೇಳಿಕೊಂಡಿದ್ದರು ಎಂದು ವಧು ದೂರಿನಲ್ಲಿ ತಿಳಿಸಿದ್ದಾರೆ.

ಇವರಿಬ್ಬರ ಮದುವೆ ನಿಶ್ಚಿತಾರ್ಥ ಜೂನ್ 12ರಂದು ನಡೆದಿತ್ತು. ಆದರೆ ಮದುವೆ ವಿಜೃಂಭಣೆಯಿಂದ ನಡೆಯಬೇಕೆಂದು ವರ IFS ಅಧಿಕಾರಿಯ ಮನೆಯವರು ಬೇಡಿಕೆಯಿಟ್ಟರು. ತಕ್ಷಣ ವಧುವಿನ ಅಪ್ಪ-ಅಮ್ಮ ಮದುವೆಯನ್ನು ರದ್ದುಪಡಿಸಿದರು. ಬಳಿಕ, ಆಕೆಯ ಮದುವೆಯನ್ನು ಒಬ್ಬ ವೈದ್ಯರೊಂದಿಗೆ ನಿಗದಿಪಡಿಸಿದರು. ಆದರೆ, ಐಎಫ್‌ಎಸ್ ಅಧಿಕಾರಿಯ ಮನೆಯವರು ಸದರಿ ವೈದ್ಯನ ಕುಟುಂಬಸ್ಥರಿಗೆ ಅನಾಮಿಕ ಕರೆಗಳನ್ನು ಮಾಡಿ ಆ ಮದುವೆಯನ್ನು ರದ್ದುಪಡಿಸುವಂತೆ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಮತ್ತೆ, ಐಎಫ್‌ಎಸ್ ಅಧಿಕಾರಿಯ ತಂದೆ ನನ್ನನ್ನು ಸಂಪರ್ಕಿಸಿದರು. ಮಾತುಕತೆ ಬಳಿಕ ಮದುವೆ ಬುಧವಾರ ನಿಗದಿಪಡಿಸಲಾಯಿತು' ಎಂದು ಹುಡುಗಿಯ ತಂದೆ ಹೇಳಿದ್ದಾರೆ.

English summary
A hotel management graduate on Thursday lodged a complaint saying an IFS officer ditched her on Wednesday within a couple of hours of their wedding in Chennai. The woman said the groom's family walked out of the hall when her family refused to pay Rs 4 lakh towards his flight charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X