ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HDFC ಬ್ಯಾಂಕಿನಿಂದ 'ಶಿಕ್ಷಕರ ಕ್ರೆಡಿಟ್ ಕಾರ್ಡ್' ಕೊಡುಗೆ

By Srinath
|
Google Oneindia Kannada News

HDFC Bank launches teachers credit card
ಮುಂಬೈ, ಸೆ. 6: ಶಿಕ್ಷಕರ ವರ್ಗ ಮೊದಲಿನಿಂದಲೂ ಆರ್ಥಿಕವಾಗಿ ಬಡತನವನ್ನೇ ಹಾಸುಹೊದ್ದಿದೆ. ಆದರೆ ಬೌದ್ಧಿಕವಾಗಿ ಶಿಕ್ಷಕರು ಎಂದೆಂದಿಗೂ ಒಂದು ಕೈ ಮೇಲು. ಇದು ಇಂದಿನ IT ಯುಗಕ್ಕೂ ಅನ್ವಯಿಸುತ್ತದೆ. ಆದರೆ ಇದೇ IT ಮಂದಿ ಶಿಕ್ಷಕರಿಗೆ ಆರ್ಥಿಕವಾಗಿ ನೆರವಾಗಲು ವಿಶೇಷ ಸಾಧನವೊಂದನ್ನು ಬಿಡುಗಡೆ ಮಾಡಿದೆ. ಅದುವೇ ಶಿಕ್ಷಕರ ಕ್ರೆಡಿಟ್ ಕಾರ್ಡ್ ಎಂಬ ಕಾಮಧೇನು.

ಹೌದು, ನಿನ್ನೆ ಶಿಕ್ಷಕರ ದಿನಾಚರಣೆ ಅಂಗವಾಗಿ ದೇಶದ ಎರಡನೆಯ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎನಿಸಿರುವ HDFC Bank, ಶಿಕ್ಷಕರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ವಿನೂತನ Teachers Credit Card ಅನ್ನು ಬಿಡುಗಡೆ ಮಾಡಿದೆ. ಅಂದಹಾಗೆ, ದೇಶದಲ್ಲಿ ಅತಿ ಹೆಚ್ಚು Credit Cardಗಳನ್ನು ಬಿಡುಗಡೆ ಮಾಡಿರುವುದು ಇದೇ HDFC Bank. HDFC ಬ್ಯಾಂಕ್ ಇದುವರೆಗೆ 560 ಲಕ್ಷ Credit Cardಗಳನ್ನು ವಿತರಿಸಿದೆ.

Teachers Credit Card ಪ್ರಧಾನ ಅಂಶಗಳೇನು?: ಈ ಕ್ರೆಡಿಟ್ ಕಾರ್ಡ್ ಹೊಂದಿರುವ ಶಿಕ್ಷಕರಿಗೆ ಬ್ಯಾಂಕ್ ಬಹುಸ್ತರದ reward points ಕೊಡಮಾಡುತ್ತದೆ- ವಾರಾಂತ್ಯ ಪಾಯಿಂಟ್ಸ್, ಪೆಟ್ರೋಲ್ ಮೇಲ್ತೆರಿಗೆ ಮನ್ನಾ ಸೌಲಭ್ಯ, ವಾರ್ಷಿಕವಾಗಿ 500 ಶಿಕ್ಷಕರ ವಿಶೇಷ ಕೊಡುಗೆ ಪಾಯಿಂಟ್ಸ್.

ದೇಶದಲ್ಲಿ ಶಿಕ್ಷಣ ಅತಿ ದೊಡ್ಡ ಸೇವಾ ಕ್ಷೇತ್ರವಾಗಿದೆ. ಒಟ್ಟು 450 ದಶಲಕ್ಷ ವಿದ್ಯಾರ್ಥಿ ಸಮೂಹವಿದೆ. ಇದು ವಾರ್ಷಿಕ ಶೇ. 10-15ರ ಪ್ರಮಾಣದಲ್ಲಿ ಹೆಚ್ಚಾಗಲಿದೆ. ದೌರ್ಭಾಗ್ಯವೆಂದರೆ ಇದರಲ್ಲಿ ಬಹಪಾಲು ಅಸಂಘಟಿತ ವಲಯದಲ್ಲಿದೆ.

2014ರ ವೇಳೆಗೆ 100 ಶತಕೋಟಿ ಹೂಡಿಕೆಯಾಗುವ ಅಂದಾಜಿದೆ. ಇನ್ನು ಮುಂದಿನ ವರ್ಷದ ವೇಳೆಗೆ ಶಿಕ್ಷಣ ಸಂಸ್ಥೆಗಳ ಹೂಡಿಕೆಯ ಗಾತ್ರ 2,500 ಶತಕೋಟಿ ರೂ. ಗೆ ತಲುಪಲಿದೆ. ಕೋಟ್ಯಂತರ ಮಕ್ಕಳ ಮಾರ್ಗದರ್ಶಕರಾಗಿರುವ ಲಕ್ಷಾಂತರ ಮಂದಿ ಶಿಕ್ಷಕರಿಗೆ ಬ್ಯಾಂಕ್ ವತಿಯಿಂದ ಇದೊಂದು ಚಿಕ್ಕ ಕೊಡುಗೆ ಎಂದು Teachers Credit Card ಬಿಡುಗೆಗೊಳಿಸಿದ ಬ್ಯಾಂಕ್ ಮುಖ್ಯಸ್ಥ ಪರಾಗ್ ರಾವ್ ಹೇಳಿದ್ದಾರೆ.

English summary
HDFC Bank launches teacher's credit card. HDFC Bank, India’s second largest private sector bank and the largest issuer of credit cards in the country, on Wednesday announced the launch of India’s first credit card for teachers-Teachers Credit Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X