ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನಾ ಹುದ್ದೆಗಳಿಗೆ ಪತ್ರಕರ್ತರು ಬೇಕಾಗಿದ್ದಾರೆ

By Mahesh
|
Google Oneindia Kannada News

Satish and Vijay Sankeshwar
ಬೆಂಗಳೂರು, ಜೂ.8: ಉದ್ಯಮಿ ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ 'ವಿಜಯವಾಣಿ' ಆರಂಭಿಸಿದ ಬೆನ್ನಲ್ಲೇ ಮತ್ತೊಂದು ದಿನಪತ್ರಿಕೆ ಆರಂಭಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ. ಹೊಸ ಪತ್ರಿಕೆಯ ಹೆಸರು 'ದಿಗ್ವಿಜಯ'.

ವಿಆರ್ ಎಲ್ ಮೀಡಿಯಾ ಲಿ ಕಡೆಯಿಂದ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ. ದಿ ಸಂಡೇ ಇಂಡಿಯನ್ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಸತೀಶ್ ಚಪ್ಪರಿಕೆ ಅವರು ವಿಆರ್ ಎಲ್ ಸಂಸ್ಥೆಯ ಹೊಸ ದಿನಪತ್ರಿಕೆಯ ಸಂಪಾದಕರಾಗಿರುತ್ತಾರೆ. ವಿಆರ್ ಎಲ್ ಚೇರ್ ಮನ್ ವಿಜಯ ಸಂಕೇಶ್ವರ ಅವರ ಈ ಸಾಹಸಕ್ಕೆ ಒನ್ ಇಂಡಿಯಾ ಸಂಸ್ಥೆ ಶುಭ ಹಾರೈಸುತ್ತದೆ.. ವಿಜಯವಾಣಿಯಲ್ಲಿ ಶುಕ್ರವಾರ(ಜೂ.8) ಬಂದಿರುವ ಪ್ರಕಟಣೆ ಇಂತಿದೆ:

'ಮಾಧ್ಯಮ ಲೋಕದಿಂದ ಕಳೆದ ಆರು ವರ್ಷಗಳಷ್ಟು ದೀರ್ಘಕಾಲ ದೂರವಿದ್ದ ನಾವು ಇತ್ತೀಚೆಗೆ ಕನ್ನಡಿಗರ ಮಡಿಲಿಗೆ 'ವಿಜಯವಾಣಿ' ದಿನ ಪತ್ರಿಕೆಯನ್ನು ಅರ್ಪಿಸಿದ್ದೇವೆ. ಈಗಾಗಲೇ ವಿಜಯವಾಣಿ ದಿನಪತ್ರಿಕೆಯ 6 ಆವೃತ್ತಿಗಳು ಆರಂಭವಾಗಲಿದೆ. ಸದ್ಯದಲ್ಲೇ ಚಿತ್ರದುರ್ಗ(ಜೂ.9), ಶಿವಮೊಗ್ಗ(ಜೂ.23) ಮತ್ತು ಗುಲ್ಬರ್ಗಾ(ಜೂ.30) ಆವೃತ್ತಿಗಳು ಪ್ರಕಟಗೊಳ್ಳಲಿದೆ.

ಕನ್ನಡ ಓದುಗರು ಮತ್ತು ಕರ್ನಾಟಕದ ಪ್ರಜ್ಞಾವಂತರ ಮಡಿಲಿಗೆ ರಾಷ್ಟ್ರೀಯ ಗುಣಮಟ್ಟದ, ವಿನೂತನವಾದ ಮತ್ತೊಂದು ಕನ್ನಡ ದಿನಪತ್ರಿಕೆಯನ್ನು ಅರ್ಪಿಸಲು ಈಗ ನಮ್ಮ ಸಂಸ್ಥೆ ಸಿದ್ಧವಾಗಿದೆ. ನಮ್ಮ ಸಂಸ್ಥೆಯಿಂದ ಸದ್ಯದಲ್ಲೇ ಪ್ರಕಟವಾಗಲಿರುವ ಎರಡನೇ ಕನ್ನಡ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿನ ಬೆಂಗಳೂರು ಕೇಂದ್ರ ಕಚೇರಿ ಹಾಗೂ ರಾಜ್ಯದ ವಿವಿಧ ಬ್ಯೂರೋಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

* ಸಹಾಯಕ ಸಂಪಾದಕರು: 10 ವರ್ಷ ಅನುಭವ/
* ಮುಖ್ಯ ವರದಿಗಾರರು/ ಮುಖ್ಯ ಉಪ ಸಂಪಾದಕರು: 6 ರಿಂದ 10 ವರ್ಷ ಅನುಭವ/ರಾಜಕೀಯ, ಸಾಮಾಜಿಕ, ಆರ್ಥಿಕ, ಔದ್ಯಮಿಕ ವಲಯದ ಬಗ್ಗೆ ಜ್ಞಾನ ಅಗತ್ಯ
* ಹಿರಿಯ ವರದಿಗಾರರು/ಹಿರಿಯ ಉಪ ಸಂಪಾದಕರು: 3 ರಿಂದ 6 ವರ್ಷ ಅನುಭವ
* ವರದಿಗಾರರು/ ಉಪ ಸಂಪಾದಕರು: 1 ರಿಂದ 3 ವರ್ಷ ಅನುಭವ
* ಟ್ರೈನಿ ವರದಿಗಾರರು/ ಟ್ರೈನಿ ಉಪ ಸಂಪಾದಕರು: ಸಮೂಹ ಸಂವಹನ ಪದವಿ/ ಸ್ನಾತಕೋತ್ತರ ಪದವಿ ಹೊಂದಿರುವ ಯುವಕ/ತಿಯರಿಗೆ ಆದ್ಯತೆ.

ಜೂ.30,2012ರೊಳಗೆ ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಕಳುಹಿಸಬಹುದು.

ಸತೀಶ್ ಚಪ್ಪರಿಕೆ, ಪ್ರಧಾನ ಸಂಪಾದಕರು
ಕಚೇರಿ ವಿಳಾಸ: 24, ಶ್ರೀಸಾಯಿರಾಮ್ ಟವರ್ಸ್, 1 ನೇ ಮಹಡಿ, 5ನೇ ಮುಖ್ಯರಸ್ತೆ
ಕೆಪಿ ಪುಟ್ಟಣ್ಣ ಚೆಟ್ಟಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018
ದೂ: (080) 2625 7451
ಇಮೇಲ್ : [email protected]

English summary
Businessmen Vijay Sankeshwara's VRL Media house is launching another Kannada Daily with Satish Chapparike as editor-in-chief. VRL already launched Vijyavani Kannada daily on April 1. Interested journalists can apply for the job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X