ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಏರಿಕೆ ಕಂಡ ಚಿನ್ನ, 10 ಗ್ರಾಂ.ಗೆ 30 ಸಾವಿರ

By Prasad
|
Google Oneindia Kannada News

Gold breaches 30,000 mark per 10 gram
ಮುಂಬೈ, ಜೂ. 2 : ದಿನದಿಂದ ದಿನಕ್ಕೆ ರುಪಾಯಿ ಬೆಲೆ ಕುಂದುತ್ತಿರುವ ಹಿನ್ನೆಲೆಯಲ್ಲಿ ಮತ್ತು ಆರ್ಥಿಕ ಬಿಕ್ಕಟ್ಟು ಮತ್ತೆ ಮರುಕಳಿಸುವ ಹೆದರಿಕೆ ಇರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತು ವ್ಯಾಪಾರಿಗಳು ಚಿನ್ನ ಕೊಳ್ಳಲು ತಮ್ಮ ಹಣವನ್ನೆಲ್ಲ ಸುರಿಯುತ್ತಿದ್ದು, 10 ಗ್ರಾಂ. ಚಿನ್ನದ ಬೆಲೆ 30 ಸಾವಿರ ದಾಟಿದ್ದು, ಹೊಸ ದಾಖಲೆ ಸೃಷ್ಟಿಸಿದೆ

ಒಂದೇ ದಿನದಲ್ಲಿ 960 ರು.ನಷ್ಟು ಅತ್ಯಧಿಕ ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 30,300 ರು. ತಲುಪಿದೆ. ಇದು ಕಳೆದ 10 ತಿಂಗಳಲ್ಲಿ ಅತ್ಯಧಿಕ ಬೆಲೆ. 99.9 ಮತ್ತು 99.5 ಪ್ಯೂರಿಟಿ ಇರುವ 10 ಗ್ರಾಂ. ಚಿನ್ನದ ಬೆಲೆ ಕ್ರಮವಾಗಿ 30,300 ರು. ಮತ್ತು 30,160 ರು. ಆಗಿದೆ. ಕಳೆದ ಹತ್ತು ತಿಂಗಳಲ್ಲಿ ಈ ಪರಿ ಏರಿಕೆ ಯಾವತ್ತೂ ಕಂಡಿರಲಿಲ್ಲ.

ಅಮೆರಿಕದಲ್ಲಿ ಭಯಾನಕವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಮತ್ತು ಯುರೋಪಿನಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಆಗುತ್ತಿದೆ. ಬಂಡವಾಳ ಹೂಡಿಕೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯೂ ಚಿನ್ನದ ಬೆಲೆಯ ಮೇಲೆ ಆಗುತ್ತಿದೆ. ಅಮೆರಿಕದ ನ್ಯೂಯಾರ್ಕಿನಲ್ಲಿ ಕೂಡ ಚಿನ್ನ ಛಟಂಗನೆ ಶೇ.4.24ರಷ್ಟು ಮೇಲಕ್ಕೆ ನೆಗೆದಿದೆ.

ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಭಾರತದಲ್ಲಿನ ಚಿನ್ನದ ಮಾರಾಟದ ಮೇಲೆಯೂ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ. ಚಿನ್ನದ ಬೆಲೆ ಮತ್ತಷ್ಟು ಏರುತ್ತದೆ ಎಂಬ ಧಾವಂತದಲ್ಲಿ ಈಗಲೇ ಮತ್ತಷ್ಟು ಕೊಳ್ಳಬೇಕೆಂಬ ಧಾವಂತ ಹೂಡಿಕೆದಾರರಲ್ಲಿ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನಿವಾರ ಪೇಟೆಯಲ್ಲಿ ವ್ಯಾಪಾರ ವಹಿವಾಟಿನ ವೇಗ ಹೆಚ್ಚಾಗಿದ್ದು, ಚಿನ್ನ ಫಳಫಳನೆ ಕಣ್ಣು ಕೋರೈಸಲು ಪ್ರಾರಂಭಿಸಿದೆ.

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲಿ ಕೂಡ ಭಾರೀ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ 650 ರು.ನಷ್ಟು ಏರಿಕೆ ಕಂಡುಬಂದಿದ್ದು, 1 ಕಿ.ಗ್ರಾಂ.ಗೆ 54,550 ರು. ತಲುಪಿದೆ. ನ್ಯೂಯಾರ್ಕಿನಲ್ಲಿ ಕೂಡ ಬೆಳ್ಳಿ ಬೆಲೆಯಲ್ಲಿ ಶೇ.3.5ರಷ್ಟು ಏರಿಕೆಯಾಗಿದೆ. ಇದು ಕಳೆದ ಎರಡು ವಾರಗಳಲ್ಲಿ ಚಿನ್ನ ಇಷ್ಟೊಂದು ಏರಿಕೆ ಕಂಡಿರಲಿಲ್ಲ. (ಪಿಟಿಐ)

English summary
Gold has breached 30 thousand mark to reach Rs. 30,300 mark per 10 gram as stockists and retailers hop on to buy the glittering yellow metal fearing downfall of currency at global level. Silver too has followed same path in India and abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X