ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ಸಿಇಒ ಮಾರ್ಕ್ ಮದುವೆ ಪರ್ಫೆಕ್ಟ್ ಟೈಮಿಂಗ್

By Mahesh
|
Google Oneindia Kannada News

Zuckerberg Chan Prenuptial Agreement
ಕ್ಯಾಲಿಫೋರ್ನಿಯಾ, ಮೇ 21: ಜಗತ್ತಿನೆಲ್ಲೆಡೆ ಇರುವ ಕೋಟಿ ಕೋಟಿ ಜನರ ಬೆಸುಗೆಯಾಗಿರುವ ಸಾಮಾಜಿಕ ಜಾಲ ತಾಣ 'ಫೇಸ್‌ಬುಕ್'ನ ಸಹ ಸ್ಥಾಪಕ, ಸಿಇಒ ಮಾರ್ಕ್ ಝುಕರ್‌ಬರ್ಗ್ ಮದುವೆಯ ಬಗ್ಗೆ ಸ್ಥಳೀಯ ವಕೀಲರು ಕೂಡಾ ಕೊಂಡಾಡಿದ್ದಾರೆ. ಮಾರ್ಕ್ ಝುಕರ್‌ಬರ್ಗ್ ಹಾಗೂ ಚಾನ್ ಮದುವೆ ಕಾನೂನಿನ ಪ್ರಕಾರ ಪರ್ಫೆಕ್ಟ್ ಟೈಮಿಂಗ್ ಎಂದು ತಜ್ಞರು ಹೇಳುತ್ತಾರೆ.

ಫೇಸ್ ಬುಕ್ ಐಪಿಒ ಬಿಡುಗಡೆ ಆದ ನಂತರ ಮದುವೆಯಾಗಿರುವ ಮಾರ್ಕ್, ಮುಂದೆ ಎಂದಾದರೂ ವಿವಾಹ ವಿಚ್ಛೇದನಗೊಂಡರೂ ತಮ್ಮ ಆಸ್ತಿ ಮೌಲ್ಯ ಉಳಿಸಿಕೊಳ್ಳುವ ಜಾಣತನದ ನಿರ್ಧಾರಕ್ಕೆ ವಕೀಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮದುವೆಗೂ ಮುನ್ನ ಎಲ್ಲಾ ಕ್ಯಾಲಿಫೋರ್ನಿಯಾ ಪ್ರಜೆಗಳಂತೆ ಮಾರ್ಕ್ ಹಾಗೂ ಆತನ ಗೆಳತಿ ಪ್ರಿಸಿಲ್ಲಾ ಚಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮುಂದೊಂದು ದಿನ ವಿಚ್ಛೇದನಗೊಂಡರೆ ಹೇಗೆ ಆಸ್ತಿಯನ್ನು ಹಂಚಿಕೊಳ್ಳಬೇಕು, ಫೇಸ್ ಬುಕ್ ಷೇರುಗಳ ಕತೆ ಏನು ಎಂಬುದನ್ನು ಈಗಲೇ ಮಾರ್ಕ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಮೂಲಕ ಹಲವು ಕೋಟಿ ಡಾಲರ್ ಬೆಲೆ ಬಾಳುವ ಫೇಸ್ ಬುಕ್ ಷೇರುಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ದೂರಾಲೋಚನೆ ಮಾರ್ಕ್ ಮಾಡಿದ್ದಾರೆ. ಆದರೆ, ಫೇಸ್ ಬುಕ್ ವಕ್ತಾರೆ ಈ ರೀತಿ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಕ್ಯಾಲಿಫೋರ್ನಿಯಾದ ವಕೀಲರ ಪ್ರಕಾರ ಚಾನ್ ಮಡಿಲಿಗೆ ಕನಿಷ್ಠವೆಂದರೂ 20 ಬಿಲಿಯನ್ ಡಾಲರ್ ಫೇಸ್ ಬುಕ್ ಷೇರುಗಳು ಬಂದು ಬೀಳಲಿದೆಯಂತೆ.

ದೀರ್ಘಕಾಲದ ಸ್ನೇಹಿತೆ ಪ್ರಿಸಿಲ್ಲಾ ಚಾನ್‌ರೊಂದಿಗೆ ಮೇ 19, 2012ರಂದು ವಿವಾಹವಾಗಿರುವುದಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 28ರ ಹರೆಯದ ಮಾರ್ಕ್ ಝುಕರ್‌ಬರ್ಗ್ Status ಅಪ್ಡೇಟ್ ಮಾಡಿದ್ದರು.

27ರ ಹರೆಯದ ಪ್ರಿಸಿಲ್ಲಾ ಚಾನ್ ಹಾಗೂ ಝುಕರ್‌ಬರ್ಗ್ ಮೊದಲ ಬಾರಿಗೆ ಹಾರ್ವರ್ಡ್‌ನಲ್ಲಿ ಭೇಟಿಯಾದ ಮೇಲೆ ಸುಮಾರು 9 ವರ್ಷಗಳಿಂದ 'ಡೇಟಿಂಗ್" ನಡೆಸಿದ್ದರು.

English summary
Mark Zuckerberg weds Priscilla Chan : California divorce lawyers said Facebook ceo Mark Zuckerberg had very clever wedding timing which can prevent the couple from future divorce battle. Zuckerberg and Priscilla Chan signed a prenuptial agreement with how to split assets including stock in case they part ways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X