ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ ಅಧ್ಯಯನ ಈಗ ಎಚ್ಡಿಕೆ ಜೆಡಿಎಸ್ ಸರದಿ

By Mahesh
|
Google Oneindia Kannada News

HD Kumaraswamy Karnataka Tour
ಬೆಂಗಳೂರು, ಎ.9: ರಾಜ್ಯದ ಬರಪೀಡಿತ ಪ್ರದೇಶಗಳ ಮೇಲೆ ರಾಜ್ಯದ ರಾಜಕೀಯ ಪಕ್ಷಗಳಿಗೆ ಬೇಸಿಗೆಯಲ್ಲಿ ಬಿಸಿಯಲ್ಲಿ ಅದೇನೋ ಪ್ರೀತಿ ಉಕ್ಕುತ್ತಿದೆ. ಬಿಜೆಪಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಬರ ಅಧ್ಯಯನ ನಂತರ ಈಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಬರ ಅಧ್ಯಯನ ಪ್ರವಾಸಕ್ಕೆ ಅಣಿಯಾಗುತ್ತಿದ್ದಾರೆ.

ರಾಜ್ಯದ 123 ಬರಪೀಡಿತ ತಾಲೂಕುಗಳು ಹಾಗೂ ಇತರೆ ಜಿಲ್ಲೆಗಳಲ್ಲಿ ವಾಸ್ತವ ಪರಿಸ್ಥಿತಿ ಅಧ್ಯಯನ ಪ್ರವಾಸ ಕೈಗೊಳ್ಳಲು ಶಾಸಕರ ನೇತೃತ್ವದಲ್ಲಿ 26 ತಂಡಗಳನ್ನು ರಚಿಸಲಾಗಿದೆ. ಏ. 16ರಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳೂರು, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಬರ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ತಂಡ ಭೇಟಿ ನೀಡಲಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಿವೆ. ಅಲ್ಲದೆ, ಪಕ್ಷದ ಮುಖಂಡರು ಭೇಟಿ ನೀಡಲಿರುವ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಹಾಗೂ ಛಾಯಾಚಿತ್ರಗಳನ್ನು ತೆಗೆಯಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

10 ದಿನಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇ ಗೌಡ ನೇತೃತ್ವದ ನಿಯೋಗವು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ವರದಿಯನ್ನು ಸಲ್ಲಿಸಿ, ಹೆಚ್ಚಿನ ನೆರವು ಒದಗಿಸುವಂತೆ
ಕೋರಲಾಗುವುದು ಎಂದು ಹೇಳಿದರು.

ಅದರೆ, ಕುಮಾರಸ್ವಾಮಿ ಅಧ್ಯಯನ ತಂಡಾ ಜೊತೆಗೆ ಹೋಗುತ್ತಾರೋ ಅಥವಾ ವರದಿ ಬಂದ ನಂತರ ಸಿಎಂ ಸದಾನಂದ ಗೌಡರು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಮಂಡಿಸುತ್ತಾರೋ ಕಾದು ನೋಡಬೇಕಿದೆ.

English summary
After BJP, Former CM BS Yeddyurappa now JDS state president HD Kumaraswamy announced that he will also tour Karnataka and study drought hit areas. JDS team consisting of 26 member will begin study tour from Apr.16 and visit 123 drought hit taluks in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X